ಚಾಮರಾಜನಗರ : ಆನೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿ ಬೈಕ್ ಸವಾರ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿರುವ ಘಟನೆ ಚಾಮರಾಜನಗರ ಗಡಿ ಭಾಗವಾದ ತಮಿಳುನಾಡಿನ ತಲೆಮಲೈಯಲ್ಲಿ ನಡೆದಿದೆ.
ನೈನಿತಾಳಪುರಂ ಗ್ರಾಮದರಾಮಸ್ವಾಮಿ ಎಂಬವರು ಕಾಲುವೆಗೆ ಬಿದ್ದಿರುವ ಬೈಕ್ ಸವಾರ, ರಸ್ತೆ ಮಧ್ಯೆ ಬಂದು ನಿಂತ ಆನೆಯನ್ನು ಗಮನಿಸಿದ ರಾಮಸ್ವಾಮಿ ದಿಢೀರ್ ಬಂದಿದ್ದಾರೆ.
ಆನೆ ನೋಡುತ್ತಿದ್ದಂತೆ ಗಾಬರಿಗೊಂಡು ಆಯತಪ್ಪಿ ಬಿದ್ದಿದ್ದು, ಬಳಿಕ ಇನ್ನಿತರ ಸವಾರರ ಸಮಯ ಪ್ರಜ್ಞೆಯಿಂದ ಆನೆ ತಿರುಗುವ ಮುನ್ನಇತ್ತಕಡೆ ಬಂದಿದ್ದಾರೆ.
ಈ ಘಟನೆ ಸೋಮವಾರ ಸಂಜೆ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಚಾಮರಾಜನಗರ ಗಡಿಭಾಗದಲ್ಲಿ ಆನೆಗಳು ಹೆಚ್ಚಾಗಿ ಕಾಣಿಸಿಕೊಳ್ಳಯತ್ತಿವೆ. ಆದರೆ ಈವರೆಗೆ ಪ್ರಾಣಹಾನಿಯ ಬಗ್ಗೆ ವರದಿಗಳಾಗಿಲ್ಲ. ಇತ್ತೀಚೆಗೆ ತಮಿಳುನಾಡಿನ ತಲೆಮಲೈಯಲ್ಲಿ ರೈಲು ಹಳಿ ದಾಟುವ ವೇಳೆ ಆನೆ ಕೂದಲೆಳೆ ಅಂತರದಲ್ಲಿ ಪಾರಾಗಿರುವುದುಕಂಡು ಬಂದಿತ್ತು.
ಕೃಷಿಗೆ ಹಾನಿ ಮಾಡುತ್ತಿದ್ದ ಆನೆಯನ್ನು ತೋಟದಿಂದ ಓಡಿಸಲಾಗುತ್ತಿತ್ತು. ಆಗ ಆನೆ ಹಳಿ ಮೇಲೆ ನಿಂತಿತ್ತು. ರೈಲು ಬರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಆನೆಯನ್ನು ಓಡಿಸಿ ಉಳಿಸಿದ್ದರು.
ಬೆಂಗಳೂರು: ಸಂಪುಟ ಪುನಾರಚನೆ ಮಾಡಿ ಹೊಸ ಶಾಸಕರಿಗೆ ಅವಕಾಶ ನೀಡಿ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಶಾಸಕರು ಪತ್ರ ಬರೆದ ವಿಚಾರಕ್ಕೆ…
ಬೆಂಗಳೂರು: ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಜಾಸ್ತಿಯಾದರೆ 114 ಸೆಕ್ಷನ್ ಜಾರಿಗೊಳಿಸಿ ವನ್ಯಜೀವಿ ಸೆರೆ ಕಾರ್ಯಾಚರಣೆ ನಡೆಸಿ ಎಂದು…
ಬೆಂಗಳೂರು: ತೆಲಂಗಾಣ ರಾಜ್ಯದ ಡಿಸಿಎಂ ಭಟ್ಟಿ ವಿಕ್ರಮಾರ್ಕ ಮಲ್ಲು ಅವರಿಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಡಿಸಿಎಂ…
ಶಿವಮೊಗ್ಗ: ಇಲ್ಲಿನ ಸೂಳೆಬೈಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆತನ ಕುಟುಂಬಕ್ಕೆ 15…
ಬೆಂಗಳೂರು: ಸಂಪುಟ ಪುನಾರಚನೆ ಮಾಡಿ ಹೊಸ ಶಾಸಕರಿಗೆ ಅವಕಾಶ ನೀಡಿ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಶಾಸಕರು ಪತ್ರ ಬರೆದ ವಿಚಾರಕ್ಕೆ…
ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಪರಮೇಶ್ವರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ್ದ…