ಚಾಮರಾಜನಗರ

ಲಕ್ಷಾಂತರ ಭಕ್ತರು, ಶೂನ್ಯ ಅಪಘಾತ, ಶೂನ್ಯ ಟ್ರಾಫಿಕ್ ಜಾಮ್: ಎಸ್‌ಪಿ ಮುತ್ತುರಾಜು ಮಾರ್ಗದರ್ಶನದಲ್ಲಿ ಮಾದಪ್ಪನ ಜಾತ್ರೆಗೆ ಇತಿಹಾಸದ ಯಶಸ್ಸು!

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಈ ಬಾರಿಯ ದೀಪಾವಳಿ ಜಾತ್ರಾ ಮಹೋತ್ಸವ ಮಲೆ ಮಹದೇಶ್ವರ ಬೆಟ್ಟದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ದಾಖಲಾಗಿದೆ.

ಐದು ದಿನಗಳ ಕಾಲ ಲಕ್ಷಾಂತರ ಭಕ್ತರು ಆಗಮಿಸಿದರೂ ಒಂದೇ ಒಂದು ಅಪಘಾತವಿಲ್ಲ, ಒಮ್ಮೆಯೂ ಸಂಚಾರ ಅಸ್ತವ್ಯಸ್ತವಾಗಿಲ್ಲ, ಯಾವುದೇ ಅನಾಹುತವಿಲ್ಲದೆ ಜಾತ್ರಾ ಮಹೋತ್ಸವ ಅತ್ಯಂತ ಶಾಂತಿಯುತವಾಗಿ, ಸುಗಮವಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಐದು ದಿನಗಳ ಅಂತರದಲ್ಲಿ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಕಳೆದ ಐದು ವರ್ಷಗಳಿಂದ ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ ಆಟೋಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ.

ಕಳೆದ ವರ್ಷಗಳ ಜಾತ್ರೆಗಳಲ್ಲಿ ಮುನ್ನೆಚ್ಚರಿಕೆ ಇದ್ದರೂ ವಾಹನ ಅಪಘಾತಗಳು ನಡೆದು ಭಕ್ತರು ಮೃತಪಟ್ಟ ಕಹಿ ಘಟನೆಗಳು ನಡೆದಿದ್ದವು. ಆ ನೋವಿನ ಹಿನ್ನೆಲೆಯಲ್ಲೇ ಈ ಬಾರಿ ಪೊಲೀಸ್ ಇಲಾಖೆ ಅತ್ಯಂತ ಜಾಗರೂಕತೆಯಿಂದ, ಮೊದಲೇ ಸಮಗ್ರ ಯೋಜನೆ ರೂಪಿಸಿ ಕಣಕ್ಕಿಳಿದಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರ ನೇರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತು. ಸಂಚಾರ ದಟ್ಟಣೆ ಉಂಟಾಗುವ ಪ್ರತಿಯೊಂದು ಪ್ರಮುಖ ಸ್ಥಳ, ತಿರುವು, ಘಾಟಿ ರಸ್ತೆ ಹಾಗೂ ಜನದಟ್ಟಣೆಯ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಭಕ್ತರ ವಾಹನಗಳಿಗೆ ಸುಗಮ ದಾರಿ, ಪಾದಚಾರಿಗಳಿಗೆ ಸುರಕ್ಷತೆ, ತುರ್ತು ಸಂದರ್ಭಕ್ಕೆ ಸಿದ್ಧತೆ ಹೀಗೆ ಪ್ರತಿಯೊಂದು ಹಂತದಲ್ಲೂ ಶಿಸ್ತುಬದ್ಧ ವ್ಯವಸ್ಥೆ ಮಾಡಲಾಗಿತ್ತು. ಅದರ ಫಲವಾಗಿಯೇ ಈ ಬಾರಿ ಯಾವುದೇ ಅಪಘಾತಗಳು ಸಂಭವಿಸದೆ ಜಾತ್ರಾ ಮಹೋತ್ಸವ ಸಂಪೂರ್ಣ ಯಶಸ್ವಿಯಾಗಿದೆ. ಭಕ್ತರು ನಿರ್ಭಯದಿಂದ, ನೆಮ್ಮದಿಯಿಂದ ದರ್ಶನ ಪಡೆದು ಮರಳಿದರು.

ಆನೆ ತಲೆ ದಿಂಬದಲ್ಲೂ ಜಾಮ್ ಇಲ್ಲದೆ ಪವಾಡ: ಸಾಮಾನ್ಯ ಅಮಾವಾಸ್ಯೆಗಳಲ್ಲಿಯೂ ಆನೆ ತಲೆ ದಿಂಬದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಎರಡು-ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು. ಆದರೆ ಈ ಬಾರಿ 400ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು ಹಾಗೂ ಸಾವಿರಾರು ಖಾಸಗಿ ವಾಹನಗಳು ಸಂಚಾರ ಮಾಡಿದರೂ ಒಮ್ಮೆಯೂ ಟ್ರಾಫಿಕ್ ಸಮಸ್ಯೆ ಉಂಟಾಗಲಿಲ್ಲ. ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ಇನ್ಸ್‌ಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್, ಸಹಾಯಕ ಇನ್ಸ್‌ಪೆಕ್ಟರ್‌, ಪೊಲೀಸ್ ಗೃಹರಕ್ಷಕ ದಳ ಕೆಎಸ್‌ಆರ್‌ಪಿ ಕಮಾಂಡೋ ಸೇರಿದಂತೆ ಸಾವಿರಾರು ಸಿಬ್ಬಂದಿಗಳ ಕರ್ತವ್ಯದಿಂದ ಭಕ್ತರು ಸುಗಮ ದರ್ಶನ ಹಾಗೂ ಸಂಚಾರ ಮಾಡಿದ್ದಾರೆ.

ಇದು ಕೇವಲ ಸಂಚಾರ ನಿರ್ವಹಣೆಯಲ್ಲ, ಭಕ್ತರ ಜೀವ ರಕ್ಷಣೆಯ ಮಹತ್ಕಾರ್ಯ: ಎಸ್‌ಪಿ ಮುತ್ತುರಾಜು ಅವರ ಸಮರ್ಥ ನೇತೃತ್ವ, ಸಿಬ್ಬಂದಿಯ ಹಗಲಿರುಳು ಶ್ರಮ ಹಾಗೂ ಭಕ್ತರ ಸಹಕಾರದಿಂದ ಈ ಬಾರಿಯ ಜಾತ್ರೆ ಮಾದರಿ ಜಾತ್ರೆಯಾಗಿ ಮೂಡಿಬಂದಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಾದಪ್ಪನ ಕೃಪೆ ಹಾಗೂ ಪೊಲೀಸ್ ಇಲಾಖೆಯ ಮುನ್ನೆಚ್ಚರಿಕೆಯಿಂದಾಗಿ ಈ ಬಾರಿಯ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವವು ಯಾವುದೇ ಕಹಿ ಘಟನೆಯಿಲ್ಲದೆ, ಭಕ್ತಿಭಾವದೊಂದಿಗೆ ಸಂಪನ್ನಗೊಂಡಿದೆ.

ಆಂದೋಲನ ಡೆಸ್ಕ್

Recent Posts

ನಾವು ಅವರ ಮಕ್ಕಳೇ ಬಿಡಿ; ವಿಜಯೇಂದ್ರಗೆ ಸಿಎಂ ಡಿಕೆಶಿ ತಿರುಗೇಟು!

ಮೈಸೂರು: ಕಾಂಗ್ರೆಸ್‌ ಕಾರ್ಯಕರ್ತರ ಕುರಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.…

6 mins ago

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತದ ಸುಳಿವು

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ರೂಪುಗೊಳ್ಳುವ ಸಾಧ್ಯತೆ ಇದೆ. ನವೆಂಬರ್‌ 13ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ…

44 mins ago

ಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ–ಸೈರಾಂಗ್ ಎಕ್ಸ್‌ಪ್ರೆಸ್: ಕೆಲ ಪ್ರಯಾಣಿಕರಿಗೆ ಗಾಯ

ಗುವಾಹಟಿ: ಕೋಲ್ಕತ್ತಾ-ಸೈರಾಂಗ್‌ ಎಕ್ಸ್‌ಪ್ರೆಸ್‌ ರೈಲೊಂದು ಹಳಿತಪ್ಪಿದ ಪರಿಣಾಮ ಕೆಲ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಅಸ್ಸಾಂನ ಡಿಗಾರು ರೈಲು ನಿಲ್ದಾಣದ ಬಳಿ…

1 hour ago

ಪಡಿತರ ಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ

ಬೆಂಗಳೂರು: ಪಡಿತರ ಚೀಟಿದಾರರೇ, ಇನ್ನೂ ಇ-ಕೆವೈಸಿ ಮಾಡಿಸಿಲ್ಲವೇ? ನಿಮಗೊಂದು ಸಿಹಿಸುದ್ದಿ! ಇ-ಕೆವೈಸಿ ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವನ್ನು ನವೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ.…

2 hours ago

13 ವರ್ಷ ಹಳೆಯ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಗೆ ಪೊಲೀಸ್ ನೋಟಿಸ್‌

ನವದೆಹಲಿ: 13 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಪೊಲೀಸರು ನೋಟಿಸ್‌…

1 day ago

ದೀಪಾವಳಿ ಬಳಿಕ ಬೆಂಗಳೂರಲ್ಲಿ ವಾಯುಮಾಲಿನ್ಯ ಏರಿಕೆ, AQI 186ಕ್ಕೆ

ಬೆಂಗಳೂರು: ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ, ಅಂದರೆ ಎಕ್ಯೂಐ, 186ಕ್ಕೆ ತಲುಪಿದೆ.…

1 day ago