gundlupete
ಗುಂಡ್ಲುಪೇಟೆ: ತಾಲ್ಲೂಕಿನ ಕೊಡಸೋಗೆ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ರಾಜೇಂದ್ರ ಶ್ರೀಗಳವರ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಅತಿಥಿ ಗಣ್ಯರು, ಮುಖ್ಯ ಶಿಕ್ಷಕರು, ಗ್ರಾಮದ ಮುಖಂಡರು ಪುಷ್ಪ ನಮನವನ್ನು ಸಲ್ಲಿಸಿದ ನಂತರ ಸುತ್ತೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಶಿಕ್ಷಕ, ಹವ್ಯಾಸಿ ಬರಹಗಾರ ಎನ್.ಪಿ.ಪರಶಿವಮೂರ್ತಿ ಅವರು ಮಾತನಾಡಿ “ಸಮಾಜದ ಅಭ್ಯುದಯಕ್ಕಾಗಿ ಶ್ರೀಗಂಧದ ಕೊರಡಿನಂತೆ ತೇಯ್ದವರು” ರಾಜೇಂದ್ರ ಶ್ರೀಗಳು.
ಶ್ರೀಗಳವರು ಲೋಕ ಕಾರುಣ್ಯದ ನಿಧಿ, ಸುರಧೇನು. ಮಾತೃ ಹೃದಯಿಗಳು, ಉದಾರತೆಯ ಗಣಿ, ಸರಳತೆಯ ಸಾಕಾರಮೂರ್ತಿ, ಕಾವಿಗೆ ಗೌರವವನ್ನು ತಂದು ಕೊಟ್ಟವರು. ಘಟದಿಂದ ಮಠವೇ ಹೊರತು ಮಠದಿಂದ ಘಟವಲ್ಲ ಎಂಬುದನ್ನು ಅಕ್ಷರಶಃ ಸಾಧಿಸಿ ತೋರಿಸಿದವರು. ಅಂದು ತ್ರಿವಿಧ ದಾಸೋಹದಲ್ಲಿ ಮಾಡಿದಂತಹ ಸಾಧನೆಯಿಂದ ಇಂದು ಲಕ್ಷಾಂತರ ವಿದ್ಯಾರ್ಥಿಗಳ ಮನೆ ಮನಗಳಲ್ಲಿ ದಿವ್ಯ ಜ್ಯೋತಿಯಾಗಿ ಬೆಳಗುತ್ತಿದ್ದಾರೆ. ಅವರು ಅಂದು ನೆಟ್ಟಂತಹ ತ್ರಿವಿಧ ದಾಸೋಹದ (ಅನ್ನ, ಅಕ್ಷರ, ಆಶ್ರಯ) ಬೀಜ ಇಂದು ಹೆಮ್ಮರವಾಗಿ ವಿಶ್ವದಾದ್ಯಂತ ಪಸರಿಸಿ ಅದರ ನೆರಳಿನಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಗೆಯೇ ಸಂಸ್ಥೆ ಮತ್ತು ಮಠವನ್ನು ಬೆಳೆಸುವುದರ ಜೊತೆ ಜೊತೆಗೆ ಸಮಾಜಕ್ಕೆ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಇಂದು ಜೆಎಸ್ಎಸ್ ಸಂಸ್ಥೆಗಳಲ್ಲಿ ಲಕ್ಷೋಪಲಕ್ಷ ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಪಡೆದುಕೊಳ್ಳುತ್ತಿದ್ದಾರೆ. “ಪರೋಪಕಾರಂ ಇದಂ ಶರೀರಂ” ಎಂಬ ದೈವ ನುಡಿಯಂತೆ ಸಮಾಜದಿಂದ ತಂದು ಸಮಾಜದ ಉನ್ನತಿಗಾಗಿ ನಿಸ್ವಾರ್ಥದಿಂದ ಧಾರೆಯೆರೆದವರು. ಎಲ್ಲಾ ಸಮಾಜದ ಅನಾಥ, ನಿರ್ಗತಿಕರ, ಆರ್ಥಿಕವಾಗಿ ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದವರು ರಾಜೇಂದ್ರ ಶ್ರೀಗಳವರು. ಇಂದು ಜೆಎಸ್ಎಸ್ ಸಂಸ್ಥೆಗಳು ರಾಜ್ಯವಲ್ಲದೆ, ಹೊರ ರಾಜ್ಯಗಳು, ವಿದೇಶಗಳಲ್ಲಿ ಹಾಗೂ ಜಗದಗಲ ಮುಗಿಲೆತ್ತರಕ್ಕೆ ಸೇವೆಯನ್ನು ಸಲ್ಲಿಸುತ್ತಿರುವುದರ ಹಿಂದೆ ಶ್ರೀಗಳವರ ಕಾಯಕ ನಿಷ್ಠೆ, ನಿಸ್ವಾರ್ಥ ಸೇವೆ, ಆಚಲವಾದ ನಂಬಿಕೆ, ದೂರದರ್ಶಿತ್ವದ ಚಿಂತನೆ, ಸಾಮಾಜಿಕ ಕಳಕಳಿಯನ್ನು ಅಲ್ಲಗಳೆಯುವಂತಿಲ್ಲ. ಉರಿಯುಂಡ ಕರ್ಪೂರದಂತೆ ಪರಿಮಳವನ್ನು ಸಮಾಜಕ್ಕೆ ನೀಡಿದವರು ರಾಜೇಂದ್ರ ಶ್ರೀಗಳೆಂದು ನುಡಿದರು.
ಮುಖ್ಯ ಅತಿಥಿಗಳಾದ ಕೆ.ಎಂ.ಬಸವಣ್ಣ ಅವರು ಮಾತನಾಡಿ, ಸುತ್ತೂರು ಮಠಕ್ಕೂ ಗುಂಡ್ಲುಪೇಟೆ ತಾಲ್ಲೂಕಿಗೂ ಅವಿನಾಭಾವ ಸಂಬಂಧವಿದೆ. ರಾಜೇಂದ್ರ ಶ್ರೀಗಳವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ಬೊಮ್ಮಲಾಪುರದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ವಹಿಸಿದ್ದರು. ಮುಖ್ಯ ಶಿಕ್ಷಕರಾದ ರವಿಕುಮಾರ್ ಟಿ.ಎನ್, ನೌಕರ ವೃಂದ, ಕೊಡಸೋಗೆ ಕೆ.ಎಂ ಬಸವಣ್ಣನವರು ಅ.ಭಾ.ವೀ.ಮಹಾಸಭಾ ಜಿಲ್ಲಾ ಅಧ್ಯಕ್ಷರು ಚಾಮರಾಜನಗರ. ಕೊಡಸೋಗೆ ಗ್ರಾಮದ ಮುಖಂಡರಾದ ಎಂ.ನಾಗಮಲ್ಲಪ್ಪ, ಕೆ.ಎಲ್ ಮಹದೇವಸ್ವಾಮಿ, ರಮೇಶ್, ಜಯಚಂದ್ರ, ಪೋಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…
ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…