ಚಾಮರಾಜನಗರ

ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಬೆಳೆದರೆ ಉದ್ಯೋಗ ಸೃಷ್ಟಿ: ಬಿ.ಚಂದ್ರಶೇಖರ ಹೆಬ್ಬಾರ್

ಚಾಮರಾಜನಗರ: ಪ್ರವಾಸೋದ್ಯಮವು ಬೆಳೆದಂತೆ ಹೋಟೆಲ್ ಉದ್ಯಮಗಳು ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಬಿ.ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

ನಗರದ ಕರಿನಂಜನಪುರದ ರಸ್ತೆಯಲ್ಲಿ ಇರುವ ಖಾಸಗಿ ಹೋಟೇಲ್ನಲ್ಲಿ ಚಾಮರಾಜನಗರ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉದ್ಘಾಟನ ಕಾರ್ಯಕ್ರಮದಲ್ಲಿ ಜ್ಯೊತಿಬೆಳಗಿಸಿ ಮಾತನಾಡಿದ ಅವರು, ಹೋಟೆಲ್ ಉದ್ಯಮ ಬಹಳಷ್ಟು ಜನರಿಗೆ ದಾರಿದೀಪವಾಗಿದೆ. ಇದರಲ್ಲಿ ಕಷ್ಟವು ಇದೆ ಸುಖವು ಇದೆ ಎಂದರು.

೩೦ ವರ್ಷಗಳ ಹಿಂದೆ ಕಡಿಮೆ ಜನರು ಮಾತ್ರ ಹೋಟೆಲ್ಗಳನ್ನು ತೆರೆದು ಜೀವನ ನಡೆಸುತ್ತಿದ್ದರು. ಇತ್ತಿಚೀನ ದಿನಗಳಲ್ಲಿ ಹೋಟೆಲ್ ಉದ್ಯಮ ಸಾಕಷ್ಟು ಬೆಳೆದಿದೆ. ಯಾವುದೇ ವೃತ್ತಿಯನ್ನು ಮಾಡಬೇಕಾದರೆ ಅದರ ಜೊತೆಗೆ ಕೈ ಜೋಡಿಸುವವರು ಬೇಕಾಗುತ್ತದೆ. ಅದೇ ಕಾರಣಕ್ಕೆ ಹೋಟೆಲ್ ಮಾಲೀಕರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಇದರ ಉದ್ದೇಶ ಸರ್ಕಾರದ ಜೊತೆಗೆ ಹೋಟೇಲ್ ಮಾಲೀಕರು ಸೇರಿಕೊಂಡು ಪ್ರವಾಸೋದ್ಯಮವಿರುವ ಜಾಗಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೋಟೆಲ್ಗಳನ್ನು ತೆರೆದು ಉತ್ತಮ ಆಹಾರವನ್ನು ನೀಡಿದರೆ, ಫಲಹಾರ ಮಂದಿರಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಚಾಮರಾಜನಗರ ಜಿಲ್ಲೆಯ ಸುತ್ತಲು ಪ್ರವಾಸಿ ಕೇಂದ್ರಗಳು ಇದೇ. ಅಲ್ಲಿ ಇರುವ ಹೋಟೆಲ್ ಉದ್ಯಮಿಗಳನ್ನು ಸಂಘದ ಸದಸ್ಯರಾಗಿ ಮಾಡಿದರೆ ಸಂಘವು ಉತ್ತಮ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಜಿ.ಕೆ.ಶೆಟ್ಟಿ ಮಾತನಾಡಿ ಚಾಮರಾಜನಗರ ಜಿಲ್ಲೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರಿ ಅಧಿಕಾರಿಗಳನ್ನು ಮತ್ತು ಸಾರ್ವಜನಿಕರನ್ನು ಪ್ರೀತಿಯಿಂದ ಗೌರವಿಸಬೇಕು. ಅವರಿಂದ ನಮ್ಮ ಉದ್ಯಮವು ಹೆಚ್ಚಲಿದೆ. ಚಾಮರಾಜನಗರ ಜಿಲ್ಲೆಯು ಶೇಕಡ ೫೦ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಹೆಚ್ಚು ಪ್ರವಾಸೋದ್ಯಮವು ಇದೇ. ಪ್ರವಾಸೋದ್ಯಮದಲ್ಲಿ ಹೋಟೆಲ್ ತೆರೆಯಲು ಬಯಸುವವರು ಅವರಿಗೆ ಮಾರ್ಗದರ್ಶನ ನೀಡುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಾಮರಾಜನಗರ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಂದ್ಯಪ್ಪ ಶೆಟ್ಟಿ  ಮಾತನಾಡಿ ಇತ್ತೀಚೆಗೆ ಹೋಟೆಲ್ ನಡೆಸಲು ಕಾರ್ಮಿಕರ ಕೊರತೆ ಇದೆ. ಜನರಿಗೆ ಒಪ್ಪುವಂತೆ ರುಚಿಕರವಾದ ಆಹಾರವನ್ನು ಕೊಡಬೇಕಾದರೆ ಕಾರ್ಮಿಕರನ್ನು ನಾವೇ ರೆಡಿಮಾಡಬೇಕಿದೆ. ಎಷ್ಟೋ ಕಾರ್ಮಿಕರು ಸ್ವಂತ ಊರಿನಲ್ಲಿ ಕೆಲಸ ನಿರ್ವಹಿಸಲು ಒಪ್ಪುವುದಿಲ್ಲ, ಚಾಮರಾಜನಗರದ ಹಲವಾರು ಕಾರ್ಮಿಕರು ಬೆಂಗಳೂರು, ಮೈಸೂರುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೋಟೆಲ್ ನಡೆಸಲು ಪೈಪೋಟಿ ನಡೆಸಬೇಕಿದೆ. ಬೆಲೆ ಏರಿಕೆಯಾದ ಸಂದರ್ಭದಲ್ಲಿ ಗ್ರಾಹಕರು ನಮ್ಮ ಜೊತೆ ಸಹಕರಿಸಿದರೆ ಉದ್ಯಮ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಪ್ರತಾಪ್.ಎಸ್ ಮಾತನಾಡಿ ಹೋಟೆಲ್ ಉದ್ಯಮಕ್ಕೆ ಸೇರುವ ಸಂಸ್ಥೆಗಳು ಬಾರ್ & ರೆಸ್ಟೋರೆಂಟ್, ರೇರ್ಜಟ್, ಹೊಂಸ್ಟೆ, ಬೇಕರಿ, ಸ್ವೀಟ್ಸ್ಟಾಲ್, ಕ್ಯಾಟಿಂಗ್ ಗಳು ಇದರ ಅನುದಡಿಗೆ ಬರುತ್ತದೆ. ನಮ್ಮ ಸಂಘವನ್ನು ತಾಲ್ಲೂಕು ಸಂಘವನ್ನು ಕೋವಿಡ್ ಸಂದರ್ಭದಲ್ಲಿ ಸ್ಥಾಪಿಸಲಾಯಿತು. ಜಿಲ್ಲಾ ಸಂಘವನ್ನು ಇಂದು ಉದ್ಘಾಟನೆಯಾಗಿದೆ. ನಮ್ಮ ಸಂಘದಲ್ಲಿ ೫೦ ಜನ ಸದಸ್ಯರು ಇದ್ದಾರೆ ಈ ಸಂಘ ಸದಸ್ಯತ್ವವನ್ನು ಜಿಲ್ಯಾಂದ್ಯತ ಮಾಡಲು ಹೊರಟಿದ್ದೇವೆ ಎಂದು ಹೇಳಿದರು.

ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷರಾದ ಸಿ.ನಾರಾಯಣಗೌಡ, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಎಲ್ಲರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಖಜಾಂಚಿ ವಿಜಯ್ಕುಲಾಲ್, ಉಪಾಧ್ಯಕ್ಷ ಸಿ.ಓ.ಪಾಪಣ್ಣ, ಶ್ರೀನಿವಾಸ್ರಾವ್, ಸಹ ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಸಮಿತಿ ಸದಸ್ಯರಾದ ಕೆ.ಇ.ಮಂಜುನಾಥ್, ಜಿ.ಶಂಕರ್, ವೆಂಕಟೇಶ್.ಎಂ ಕುಮಾರ್, ಕಿರಣ್.ಎಸ್ ಉಪಸ್ಥಿತರಿದ್ದರು

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

18 mins ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

26 mins ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

1 hour ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

1 hour ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

1 hour ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

2 hours ago