ಚಾಮರಾಜನಗರ: ಗುಂಡ್ಲುಪೇಟೆಗೆ ಕೆಎಸ್ಆರ್‌ಟಿಸಿ ಬಸ್ ಕಾರ್ಯಾಚರಣೆ ಮಾಡುವ ವೇಳೆ ಎದುರಿಗೆ ಬಂದು ಗೂಡ್ಸ್ ವಾಹನ ಡಿಕ್ಕಿಯಿಂದ ಬಸ್ ಒಳಗಿದ್ದ ಮಹಿಳೆಯ ಬುರುಡೆ ತುಂಡರಸಿ ಮೃತಪಟ್ಟ ಕುಟುಂಬಕ್ಕೆ ಸಂಸ್ಥೆಯ ಅಧಿಕಾರಿ ಆಶೋಕ್ ಕುಮಾರ್ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ.
ಮೃತಪಟ್ಟ ಮಹಿಳೆ ಗುಂಡ್ಲುಪೇಟೆ ತಾಲೂಕಿನ ಹಾಲನಹಳ್ಳಿ ಗ್ರಾಮದ ಶಿವಲಿಂಗಮ್ಮ.
ಕೆಎಸ್‌ಆರ್‌ಟಿಸಿ ಬಸ್ ನಂಜನಗೂಡು ಮಾರ್ಗವಾಗಿ ಗುಂಡ್ಲಪೇಟೆಗೆ ಹೋಗುವ ವೇಳೆ ಕಡುಬಿನ ಕಟ್ಟೆ ಹತಿರ ಕಾರನ್ನು ಓವರ್ಟೇಕ್ ಮಾಡಲು ಹೋಗಿ ಮಧ್ಯಭಾಗಕ್ಕೆ ಬಂದಿದೆ. ಈ ವೇಳೆ ಶಿವಲಿಂಗಮ್ಮ ತಲೆಯನ್ನು ಕಿಟಕಿಯಿಂದ ಹೊರಹಾಕಿದ ಪರಿಣಾಮ ಎದುರಿಗೆ ಬಂದು ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದು ರುಂಡವು ತುಂಡರಿಸಿತ್ತು.
ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗದ ನಿಯಂತ್ರಣಾಧಿಕಾರಿ ಆಶೋಕ್ ಕುಮಾರ್ ಮೃತರ ಮಗ ಕಾರ್ತಿಕ್ ಅವರಿಗೆ 10 ಲಕ್ಷ ರೂ.ಗಳ ಚೆಕ್ ಅನ್ನು ಪರಿಹಾರವಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗೀಯ ಸಂಚಲನಾಧಿಕಾರಿ ಎಸ್.ಎಸ್.ದಶರಥ, ಸಹಾಯಕ ಕಾನೂನು ಅಧಿಕಾರಿ ಶಿವಣ್ಣ, ಸಹಾಯಕ ಲೆಕ್ಕಾಧಿಕಾರಿ ರುದ್ರಮುನಿ, ಭದ್ರತಾ ನಿರೀಕ್ಷಕ ನಾಗೇಂದ್ರ ಇದ್ದರು.
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…