ಚಾಮರಾಜನಗರ

ಹನೂರು: ಪಾಲಾರ್ ಚೆಕ್‌ಪೋಸ್ಟ್‌ನಲ್ಲಿ ಒಂಟಿಸಲಗ ದಾಂಧಲೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ಅಂತರರಾಜ್ಯ ಪಾಲಾರ್ ಚೆಕ್‌ಪೋಸ್ಟ್‌ನಲ್ಲಿ ಒಂಟಿ ಸಲಗದ ದಾಂಧಲೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಬೆಚ್ಚಿಬಿದ್ದಿದ್ದಾರೆ.

ನೆರೆಯ ತಮಿಳುನಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಕರ್ನಾಟಕದ ಗಡಿ ಪಾಲಾರ್ ಚೆಕ್ ಪೋಸ್ಟ್ ನಲ್ಲಿ ಅಕ್ರಮ ಮದ್ಯ, ಹಣ ಸಾಗಣೆ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳನ್ನು ತಡೆಯಲು ಬೆಳಗ್ಗೆ ಹಾಗೂ ರಾತ್ರಿ ಪಾಳಿಯಗಳಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

ಅದರಂತೆ ಬುಧವಾರ ರಾತ್ರಿ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಮುಖ್ಯಪೇದೆ ರಾಮದಾಸ್, ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ರಮೇಶ್, ಗಾಡ್ ಮಹೇಶ್ ಕರ್ತವ್ಯದಲ್ಲಿದ್ದರು. ಈ ವೇಳೆ ರಾತ್ರಿ 10:30ರಲ್ಲಿ ಏಕಾಏಕಿ ಒಂಟಿ ಸಲಗವೊಂದು ವಸತಿಗೃಹದ ಸಮೀಪವೇ ಬಂದು ಘೀಳಿಟ್ಟಿದೆ. ಇದಲ್ಲದೆ ವಸತಿಗೃಹದ ಸಮೀಪವೇ ಬಂದು ನಿಂತಾಗ ಸಿಬ್ಬಂದಿ ವರ್ಗದವರು ಆನೆಯನ್ನು ಓಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಆದರೆ ಆನೆ ಮಧ್ಯ ರಸ್ತೆಯಿಂದ ತೆರಳದೆ ನಿಂತಿದೆ.

ನಂತರ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಶಬ್ದಕ್ಕೂ ಜಗ್ಗದೆ ಸ್ವಲ್ಪ ದೂರ ಸೇತುವೆಯ ಮೇಲೆ ಮುಂದೆ ತೆರಳಿ ನಂತರ ಮತ್ತೆ ವಾಪಸ್ ಅರಣ್ಯಕ್ಕೆ ತೆರಳಿದೆ.

 

ಆಂದೋಲನ ಡೆಸ್ಕ್

Recent Posts

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…

18 mins ago

24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್

ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…

49 mins ago

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಮುಖ್ಯಮಂತ್ರಿ ಟೀಕೆ

ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…

1 hour ago

ಹೊಸ ಸುಂಕ ಸಾರಿದ ಅಮೆರಿಕ, ಈ ಬಾರಿ ಯಾವುದರ ಮೇಲೆ ಟ್ರಂಪ್‌ ಕಣ್ಣು?

ವಾಷಿಂಗ್ಟನ್ : ಇರಾನ್ ವಿರುದ್ಧದ ಯುದ್ಧದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಸುಂಕ ಸಮರ ಆರಂಭಿಸಿದ್ದಾರೆ.…

1 hour ago

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಲ್ಲ

ಬೆಂಗಳೂರು : ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಸುವುದು ಇನ್ನು ಮುಂದೆ ಕಡ್ಡಾಯವಿರುವುದಿಲ್ಲ ಎಂದು ಕರ್ನಾಟಕ…

2 hours ago

ಕೊಡಗು | ಟ್ರೆಕ್ಕಿಂಗ್ ಹೊರಟಿದ್ದ 36 ವರ್ಷದ ಮಹಿಳೆ ನಾಪತ್ತೆ

ಮಡಿಕೇರಿ : ಕೊಡಗು ಜಿಲ್ಲೆಯ ಅತ್ಯುನ್ನತ ಶಿಖರವಾದ ತಾಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಲು ಹೊರಟಿದ್ದ 36 ವರ್ಷದ ಮಹಿಳೆ ಶರಣ್ಯ…

4 hours ago