ಚಾಮರಾಜನಗರ: ಹನೂರು ತಾಲ್ಲೂಕಿನ ಹೊಗೇನಕಲ್ ಜಲಪಾತದಲ್ಲಿ ತೆಪ್ಪ ಓಡಿಸುವವರು ತೆಪ್ಪದ ಶುಲ್ಕವನ್ನು ಹೆಚ್ಚು ಮಾಡಲು ಇದೇ ಜನವರಿ 10ರವರೆಗೆ ಗಡುವು ನೀಡಿದ್ದು, ಅರಣ್ಯ ಇಲಾಖೆ ಶುಲ್ಕ ಹೆಚ್ಚು ಮಾಡದಿದ್ದರೆ ತೆಪ್ಪ ಓಡಾಟವನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.
ಹೊಗೇನಕಲ್ ಜಲಪಾತ ವೀಕ್ಷಣೆಗೆ ನಿತ್ಯ ಜಿಲ್ಲೆ-ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರತಿನಿತ್ಯ ಹಾಗೂ ವಾರದ ಕೊನೆ ಹಾಗೂ ವಿಶೇಷ ದಿನಗಳಲ್ಲಿ ಹೆಚ್ಚಾಗಿ ಆಗಮಿಸುವ ಪ್ರವಾಸಿಗರು ತೆಪ್ಪದಲ್ಲಿ ತೆರಳಿ ಜಲಪಾತವನ್ನು ಕಣ್ಣುಂಬಿಕೊಳ್ಳುತ್ತಾರೆ.
ತೆಪ್ಪದ ದರ ಪರಿಷ್ಕರಣೆಯಾಗಿ ಹಲವು ವರ್ಷಗಳಾಗಿವೆ. ತಮಿಳುನಾಡಿನಲ್ಲಿ ನಾಲ್ಕು ಜನರಿಗೆ 1,500 ನಿಗದಿಪಡಿಸಲಾಗಿದೆ. ನಮ್ಮಲ್ಲಿ 500 ಮಾತ್ರ ನಿಗಧಿಯಾಗಿದೆ.. ಅದನ್ನು ಜಾಸ್ತಿ ಮಾಡಬೇಕು’ ಎಂದು ತೆಪ್ಪ ನಿರ್ವಾಹಕರು ಒತ್ತಾಯಿಸುತ್ತಿದ್ದಾರೆ.
ಸದ್ಯ ಒಬ್ಬರಿಗೆ 125 ನಿಗದಿ ಪಡಿಸಲಾಗಿದೆ. ಒಂದು ತೆಪ್ಪದಲ್ಲಿ ನಾಲ್ಕು ಜನರಿಗಷ್ಟೇ ತೆರಳಲು ಅವಕಾಶ. ತೆಪ್ಪ ನಡೆಸುವವರ ಜೀವನಕ್ಕಾಗಿ ಶುಲ್ಕ ಹೆಚ್ಚು ಮಾಡಬೇಕೆಂದು ಒತ್ತಾಯಿಸಿ, ಈ ಸಂಬಂಧ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದ್ದಾರೆ.
ಇನ್ನೂ ಹೊಗೆನೆಕಲ್ ನಲ್ಲಿ ತೆಪ್ಪದಲ್ಲಿ ತೆರಳುವವರಿಗೆ ಸುರಕ್ಷಾ ಕವಚ ನೀಡುತ್ತಿಲ್ಲ. ಒಂದು ತೆಪ್ಪದಲ್ಲಿ ನಾಲ್ಕಕ್ಕಿಂತ ಹೆಚ್ಚಿನ ಜನರನ್ನು ಕರೆದುಕೊಂಡು ಹೋಗುತ್ತಾರೆ. ಇದರ ಬೆನ್ನಲ್ಲೇ ಎಲ್ಲರಿಗೂ ರಕ್ಷಾ ಕವಚ ನೀಡುವುದಿಲ್ಲ. ರಕ್ಷಾ ಕವಚಗಳು ಹಳೆಯದಾಗಿವೆ. ಹಣದ ಆಸೆಗೆ ಹೆಚ್ಚೆಚ್ಚು ಜನರನ್ನು ಒಮ್ಮೆಲೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಪ್ರವಾಸಿಗರು ಆರೋಪಿಸುತ್ತಾರೆ.
ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…
ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…
ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…
ಮಂಡ್ಯ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…
ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…