ಚಾಮರಾಜನಗರ

ಗುಂಡ್ಲುಪೇಟೆ | ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ; ಕೊಲೆಯಲ್ಲಿ ಅಂತ್ಯ

ಗುಂಡ್ಲುಪೇಟೆ : ಕ್ಷುಲ್ಲಕ ವಿಚಾರಕ್ಕೆ ಶುರುವಾದ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ಹೊರವಲಯದ ಜೆಪಿ ಇನ್‌ ಸಮೀಪದಲ್ಲಿ ಇರುವ ಹಿಂದೂಸ್ತಾನ್ ಇಟ್ಟಿಗೆ ಪ್ಯಾಕ್ಟರಿಯ ವಾಸದ ಮನೆ ಮುಂಭಾಗ ಎಣ್ಣೆ ಪಾರ್ಟಿ ಮಾಡುತಿದ್ದ ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಲಾಂಗ್ ನಿಂದ ಸ್ನೇಹಿತರೇ ಹೊಡೆದು ಪೈಜಲ್ ( 47) ಎಂಬ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ:-ಗುಂಡ್ಲುಪೇಟೆ | ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ; ಕೊಲೆಯಲ್ಲಿ ಅಂತ್ಯ

ಮಂಗಳವಾರ ರಾತ್ರಿ ಮೃತ ಪೈಜಲ್ ಅತನ ಸ್ನೇಹಿತರಾದ ಕುಟ್ಟಿಪ್ಪಾ, ಜೊತೆ ಗುಂಡ್ಲುಪೇಟೆ ಪಟ್ಟಣಕ್ಕೆ ಹೋಗುತ್ತೇನೆಂದು ತೆರಳಿದ್ದು ಅಲ್ಲಿಂದ ಸ್ನೇಹಿತರಾದ ಸೋಮೇಶ್, ಮಣಿವಣ್ಣನ್@ ರಂಜಿತ್, ರಘುರಾಮ್ ಜೊತೆ ಸೊಮೇಶ್ ಇದ್ದ ಜಾಗಕ್ಕೆ ಪಾರ್ಟಿ‌ಮಾಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಣಿವಣ್ಣನ್ ಸೊಮೆಶನ ಕಾರನ್ನು ಮಾರಾಟಕ್ಕೆ ಕೊಡು ಎಂದು ಕೇಳಿದ್ದಾನೆ. ಇದಕ್ಕೆ ಪೈಜಲ್ ಸೊಮೇಶ್ ನ ಕಾರು ಯಾವುದೋ ಕೇಸ್ ಗೆ ಪಿಟ್ ಹಾಗಿದೆ ನೋಡಿಕೊಂಡು ತೆಗೆದುಕೊ ಎಂದಿದ್ದಾನೆ. ಇದಕ್ಕೆ ಸ್ನೆಹಿತನಾಗಿ ನನ್ನ ಕಾರಿನ ವ್ಯಾಪಾರದ ಬಗ್ಗೆ ತಕರಾರು ಮಾಡುತ್ತೀಯ ಎಂದು ಆಗ ಸೊಮೇಶ್ ಹೊಡೆದಿದ್ದಾನೆ ಮಣಿವಣ್ಣನ್ ಲಾಂಗ್ ನಿಂದ ತಲೆ ಕತ್ತಿಗೆ ಹಲ್ಲೆ ಮಾಡಿದಾಗ ತಿವ್ರ ರಕ್ತಸ್ರಾವವಾಗಿದೆ ತಕ್ಷಣ ಕಾರಿನಲ್ಲಿ ಅವರೇ ಸರ್ಕಾರಿ ಅಸ್ಪತ್ರೆಗೆ ಕರೆತಂದಿದ್ದಾರೆ ಆದರೆ ಪೈಜಲ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಎಲ್ಲಾ ಆರೋಪಿಗಳು ತಮಿಳುನಾಡಿನ ಮೂಲದವರಾಗಿದ್ದು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮೇಶ್, ಮಣಿವಣ್ಣನ್, ರಘುರಾಮ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

1 second ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

8 mins ago

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

16 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

17 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

18 hours ago