ಚಾಮರಾಜನಗರ

ಮಾದಪ್ಪನ ಹುಂಡಿಯಲ್ಲಿ ಸಿಕ್ತು 28 ಲಕ್ಷ ಮೌಲ್ಯದ ಅಮಾನ್ಯ ನೋಟುಗಳು!

ಚಾಮರಾಜನಗರ : ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆಯಲ್ಲಿ 28 ಲಕ್ಷ ರೂ ಮೌಲ್ಯದ ಅಮಾನ್ಯ ನೋಟುಗಳು ಪತ್ತೆಯಾಗಿವೆ.

ಭಕ್ತರು ಇನ್ನುಮುಂದೆ ಅಮಾನ್ಯವಾದ ನೋಟುಗಳನ್ನು ಹುಂಡಿಗೆ ಹಾಕಬಾರದೆಂದು ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ಮನವಿ ಮಾಡಿದೆ.

ನೋಟ್‌ ಬ್ಯಾನ್‌ ಆಗಿ ವರ್ಷಗಳೇ ಕಳೆದರು, ಅಮಾನ್ಯವಾದ ಲಕ್ಷಾಂತರ ರೂಪಾಯಿ ಹಣ ಹುಂಡಿಗೆ ಸೇರಿದೆ. ಕಳೆದ ಮಂಗಳವಾರ ಹುಂಡಿ ಎಣಿಕೆ ವೇಳೆ ಈ ನೋಟುಗಳು ಪತ್ತೆಯಾಗಿವೆ.

ಇದರಲ್ಲಿ ಸಾವಿರ ಮುಖಬೆಲೆಯ 677 ನೋಟುಗಳು, 500 ಮುಖಬೆಲೆಯ 4353 ಸೋಟುಗಳು ಪತ್ತೆಯಾಗಿದ್ದು, ಇವುಗಳ ಒಟ್ಟು ಮೊತ್ತ 28,53,500 ಲಕ್ಷ ರೂಪಾಯಿ ಆಗಿದೆ. ಆದರೆ ಇದ್ಯಾವುದು ಉಪಯೋಗಕ್ಕೆ ಬಾರದಂತಾಗಿದೆ.

ಜೊತೆಗೆ 2000 ಮುಖಬೆಲೆಯ ನೋಟುಗಳು ಬಂದಿದ್ದು,ಅವುಗಳ ಒಟ್ಟು ಮೊತ್ತ 3.56 ಲಕ್ಷ ರೂ ಆಗಿದೆ. ಭಾರತ ಸರ್ಕಾರ ಇತ್ತೀಚೆಗೆ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆದಿದ್ದು, ಸದ್ಯ ಹುಂಟಿಯಲ್ಲಿ ದೊರೆತಿರುವ 2000 ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.

“ಅಮಾನ್ಯಗೊಂಡಿರುವ ನೋಟುಗಳನ್ನು ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕುವುದರಿಂದ ನಿಮ್ಮ ಹರಕೆ ನಿಮಗೆ ತೃಪ್ತಿ ಆಗಬಹುದು. ಆದರೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಅಮಾನ್ಯಗೊಂಡಿರುವ 500, 1000 ರೂ ಮುಖಬೆಲೆಯ ನೋಟುಗಳನ್ನು ಹಾಗೂ ಸರ್ಕಾರ ಹಿಂಪಡೆದಿರುವ ಪಡೆದಿರುವ 2000 ರೂ ಮುಖ ಬೆಲೆಯ ನೋಟುಗಳನ್ನು ಭಕ್ತರು ಹುಂಡಿಗೆ ಹಾಕಬಾರದು”, ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮನವಿ ಮಾಡಿದ್ದಾರೆ

ಮೇ ಅಂತ್ಯಕ್ಕೆ 2.53 ಕೋಟಿ ಸಂಗ್ರಹ

ಈ ವರ್ಷ ಮೇ 31ರಂದು ದೇವಸ್ಥಾನದ ಕಾಣಿಕೆ ಡಬ್ಬಿ ಎಣಿಕೆ ಮಾಡಿದಾಗ 2.53 ಕೋಟಿ ರೂಪಾಯಿ ಹಣ ಸಂಗ್ರಹವಾಗಿತ್ತು. ಅದರಲ್ಲೂ 14 ಲಕ್ಷ ರೂಪಾಯಿಗೂ ಅಧಿಕ ಹಣ ನಾಣ್ಯಗಳ ರೂಪದಲ್ಲೇ ಸಂಗ್ರಹವಾಗಿತ್ತು. ಇನ್ನು 65 ಗ್ರಾಂ ಚಿನ್ನದ ರೂಪದಲ್ಲಿ, 3.35 ಕಿಗ್ರಾಂ ಬೆಳ್ಳಿಯ ರೂಪದಲ್ಲಿ ದೇವಸ್ಥಾನದ ಕಾಣಿಕೆ ಹುಂಡಿಗೆ ಭಕ್ತರು ಹಾಕಿದ್ದರು.

andolanait

Recent Posts

ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ ; ಮೂವರು ಕಾರ್ಮಿಕರು ಸಾವು.

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ದುರಸ್ತಿ ಕಾಮಗಾರಿ ನಡೆಯುತ್ತಿರುವಾಗ…

48 mins ago

ಇಂದಿನಿಂದ ಟೋಲ್‌ಗಳಲ್ಲಿ ಕ್ಯಾಷ್‌ ಇಲ್ಲ ; ಡಿಜಿಟಲ್‌ ಪಾವತಿ ಮಾತ್ರ.

ಬೆಂಗಳೂರು : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ಧಾರದಂತೆ, ಇಂದಿನಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು…

2 hours ago

ಓದುಗರ ಪತ್ರ: ಫಲಪ್ರದವಾಗಲಿ ಮಾತುಕತೆ!

ಕೊನೆಗೂ ಘೋಷಣೆಯಾಗಿದೆ ತಾತ್ಕಾಲಿಕ ಕದನ ವಿರಾಮ ತೆರೆಬಿದ್ದಿದೆ ಕೊಲ್ಲಿ ಯುದ್ಧಕೆ ನಿಟ್ಟುಸಿರು ಬಿಟ್ಟಿದೆ ಜನಜಗ! ಸಿಟ್ಟು ಸೆಡವು ಬದಿಗಿರಿಸಿ ನಡೆಯಲಿ…

5 hours ago

ಓದುಗರ ಪತ್ರ: ಆಟೋ ಗ್ಯಾಸ್ ಅಭಾವ ಕೃತಕವೋ? ನೈಜವೋ?

ಕೊಲ್ಲಿ ಯುದ್ಧದ ನೆಪದಲ್ಲಿ ಬಂಡವಾಳಶಾಹಿಗಳು  ಕೆಜಿಗೆ ರೂ. ೮೯ ಇದ್ದ  ಆಟೋ ಗ್ಯಾಸ್ ಗ್ಯಾಸ್ ಅನ್ನು ರೂ. ೧೭೦ಕ್ಕೆ ಮಾರುತ್ತಾ…

5 hours ago

ಓದುಗರ ಪತ್ರ: ಯುದ್ಧ ಪೂರ್ಣ ನಿಲ್ಲಲಿ, ಶಾಂತಿ ನೆಲೆಸಲಿ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ಕಳೆದ ೪೦ ದಿನಗಳಿಂದ ನಡೆಸುತ್ತಿದ್ದ ಯುದ್ಧಕ್ಕೆ   ಅಲ್ಪ ವಿರಾಮವನ್ನು ಘೋಷಿಸಲಾಗಿದೆ.  ಈ  ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯ…

5 hours ago

ಓದುಗರ ಪತ್ರ: ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್  ಸೌಲಭ್ಯ ಕಲ್ಪಿಸಿ

ಮೈಸೂರು ಜಿಲ್ಲೆಯ ಸರಗೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದ್ದರೂ ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧೦೮ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೇ ತುರ್ತು ಸಂದರ್ಭದಲ್ಲಿ…

5 hours ago