ಚಾಮರಾಜನಗರ : ಇಲ್ಲೊಂದು ಆನೆ ಕಬ್ಬು ಸವಿಯುವ ಸಲುವಾಗಿ ಚಲಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಕಬ್ಬು ಸವಿಯುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ಚಾಮರಾಜನಗರ ತಾಲ್ಲೂಕ್ಕಿನ ಪುಣಜನೂರು ಬಳಿ ನಡೆದಿದೆ. ಕಳೆದ ಕೆಲವು ತಿಂಗಳಿನಿಂದ ಈ ಭಾಗದ ಅಪಸೂರು, ಕಾರೆಪುರ, ಪುಣಜನೂರು ಸೇರಿದಂತೆ ಹಲವೆಡೆ ಕಬ್ಬು ದಾಳಿ ಮಾಡುವುದನ್ನು ನಿಲ್ಲಿಸಿದ್ದು ಈಗ ಮತ್ತೆ ಆರಂಭಿಸಿವೆ.
ಆನೆ ಲಾರಿಯನ್ನುಅಡ್ಡಗಟ್ಟಿ ಕಬ್ಬು ಸವಿಯುತ್ತಿರುವ ವೀಡಿಯೋವನ್ನು ಲಾರಿಯ ಚಾಲಕರೊಬ್ಬರು ಸೆರೆಹಿಡಿದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.