ಚಾಮರಾಜನಗರ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸುನಿಲ್ ಬೋಸ್ ಕಣಕ್ಕಿಳಿಯಲಿದ್ದಾರೆ. ಇಂದು ( ಏಪ್ರಿಲ್ 3 ) ನಾಮಪತ್ರ ಸಲ್ಲಿಸಿರುವ ಸುನಿಲ್ ಬೋಸ್ ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದಾರೆ. ಇಂದು ಭಾರೀ ಗುಂಪಿನ ಜನ ಬೆಂಬಲದೊಂದಿಗೆ ನಾಮಪತ್ರವನ್ನೂ ಸಹ ಸುನಿಲ್ ಬೋಸ್ ಸಲ್ಲಿಸಿದ್ದಾರೆ.
ಒಂದೆಡೆ ಸುನಿಲ್ ಬೋಸ್ ಚುನಾವಣೆ ಸಿದ್ಧತೆಗಳಲ್ಲಿ ತೊಡಗಿ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಮತ್ತೊಂದೆಡೆ ನಗರದ ಬೀದಿ ಬೀದಿಗಳಲ್ಲಿ ʼಗೋ ಬ್ಯಾಕ್ ಸುನಿಲ್ ಬೋಸ್ʼ ಪೋಸ್ಟರ್‌ಗಳು ರಾರಾಜಿಸಿವೆ. ಹೌದು, ʼಮರಳು ಮಾಫಿಯಾ ದೊರೆಗೆ ಮರುಳು ಆಗ್ಬೇಡಿ, ಗೋಬ್ಯಾಕ್ ಸುನಿಲ್ ಬೋಸ್ʼ ಹಾಗೂ ʼಮರಳು ಮಾಫಿಯಾದ ಅನಭಿಷಿಕ್ತ ದೊರೆʼ ಎಂದು ಸುನಿಲ್ ಬೋಸ್ ಭಾವಚಿತ್ರದ ಮೇಲೆ ʼಎಕ್ಸ್ʼ ಚಿಹ್ನೆ ಬರೆದಿರುವ ಪೋಸ್ಟರ್‌ಗಳು ಚಾಮರಾಜನಗರದ ಹಲವು ರಸ್ತೆಯ ಗೋಡೆಗಳ ಮೇಲೆ ಕಂಡುಬಂದಿದೆ. ರಾತ್ರೋರಾತ್ರಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಮಡಿಕೇರಿಯಲ್ಲಿಯೇ ಕ್ಯಾನ್ಸರ್ ರೋಗಿಗಳಿಗೆ ಪ್ರಾಥಮಿಕ ಹಂತದ ಚಿಕಿತ್ಸೆ; ವೈದ್ಯರ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಮಡಿಕೇರಿ: ಕೊಡಗಿನಲ್ಲಿ ಡೇಕೇರ್ ಕಿಮೊಥೆರಪಿ ಕೇಂದ್ರ…
ಒಟ್ಟು ೧೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ; ಗುಂಡ್ಲುಪೇಟೆಯಲ್ಲೇ ಹೆಚ್ಚು ಚಾಮರಾಜನಗರ: ಹಿಂಗಾರು ಅವಧಿಯಲ್ಲಿ ಈ ಬಾರಿ ಹಿಂದಿಗಿಂತ ಹುರುಳಿ ಬಿತ್ತನೆ…
ಭೇರ್ಯ ಮಹೇಶ್ ಶಾಸೋಕ್ತವಾಗಿ ನಡೆದ ಕಾರ್ಯಕ್ರಮ; ಮುತ್ತೈದೆಯರ ಮೂಲಕ ಹಸುವಿಗೆ ಸೀರೆ ತೊಡಿಸಿ, ಹಣ್ಣು, ಸಿಹಿ ನೀಡಿP ಕೆ.ಆರ್.ನಗರ :…
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಲೆಗೆ ಪದೇಪದೇ ಕಾಡಾನೆ ಲಗ್ಗೆ; ಪೋಷಕರು, ಗ್ರಾಮಸ್ಥರಲ್ಲಿ ಭೀತಿ ಹನೂರು: ಕಾಡಾನೆ ದಾಳಿಯಿಂದ ಪದೇಪದೇ ಶಾಲಾ…
‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ…
ರವಿಚಂದ್ರ ಚಿಕ್ಕೆಂಪಿಹುಂಡಿ ರಾಹುಲ್ ಬಳಿ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪ ತಕ್ಷಣಕ್ಕೆ ಸಿಗದ ಸ್ಪಂದನೆ; ಚರ್ಚೆ ಮುಂದೂಡಿದ ರಾಹುಲ್ ಹೈಕಮಾಂಡ್ ನಾಯಕರಿಂದ…