london marriage
* ಮಾವು, ಹಲಸಿನ ಮರದಡಿ ವಿವಾಹಶಾಸ್ತ್ರ
* ಹೊಲದಲ್ಲಿ ಸಿಗುವ ಬಗೆ ಬಗೆಯ ಸೊಪ್ಪುಗಳಿಂದ ಅಲಂಕಾರ ಜೂನ್.02ರಂದು ವಿವಾಹ
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟ ವನ್ಯಧಾಮದ ನಿಸರ್ಗದ ಮಡಿಲಿನಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣೆ, ರೇಷ್ಮೆ, ಪುಷ್ಪ ಹಾಗೂ ಅರಣ್ಯ ಕೃಷಿಯನ್ನು ಮಾಡುವ ಮೂಲಕ ತಮ್ಮ ಜಮೀನನ್ನು ಕೃಷಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಿರುವ ಪ್ರಗತಿ ಪರ ರೈತರೊಬ್ಬರು ಲಂಡನ್‌ನಲ್ಲಿ ಕಾನೂನು ಪದವಿ ಪಡೆದಿರುವ ಪುತ್ರಿ ಮದುವೆಯನ್ನು ಹೊಲದಲ್ಲಿ ನಡೆಸಲಿದ್ದಾರೆ.
ರೈತ ಬರೀ ಬೆಳೆ ಬೆಳೆಯುತ್ತಾ ಕುಳಿತರೆ ಸಾಲದು, ತನ್ನ ಕೃಷಿ ಚಟುವಟಿಕೆಯನ್ನು ಪ್ರತಿಯೊಬ್ಬರಿಗೂ ಪರಿಚಯಿಸಬೇಕು. ಅದರ ಮೂಲಕ ರೈತನ ಕೃಷಿ ಭೂಮಿಯೂ ಕೃಷಿ ಪ್ರವಾಸೋದ್ಯಮ ತಾಣವಾಗಬೇಕು ಎಂಬ ಪರಿಕಲ್ಪನೆ ಹುಟ್ಟು ಹಾಕಿ, ಕಿಸಾನ್ ಅಗ್ರೋ ಟೂರಿಸಂ ಡೆವಲಪ್ಮೆಂಟ್ ಕಂಪನಿ ಮೂಲಕ ರೈತರನ್ನು ಕೃಷಿ ಪ್ರವಾಸೋದ್ಯಮಿಗಳಾಗಿಸಲು ಹೊರಟಿರುವ ಗಡಿ ಜಿಲ್ಲೆ ಚಾಮರಾಜನಗರದ ಚಿಂಚಳ್ಳಿಯ ರೈತ ಪಿ.ದಯಾನಂದ್ ಅವರು ತಮ್ಮ ಪುತ್ರಿ ವಿವಾಹವನ್ನು ತಮ್ಮ ಹೊಲದಲ್ಲೇ ಏರ್ಪಡಿಸಿದ್ದಾರೆ.
ತಮ್ಮ ಹೊಲವನ್ನು ನಿಸರ್ಗದ ಮಡಿಲಿನಂತೆ ಸೃಷ್ಟಿ ಮಾಡಿದ್ದು, ಅಲ್ಲಿ ಏನುಂಟು ಏನಿಲ್ಲ ಎಂಬುವಂತೆ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಎಲ್ಲೆಡೆಯಿಂದ ಸಂಗ್ರಹಿಸಿ ತಂದು, ಸಂರಕ್ಷಣೆ ಮಾಡುವ ಮೂಲಕ ಹೊಲದಲ್ಲೇ ಕಾಡನ್ನೇ ಬೆಳೆಸಿದ್ದಾರೆ. ಅಲ್ಲಿ ದುಂಬಿಗಳ ಝೇಂಕಾರ, ಚಿಟ್ಟೆ ಪಕ್ಷಿಗಳ ಕಲರವ ಕೇಳುವಂತಹ ವಾತವರಣ ನಿರ್ಮಾಣಮಾಡಿದ್ದು, ಅಲ್ಲೇ ತಮ್ಮ ದ್ವಿತೀಯ ಪುತ್ರಿ ರಶ್ಮಿ ದಯಾನಂದ್ ಅವರನ್ನು ಬೆಂಗಳೂರಿನ ಕುಬೇರ್ ಅವರಿಗೆ ಧಾರೆ ಎರೆದು ಕೊಡಲಿದ್ದಾರೆ.
ಈ ಹಿಂದೆ ಮದುವೆಗಳು ಹಳ್ಳಿಯ ಮನೆಗಳಲ್ಲಿ ನೆಂಟರಿಷ್ಟರ ಸಮ್ಮುಖದಲ್ಲಿ ನಡೆಸುತ್ತಿದ್ದವು. ಇದೀಗ ನಮ್ಮ ಮಗಳ ಮದುವೆಯನ್ನು ನಾನು ಹತ್ತಾರು ವರ್ಷಗಳಿಂದ ಶ್ರಮಪಟ್ಟು ನೆಟ್ಟಿರುವ ಮರಗಿಡಗಳು, ಪಕ್ಷಿಗಳ ಕಲರವ, ದುಂಬಿಯ ಜೈಕಾರದೊಂದಿಗೆ ಇಲ್ಲೇ ಸಿಗುವ ಸ್ಧಳೀಯ ಸಸ್ಯಗಳ ಅಲಂಕಾರರೊಂದಿಗೆ ನಡೆಯಲಿ. ಮದುವೆಗೆ ಬರುವ ಬಂಧು ಬಾಂಧವರಿಗೆ ಕೃಷಿ ಪ್ರವಾಸೋದ್ಯಮವೂ ಆಗಲಿ, ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣೆ, ರೇಷ್ಮೆ, ಹಾಗೂ ಅರಣ್ಯ ಕೃಷಿಯನ್ನು ನೋಡಿ ಸಂಭ್ರಮಿಸುವ ಮೂಲಕ ಮದುವೆಯಲ್ಲಿ ಭಾಗಿಯಾಗಲಿ ಎಂಬ ಉದ್ದೇಶದಿಂದ ಹೊಲದಲ್ಲೇ ಮಾವು, ಹಲಸಿನ ಮರದಡಿ ವಿವಾಹ ನಡೆಸುತ್ತಿದ್ದೇವೆ. ಇದೇ ನಮ್ಮ ಮಗಳು ಮತ್ತು ಅಳಿಯನ ಆಶಯವಾಗಿತ್ತು ಎನ್ನುತ್ತಾರೆ ದಯಾನಂದ್.
ಮದುವೆಗೆ ಬರುವವರು ಸಾವಿರಾರು ಸಸ್ಯ ವರ್ಗಗಳ ಜೊತೆಗೆ ಹತ್ತಾರು ಬೆಳೆ ನೋಡಬಹುದಾಗಿದ್ದು, ನೂರಾರು ಬಗೆ ಬಗೆಯ ಹಣ್ಣುಗಳನ್ನು ಸವಿಯಬಹುದಾಗಿದೆ. ಬರಗೂರ್, ಹಳ್ಳಿಕಾರ್, ತಳಿ ಹಸುಗಳು, ಕುರಿ, ಕೋಳಿ, ಮೇಕೆ ಹಾಗೂ ಕತ್ತೆಗಳನ್ನು ಸಾಕುತ್ತಿರುವುದನ್ನು ನೋಡಬಹುದು. ಎಣ್ಣೆ ಘಟಕ, ಸುಗಂಧ ತಯಾರಿಕಾ ಘಟಕವೂ ಇಲ್ಲಿದ್ದು, ತೋಟಕ್ಕೆ ಭೇಟಿ ನೀಡುವವರಿಗೆ ಕೃಷಿ ತಿಳುವಳಿಕೆ ಮೂಡಿಸಬೇಕು ಎಂಬ ಉದ್ದೇಶದಿಂದ ವಿವಿಧ ಬಗೆಯ ಪರಿಕರಗಳ ಜೊತೆಗೆ ಎತ್ತಿನ ಗಾಡಿ, ಕುದುರೆಗಾಡಿ, ವಿವಿಧ ಮಾದರಿಯ ಸ್ಕೂಟರ್ ಮತ್ತು ಕಾರುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.
ಹಳ್ಳಿಗಾಡಿನವರೇ ಸಾಲ ಸೋಲವಾದ್ರು ಸರಿ ಎಂದು ದೊಡ್ಡ ದೊಡ್ಡ ನಗರಿ, ವಿದೇಶದಲ್ಲಿ ಮದುವೆ ಮಾಡಿಸುವ ಈ ಕಾಲದಲ್ಲಿ ಲಂಡನ್‌ನಲ್ಲಿ ವ್ಯಾಸಂಗ ಮುಗಿಸಿರುವ ಪುತ್ರಿ ವಿವಾಹವನ್ನು ಹನೂರು ತಾಲ್ಲೂಕಿನ ಚಿಂಚಹಳ್ಳಿ ಗ್ರಾಮದ ರೈತ ಪಿ. ದಯಾನಂದ್ ಅವರು ಶ್ರಮಪಟ್ಟು ಬೆಳೆಸಿರುವ ಸಾವಿರಾರು ಸಸ್ಯಕಾಶಿಯ ನಡುವೆ ಸಿಗುವ ಬಗೆ ಬಗೆಯ ಸೊಪ್ಪುಗಳಿಂದ ಅಲಂಕಾರ ಮಾವು, ಹಲಸಿನ ಮರದಡಿ ಚಪ್ಪರ ನಿರ್ಮಿಸಿ ಪುತ್ರಿ ವಿವಾಹಶಾಸ್ತ್ರಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ಬೆಂಗಳೂರು: ನಾವು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಿಜಯೇಂದ್ರ ಹಾಗೂ ಆರ್.ಅಶೋಕ್ ಹೇಳಲಿ…
ಬೆಂಗಳೂರು: ಮನರೇಗಾ ಯೋಜನೆಯ ಹೆಸರನ್ನು ವಿಬಿ ಜೀ ರಾಮ್ ಜೀ ಎಂದು ಬದಲಾವಣೆ ಮಾಡಿದ ಕೇಂದ್ರ ಸರ್ಕಾರದ ನಡೆ ವಿರುದ್ಧ…
ಮೈಸೂರು: ವಿಧಾನಮಂಡಲ ಜಂಟಿ ಅಧಿವೇಶನದ ದಿನದಂದು ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಂಡ ಕ್ರಮ ಕರ್ನಾಟಕದ ಇತಿಹಾಸದಲ್ಲೇ ನಡೆದ…
ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಅತ್ಯಂತ ಸಾಹಸಮಯ ಕೋವರ್ಟ್ ಆಪರೇಷನ್ ವಿವರಗಳು ಈಗ ಬೆಳಕಿಗೆ ಬಂದಿವೆ. ಕಳೆದ ವರ್ಷ…
ಡಾಕಾ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಕುಟುಂಬವು ಇದನ್ನು ಯೋಜಿತ ಕೊಲೆ ಎಂದು ಆರೋಪಿಸಿದೆ. ಬಾಂಗ್ಲಾದೇಶದ…
ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳನ್ನು ತಾಯಿ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು…