ಚಾಮರಾಜನಗರ

ಗುಂಡ್ಲುಪೇಟೆ: ಪಡಗೂರು ಬಳಿ ಎರಡು ಚಿರತೆ ಮರಿಗಳ ರಕ್ಷಣೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು

ಗುಂಡ್ಲುಪೇಟೆ: ತಾಲ್ಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ ಎರಡು ಚಿರತೆ ಮರಿಗಳನ್ನು ರಕ್ಷಣೆ ಮಾಡಲಾಗಿದೆ.

ಚಿರತೆ ಮರಿಗಳು ಸಿಕ್ಕಿದ್ದ ಹಿನ್ನೆಲೆಯಲ್ಲಿ ತಾಯಿ ಚಿರತೆ ಬರುವ ನಿರೀಕ್ಷೆಯ ಮೇರೆಗೆ ಜಮೀನಲ್ಲಿ ರಾತ್ರಿ ಬೋನ್‌ನಲ್ಲಿ ಚಿರತೆ ಮರಿ ಇರಿಸಲಾಗಿತ್ತು. ಆದರೆ ತಾಯಿ ಚಿರತೆ ಬಾರದ ಕಾರಣ ಬೋನಿನಲ್ಲಿದ್ದ ಚಿರತೆ ಮರಿಗಳನ್ನು ಗುಂಡ್ಲುಪೇಟೆ ಬಫರ್ ಜೋನ್ ವಲಯಕ್ಕೆ ತಂದು ಆರೈಕೆ ಮಾಡಲಾಗುತ್ತಿದೆ. ಮತ್ತೆ ಸಂಜೆ ಮರಿಗಳನ್ನು ಬೋನಿನಲ್ಲಿ ಇರಿಸಲಾಗುವುದು. ಎರಡ್ಮೂರು ದಿನಗಳವರೆಗೂ ತಾಯಿ ಚಿರತೆ ಕಾಣದಿದ್ದರೆ ಅವುಗಳನ್ನು ಪುನರ್ವಸತಿ ಕೇಂದ್ರಕ್ಕೆ‌ ಕಳಿಸಲಾಗುವುದು ಎಂದು ವಲಯಾಧಿಕಾರಿ ಶಿವಕುಮಾರ್ ತಿಳಿಸಿದರು.

ಮರಿ ಚಿರತೆಗಳು ತಾಯಿ ಚಿರತೆಯ ಜೊತೆ ಇರಬೇಕಾದ್ದರಿಂದ ಚಿರತೆ ಸೆರೆಗೆ ಬೋನ್ ಇರಿಸಲಾಗಿದೆ. ಮರಿಗಳ ಹುಡುಕಾಟದಲ್ಲಿ ತಾಯಿ ಚಿರತೆ ಬೋನಿಗೆ ಬಿದ್ದರೆ ತಾಯಿ ಚಿರತೆ ಜೊತೆ ಮರಿ ಚಿರತೆಗಳನ್ನು ಕಾಡಿಗೆ ಬಿಡಲಾಗುತ್ತದೆ. ತಾಯಿ ಸಿಗದಿದ್ದರೆ ಮರಿಗಳನ್ನು‌ ಪೋಷಣೆ ಮಾಡುವ ಉದ್ದೇಶದಿಂದ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು ಎಂದು‌ ಅರಣ್ಯಾಧಿಕಾರಿ ತಿಳಿಸಿದರು.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಮಾರ್ಚ್.‌10ರ ಬಳಿಕ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟ.?

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಲು…

5 mins ago

ಓದುಗರ ಪತ್ರ: ಲಂಚದ ಹಾವಳಿಗೆ ಕಡಿವಾಣ ಹಾಕಿ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಮಿತಿ ಮೀರಿದೆ. ಉಳ್ಳವರು ಲಂಚ ಕೊಟ್ಟು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಆದರೆ…

8 mins ago

ಓದುಗರ ಪತ್ರ: ಗ್ಯಾರಂಟಿ ಯೋಜನೆಗೆ ಪರಿಶಿಷ್ಟರ ಮೀಸಲು ಹಣ ಬಳಸಬೇಡಿ

ಮಾರ್ಚ್ ೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೨೬-೨೭ ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯದಲ್ಲಿ ಪರಿಶಿಷ್ಟ ಜಾತಿ…

10 mins ago

ಓದುಗರ ಪತ್ರ: ಚರಂಡಿ ಸ್ವಚ್ಛಗೊಳಿಸಿ

ಚಾಮರಾಜನಗರದ ಅಗ್ರಹಾರ ಮೊದಲಾದ ಪ್ರದೇಶದಲ್ಲಿರುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ಸ್ವಚ್ಛತೆ ಇಲ್ಲದೆ ಸೊಳ್ಳೆ, ನೊಣಗಳ ಹಾವಳಿ ತೀವ್ರವಾಗಿದ್ದು, ರೋಗ ಭೀತಿಯುಂಟಾಗಿದೆ.…

12 mins ago

ಓದುಗರ ಪತ್ರ: ಶಾಲಾ ಪ್ರವೇಶಾತಿಗೆ ವಯೋಮಿತಿ ಸಡಿಲಿಸಿ

ಒಂದನೇ ತರಗತಿ ಪ್ರವೇಶಕ್ಕೆ ಜೂನ್ ೧ರ ಕಟ್ಟುನಿಟ್ಟಿನ ವಯೋಮಿತಿ ನಿಗದಿಪಡಿಸಿರುವುದು ರಾಜ್ಯದ ಸುಮಾರು ೨.೩೦ ಲಕ್ಷ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ…

16 mins ago

ಬಿಸಿಲ ದಾಹ ತಣಿಸಲು ಕಲ್ಲಂಗಡಿ ಲಗ್ಗೆ

ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಕಲ್ಲಂಗಡಿ ಪೂರೈಕೆ; ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯ ಮೈಸೂರು: ಬೇಸಿಗೆ ಬಿಸಿಲಿನ ದಾಹ ತಣಿಸಲು ಮಾರುಕಟ್ಟೆಗೆ ಲಗ್ಗೆ…

19 mins ago