ಚಾಮರಾಜನಗರ

ರೈತ ಕುಟುಂಬದ ಮದುವೆಗೆ ಜೋಡೆತ್ತು ಸಾಕ್ಷಿ… !

ಚಾಮರಾಜನಗರ: ಮಠಾಧೀಶರು, ರಾಜಕೀಯ ನಾಯಕರು, ಚಿತ್ರನಟರು ಹೀಗೆ ಸೆಲೆಬ್ರಿಟಿಗಳನ್ನು ಮದುವೆ ಮಂಟಪಕ್ಕೆ ಕರೆತಂದು ಸಪ್ತಪದಿ ತುಳಿಯುವ ಈ ದಿನಮಾನಗಳಲ್ಲಿ ತನ್ನ ಜೀವನೋಪಾಯಕ್ಕೆ ಆಧಾರವಾಗಿರುವ ಎತ್ತುಗಳನ್ನು ಅಲಂಕರಿಸಿ ಕಲ್ಯಾಣ ಮಂಟಪಕ್ಕೆ ಕರೆತಂದು ಅವುಗಳ ಸಮ್ಮುಖದಲ್ಲಿ ವಿವಾಹವಾಗಿರುವ ಅಪರೂಪದ ಪ್ರಸಂಗಕ್ಕೆ ನವಜೋಡಿಗಳಾದ ಮಹೇಶ ಮತ್ತು ಮಹೇಶ್ವರಿ ಸಾಕ್ಷಿಯಾಗಿದ್ದಾರೆ.

ತಾಲ್ಲೂಕಿನ ಪಣ್ಯದಹುಂಡಿ ಶಂಕರೇಶ್ವರ ಕಲ್ಯಾಣಮಂಟಪದಲ್ಲಿ ಇಂತಹದೊಂದು ಅಪರೂಪದ ಮದುವೆ ಸೋಮವಾರ ನಡೆಯಿತು. 2.80 ೮೦ ಲಕ್ಷ ರೂ. ಬೆಲೆಬಾಳುವ ಹಳ್ಳಿಕಾರ್ ತಳಿಯ ಎತ್ತುಗಳು ಮದುವೆಗೆ ಬಂದ ಎಲ್ಲರನ್ನು ಪ್ರವೇಶದ್ವಾರದಲ್ಲಿ ಸ್ವಾಗತಿಸಿ ಆಕರ್ಷಿಸಿದವು. ಎತ್ತುಗಳನ್ನು ಕಟ್ಟಲಾಗಿದ್ದ ಶಾಮಿಯಾನದ ಸುತ್ತಲೂ ವಧು-ವರರು ಕೂರುವ ಮಂಟಪದಂತೆ ಶೃಂಗರಿಸಲಾಗಿತ್ತು.

ಜಾನುವಾರು ಸಂತೆಗಳಿಂದ ಹಳ್ಳಿಕಾರ್ ಎತ್ತು, ಹಸುಗಳನ್ನು ಖರೀದಿ ಮಾಡಿ, ಚೆನ್ನಾಗಿ ಆರೈಕೆ ಮಾಡಿ ದಷ್ಟಪುಷ್ಟವಾಗಿ ಬೆಳೆದ ಬಳಿಕ ಅಗತ್ಯ ಇರುವ ರೈತರಿಗೆ ಮಾರಾಟ ಮಾಡುವುದು ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರ ಮುಖ್ಯಕಸುಬು. ಇದರಿಂದಲೇ ಅವರು ಜೀವನ ಸಾಗಿಸುತ್ತಿದ್ದು ತನಗೆ ಬದುಕು ಕಟ್ಟಿಕೊಟ್ಟಿರುವ ಎತ್ತುಗಳು ತನ್ನ ಜೀವನ ಸಂಗಾತಿ ಮಹೇಶ್ವರಿ ಅವರನ್ನು ಕೈಹಿಡಿಯುವ ಸಂದರ್ಭದಲ್ಲಿ ಸಾಕ್ಷಿಯಾಗಬೇಕು. ಅವೂ ಕೂಡ ಈ ಸಂತೋಷದ ಗಳಿಗೆಗೆ ಸಾಕ್ಷಿಯಾಗಬೇಕೆಂಬ ಉದ್ದೇಶದಿಂದ ವಿವಾಹ ಮಂಟಪಕ್ಕೆ ಕರೆತಂದಿದ್ದಾರೆ. ಮಹೇಶ್ ಅವರ ಈ ಯೋಚನೆಗೆ ವಿವಾಹಕ್ಕೆ ಬಂದ ಬಂಧು ಮಿತ್ರರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು, ಮಕ್ಕಳಾದಿಯಾಗಿ ಮದುವೆಗೆ ಬಂದ ಅತಿಥಿಗಳು ಈ ಸೆಲೆಬ್ರಿಟಿ ಜೋಡೆತ್ತುಗಳ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಮಹೇಶ್‌ ಅವರ ಕುಟುಂಬ ಅವರ ತಾತನ ಕಾಲದಿಂದಲೂ ಜಾನುವಾರು ವ್ಯಾಪಾರ ಮಾಡಿಕೊಂಡು ಬಂದಿದೆ. ಈ ವೃತ್ತಿಯೇ ಇವರ ಜೀವನೋಪಾಯವಾಗಿದೆ. ಸಹಜವಾಗಿಯೇ ಇವರ ಮದುವೆಗೆ ಮಂಡ್ಯ, ಕೆ.ಆರ್.ನಗರ, ಶ್ರೀರಂಗಪಟ್ಟಣ, ರಾಮನಗರ ಮತ್ತಿತರ ಭಾಗದಿಂದ ದನಕರು ವ್ಯಾಪಾರ ಮಾಡುವ ಸಾಕಷ್ಟು ಮಂದಿ ಆಗಮಿಸಿದ್ದರು.

ಹಳ್ಳಿಕಾರ್‌ ಎತ್ತುಗಳೆಂದರೆ ನನಗೆ ಹಿಂದಿನಿಂದಲೂ ವಿಶೇಷ ಮಮತೆ. 2009ರ ಸುತ್ತೂರು ಜಾತ್ರೆಯಲ್ಲಿ ನನ್ನ ಎತ್ತುಗಳು ಚಾಂಪಿಯನ್ ಆಗಿದ್ದವು. ಮುಡುಕುತೊರೆ ಜಾತ್ರೆಯಲ್ಲೂ ಬಹುಮಾನ ಪಡೆದಿದ್ದವು. ತಾತನ ಕಾಲದಿಂದ ನಮ್ಮ ಕುಟುಂಬಕ್ಕೆ ಆಧಾರವಾದ -ಎತ್ತುಗಳ ಸಮ್ಮುಖದಲ್ಲಿಯೇ ಮದುವೆಯಾಗುವುದು ಹೆಚ್ಚು ಸೂಕ್ತ ಎಂದು ಭಾವಿಸಿದೆ. ಈ ನಿರ್ಧಾರಕ್ಕೆ ನನ್ನ ಹೆತ್ತವರು ಮತ್ತು ಮಹೇಶ್ವರಿ ಹೆತ್ತವರು ಬೆಂಬಲವಾಗಿ ನಿಂತರು. ಮದುವೆ ಬಂದ ಅತಿಥಿಗಳೆಲ್ಲರೂ ಖುಷಿಪಟ್ಟಿದ್ದಾರೆ. ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಎನಿಸಿದೆ ಎನ್ನುತ್ತಾರೆ ಮಹೇಶ್.

ಮಹೇಶ್‌ ಅವರು ತಮ್ಮ ಆರು ಎಕರೆ ಜಮೀನಿನ ಕೃಷಿ ಜತೆಗೆ ಜಾನುವಾರು ವ್ಯಾಪಾರದಿಂದ ಉತ್ತಮ ಆದಾಯ ಗಳಿಸುತ್ತಿದ್ದು ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ನಂಜನಗೂಡು ತಾಲ್ಲೂಕು ತೊರವಳ್ಳಿಯ ಮಹೇಶ್ವರಿ ಅವರ ಪೋಷಕರು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ.

ಹುಡುಗ -ಹುಡುಗಿ ಕುಟುಂಬಗಳೆರಡೂ ಕೃಷಿಯನ್ನೇ ನಂಬಿದ್ದು ಈ ಮದುವೆ ಆಚರಣೆ ರೀತಿ ತಮಗೆ ಖುಷಿ ತಂದಿದೆ ಎಂದು ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಯಲಕ್ಕೂರು ಲಿಂಗರಾಜು ತಿಳಿಸಿದರು.

andolana

Recent Posts

ಚಾ.ನಗರ | ಬೇಡರಪುರದಲ್ಲಿ ಮತ್ತೊಂದು ಚಿರತೆ ಸೆರೆ

ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…

39 mins ago

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಿ : ಡಿಸಿ, ಸಿಇಓಗಳಿಗೆ ಮಧು ಬಂಗಾರಪ್ಪ ಸೂಚನೆ

ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…

1 hour ago

ಕಾರು-ಬೈಕ್‌ ನಡುರೆ ಭೀಕರ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…

1 hour ago

ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯಲ್ಲಿ ಶೇ20 ರಷ್ಟು ಹೆಚ್ಚಳ

ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…

1 hour ago

ಇರಾನ್‌ ಡ್ರೋನ್‌ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ : ಚಿತ್ರ ಬಿಡುಗಡೆ

ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…

2 hours ago

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

3 hours ago