ಮಹಾದೇಶ್ ಎಂ. ಗೌಡ, ಹನೂರು
ಹನೂರು: ಪಟ್ಟಣದ ಹೊರವಲಯದ ಚಿಂಚಳ್ಳಿ ರಸ್ತೆ ಸಮೀಪದ ಜಮೀನಿಗೆ ಕಾಡು ಪ್ರಾಣಿಗಳು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಬಾಳೆ ಫಸಲು ನಾಶ ಮಾಡಿರುವ ಘಟನೆ ಜರುಗಿದೆ.
ಹನೂರು ಪಟ್ಟಣದ ರೈತ ಲೊಕೇಶ್ ಎಂಬುವವರು ನಾಲ್ಕು ಎಕರೆ ಜಮೀನಿನಲ್ಲಿ ಜೋಳ ಮತ್ತು ಬಾಳೆ ಬೆಳೆಗಳನ್ನು ಬೇಸಾಯ ಮಾಡಿದ್ದರು. ಆದರೆ ಸಮೀಪದ ಅರಣ್ಯ ಪ್ರದೇಶದಿಂದ ಬಂದ ಕಾಡು ಪ್ರಾಣಿಗಳು ಜಮೀನಿನಲ್ಲಿ ಬೆಳೆದ ಬಾಳೆ ಮತ್ತು ಜೋಳವನ್ನು ತಿಂದು ತುಳಿದು ಹಾಳುಮಾಡಿವೆ.
ಅಲ್ಲದೇ, ಇತ್ತೀಚೆಗೆ ಅವರು ಬಿತ್ತನೆ ಮಾಡಿದ್ದ ಜೋಳದ ಫಸಲೂ ಪೈರು ಉತ್ತಮವಾಗಿ ಬಂದಿದೆ ಎಂದು ಸಂತಸದಲ್ಲಿದ್ದರೂ ಆದರೆ ಕಾಡು ಪ್ರಾಣಿಗಳ ದಾಳಿಯಿಂದ ಆ ಫಸಲೂಕೂಡ ಹಾನಿಯಾಗಿದ್ದು, ಸಾಲ ಮಾಡಿ ಬೆಳೆದ ಬೆಳೆಗಳು ಕೆಲವೇ ದಿನಗಳಲ್ಲಿ ನಾಶವಾಗಿವೆ ಎಂದು ಅವರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಅಧಿಕಾರಿಗಳು ಶೀಘ್ರವೆ ಹಾನಿಗೊಳಗಾದ ಫಸಲಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರೈತ ಲೋಕೇಶ್ ಒತ್ತಾಯಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿ ಮಾಡಿದ ಸಂಸದ ಯದುವೀರ್ ಹೊಸದಿಲ್ಲಿ: ಮೈಸೂರಿನ ರೈಲ್ವೆ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು…
ಮಂಡ್ಯ: ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತದಿಂದ ಕೂಡಿದ ರಾಜ್ಯ ಸರ್ಕಾರ ಬೆಲೆಗಳ ಏರಿಕೆ ಮಾಡಿಕೊಂಡು ತಮ್ಮ ಗ್ಯಾರೆಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದೆ…
ಕೊಳ್ಳೇಗಾಲ : ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ದಂಪತಿಗಳಿಬ್ಬರು ಬೆಂಕಿ ಹಚ್ಚಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ. ಕುಂತೂರು ಗ್ರಾಮದ…
ಮೈಸೂರು : ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನಿರ್ಧರಿಸಿದ್ದು, ಆಸಕ್ತರು ಈ…
ಮೈಸೂರು: ಕಾಡಾನೆಗಳ ನಡುವೆ ಸಂಭವಿಸಿದ ಕಾಳಗದಲ್ಲಿ ಉದ್ದನೆಯ ದಂತವುಳ್ಳ ಜೂನಿಯರ್ ಬೋಗೇಶ್ವರ್ ಎಂದು ಕರೆಸಿಕೊಳ್ಳುತ್ತಿದ್ದ 24 ವರ್ಷದ ಆನೆಯೊಂದು ಮೃತಪಟ್ಟಿದ್ದು, ವನ್ಯಜೀವಿ…
ಬೆಂಗಳೂರು : ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಏರಿಕೆಯಾಗಿದ್ದು, ಹೆಚ್ಚಿನ ಬಿಸಿಲು ಇರುವ ಕಾರಣ, ಗ್ರಾಮೀಣ ಭಾಗದ…