ಚಾಮರಾಜನಗರ

ಹನೂರಿನಲ್ಲಿ ಕಳ್ಳತನ ಪ್ರಕರಣ: ಚಿನ್ನದೊರೆ ನಿವಾಸಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಭೇಟಿ

ಹನೂರು: ಪಟ್ಟಣದ ಚಿನ್ನದೊರೆ ಎಂಬುವವರ ಮನೆಯಲ್ಲಿ ನಗದು ಹಾಗೂ ಚಿನ್ನ ಕಳ್ಳತನವಾಗಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರು, ಚಿನ್ನದೊರೆ ನಿವಾಸಕ್ಕೆ ಭೇಟಿ ನೀಡಿ ಘಟನೆಯ ಸಂಬಂಧ ಮಾಹಿತಿ ಪಡೆದುಕೊಂಡು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಪರಿಶೀಲನೆ ನಂತರ ಆರ್.ನರೇಂದ್ರ ಅವರು, ದೂರವಾಣಿ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾರನ್ನು ಸಂಪರ್ಕಿಸಿ ತನಿಖೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಇದುವರೆಗೂ ಇಷ್ಟು ದೊಡ್ಡ ಮಟ್ಟದಲ್ಲಿ ಕಳ್ಳತನವಾಗಿರಲಿಲ್ಲ. ಇದೀಗ ಹನೂರು ಪಟ್ಟಣದಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಳ್ಳತನ ಪ್ರಕರಣವನ್ನು ಆದಷ್ಟು ಬೇಗ ಭೇದಿಸಿ ನಗದು ಹಾಗೂ ಚಿನ್ನವನ್ನು ಪತ್ತೆ ಹಚ್ಚುವಂತೆ ತಿಳಿಸಿದ್ದೇನೆ. ಈ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ಈಗಾಗಲೇ ವಿಶೇಷ ತಂಡ ರಚನೆಯಾಗಿರುವುದು ತಿಳಿದು ಬಂದಿದೆ. ನಮ್ಮ ರಾಜ್ಯದ ಪೊಲೀಸರು ಇದಕ್ಕಿಂತಲೂ ವಿಭಿನ್ನವಾಗಿರುವ ಪ್ರಕರಣಗಳನ್ನು ಭೇದಿಸಿ ಇಡೀ ದೇಶದಲ್ಲಿಯೇ ಮನೆ ಮಾತಾಗಿದ್ದಾರೆ. ಈ ಪ್ರಕರಣವು ಸುಖಾಂತ್ಯ ಕಂಡು ನೊಂದವರಿಗೆ ನ್ಯಾಯ ಕೊಡಿಸುವ ಮೂಲಕ ರಾಜ್ಯದ ಪೊಲೀಸರು ಇತರೆ ರಾಜ್ಯದವರಿಗೆ ಮಾದರಿಯಾಗಲಿ ಎಂದರು.

ಘಟನೆಯ ಸಂಬಂಧ ಚಿನ್ನದೊರೆ ಮಾತನಾಡಿ, ನನ್ನ ಮೂರನೇ ಮಗಳು ದರ್ಶಿನಿ ರಾಜಸ್ಥಾನದ ಜೈಪುರ್‌ನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬರುವ ಸಂಬಳವನ್ನು ನಮಗೆ ಕಳುಹಿಸುತ್ತಿದ್ದರು. ನಾವು ನಮ್ಮ ಊರಿನಲ್ಲಿದ್ದ ಜಮೀನು ಮಾರಾಟ ಮಾಡಿ ಮನೆಯಲ್ಲಿ 20 ಲಕ್ಷ ನಗದು ಹಾಗೂ ಮದುವೆಗೆ ಚಿನ್ನ ಖರೀದಿ ಮಾಡಿ ಮನೆಯಲ್ಲಿ ಇಟ್ಟಿದ್ದೆವು. ನಮ್ಮ ಸಂಬಂಧಿಕರ ಕಾರ್ಯಕ್ರಮ ಇದ್ದ ಹಿನ್ನೆಲೆ ತಮಿಳುನಾಡಿಗೆ ತೆರಳಿ ವಾಪಸ್ ಮಧ್ಯರಾತ್ರಿ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂತು ಎಂದು ಘಟನೆ ಬಗ್ಗೆ ವಿವರಿಸಿದರು.

ಭೇಟಿಯ ವೇಳೆ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾದೇಶ್, ಮುಖಂಡರಾದ ರಮೇಶ್ ನಾಯ್ಡು, ಮಾದೇಶ್, ರಾಜೇಶ್, ಪ್ರದೀಪ್ ನಾಯ್ಡು, ನಾಗೇಶ್, ವೆಂಕಟೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮಹಾದೇಶ್ ಎಂ ಗೌಡ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಹನೂರು ಪಟ್ಟಣದವನಾದ ನಾನು ಪಟ್ಟಣದ ಕ್ರಿಸ್ತರಾಜ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು ಕಳೆದ 11 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜ್ಯಮಟ್ಟದ ವಿಶ್ವವಾಣಿ, ಜಿಲ್ಲಾ ಮಟ್ಟದ ಸುದ್ದಿ ಬುದ್ಧಿ ಪತ್ರಿಕೆಯಲ್ಲಿ ನಾಲ್ಕು ವರ್ಷ ತಾಲೂಕು ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ಹನೂರು ತಾಲೂಕು ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ.

Recent Posts

ಪಶ್ಚಿಮ ಬಿಕ್ಕಟ್ಟು : ಸಂಘರ್ಷ ಸಂಧಾನ ಸಭೆ ಮುಂದೂಡಿಕೆ?

ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಇರಾನ್-ಅಮೇರಿಕಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಂದು ನಡೆಯಬೇಕಿದ್ದ…

6 mins ago

ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವು ; 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ (ಬಾಳೇಬರೆ) ಪ್ರದೇಶದಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಗುಡ್ಡ…

41 mins ago

ಹೊಗೇನಕಲ್‌ : ನೀರಿನ ಸೆಳೆತಕ್ಕೆ ಸಿಲುಕಿ ಓರ್ವ ಸಾವು

ಹನೂರು : ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ನೀರಿನಲ್ಲಿ ಈಜಿಕೊಂಡು ಬರುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ…

52 mins ago

ರಾಜ್ಯಸಭಾ ಸದಸ್ಯರಾಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕಾರ

ನವದೆಹಲಿ : ಬಿಹಾರದ ಮುಖ್ಯಮಂತ್ರಿ, ಜೆಡಿಯು ರಾಷ್ಟ್ರೀಯ ಅಧ್ಯಕ್ಷರೂ ಆದ ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ…

2 hours ago

ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಚಿಕ್ಕಮಗಳೂರು : ಚಂದ್ರದ್ರೋಣ ಪರ್ವತಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ 10ನೇ ತರಗತಿ ವಿದ್ಯಾರ್ಥಿನಿ…

2 hours ago

ಅನಾರೋಗ್ಯ ಪೀಡಿತ ಮಹಿಳೆ ಕುಟುಂಬಕ್ಕೆ ಎಚ್.ಡಿ. ಕುಮಾರಸ್ವಾಮಿ ನೆರವು

ನಂಜನಗೂಡು : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೆರವು ನೀಡಿದ್ದಾರೆ. ನಂಜನಗೂಡು…

3 hours ago