ಚಾಮರಾಜನಗರ

ಕುಂತೂರು ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ

ಯಳಂದೂರು : ಕಳೆದ 4 ದಿನಗಳಿಂದ ತಾಲ್ಲೂಕಿನ ಕೆಸ್ತೂರು, ಮಲ್ಲಿಗೆಹಳ್ಳಿ, ಕಟ್ನವಾಡಿ ಗ್ರಾಮಗಳ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ ಶುಕ್ರವಾರ ಮಧ್ಯಾಹ್ನ ಕುಂತೂರು ಬೆಟ್ಟದಲ್ಲಿ ಪ್ರತ್ಯಕ್ಷವಾಗಿದೆ.

ಗುರುವಾರ ಕಟ್ನವಾಡಿ-ಕುಂತೂರು ಮಾರ್ಗದ ನಡುವೆ ಕಾಣಿಸಿಕೊಂಡಿದ್ದ ಚಿರತೆ ತಡರಾತ್ರಿ ಕೆಸ್ತೂರು ಬಳಿ ನಾಯಿಯೊಂದರ ಮೇಲೆ ದಾಳಿ ನಡೆಸಿದೆ.

ಶುಕ್ರವಾರ ಮಧ್ಯಾಹ್ನ ಕುಂತೂರು ಬೆಟ್ಟದ ಕಲ್ಲುಬಂಡೆಯ ಮೇಲೆ ಚಿರತೆ ಕುಳಿತಿರುವ ಚಿತ್ರ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ 4 ದಿನಗಳಿಂದ ಚಿರತೆಯ ಸೆರೆಗಾಗಿ ಶ್ರಮ ವಹಿಸುತ್ತಿರುವ ಮೈಸೂರಿನ ಚಿರತೆ ಸೆರೆ ವಿಶೇಷ ಕಾರ್ಯಪಡೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಜಾಡು ಹಿಡಿದು ಬೆಟ್ಟದ ಬಳಿ ಬೋನು ಇರಿಸಿದ್ದಾರೆ.

ಚಿರತೆಯು ಕುಂತೂರು ಬೆಟ್ಟದ ಕಡೆಯಿಂದ ಬೆಟ್ಟದ ಹೊಸೂರು ಕಡೆಗೆ ತೆರಳಿದೆ ಎಂದು ಸ್ಥಳೀಯರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕಳೆದ 4 ದಿನಗಳಿಂದ ಚಾಲಾಕಿ ಚಿರತೆಯು ಜಾಡು ಬದಲಿಸುತ್ತ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಯಾಮಾರಿಸುತ್ತಿದೆ.

lokesh

Recent Posts

ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಕಂಟ್ರಾಕ್ಟರ್‌ ಶವವಾಗಿ ಪತ್ತೆ

ಮಂಡ್ಯ: ಕಳೆದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ…

19 seconds ago

ಬಾಂಗ್ಲಾ ಮಾಜಿ ಸ್ಪೀಕರ್‌ ಶಿರಿನ್‌ ಶರ್ಮಿನ್‌ ಚೌಧರಿ ಬಂಧನ

ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಸ್ಫೀಕರ್‌ ಆಗಿದ್ದ ಶಿರಿನ್‌ ಶರ್ಮಿನ್‌ ಚೌಧರಿ ಅವರನ್ನು ಢಾಕಾ ಮೆಟ್ರೋಪಾಲಿಟನ್‌ ಪೊಲೀಸರ ಪತ್ತೇದಾರಿ ವಿಭಾಗವು…

15 mins ago

ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ತಾತ್ಕಾಲಿಕ ರಿಲೀಫ್‌ ಅಷ್ಟೇ ಸಿಕ್ಕಿರೋದು: ಸ್ನೇಹಮಯಿ ಕೃಷ್ಣ

ಮೈಸೂರು: ಮೈಸೂರು ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ತಾತ್ಕಾಲಿಕ ರಿಲೀಫ್‌ ಅಷ್ಟೇ ಸಿಕ್ಕಿರೋದು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ…

33 mins ago

ಸಿಎಂ ಕ್ಷೇತ್ರದಲ್ಲಿ ರೈತರ ವಿರೋಧದ ನಡುವೆಯೂ ನಿಮ್ಹಾನ್ಸ್‌ ನಿರ್ಮಾಣಕ್ಕೆ ಮುಂದಾದ ಮೈಸೂರು ಜಿಲ್ಲಾಡಳಿತ

ಮೈಸೂರು: ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ರೈತರ ವಿರೋಧದ ನಡುವೆಯೂ ನಿಮ್ಹಾನ್ಸ್‌ ಆಸ್ಪತ್ರೆ ನಿರ್ಮಾಣಕ್ಕೆ ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ವರುಣ ಕ್ಷೇತ್ರದ…

53 mins ago

ಓದುಗರ ಪತ್ರ: ಹಗಲು ದರೋಡೆಯಲ್ಲದೆ ಇನ್ನೇನು?

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ವಾಣಿಜ್ಯ ಸಿಲಿಂಡರ್ ಅಭಾವ…

2 hours ago

ಓದುಗರ ಪತ್ರ: ಯುದ್ಧದ ಪರಿಣಾಮದಿಂದ ಜೀವನ ಕಷ್ಟ..ಕಷ್ಟ…

ಇರಾನ್-ಅಮೆರಿಕ-ಇಸ್ರೇಲ್ ಯುದ್ಧವು ೩೭ನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಕಣ್ಣೀರು ತರಿಸುತ್ತಿದೆ. ಎಲ್‌ಪಿಜಿ ಗ್ಯಾಸ್…

2 hours ago