ಕೇರಳ ಮೂಲದ ಇಬ್ಬರು ಆರೋಪಿಗಳ ಬಂಧನ
ಚಾಮರಾಜನಗರ:ಈ ರುಳ್ಳಿ ಮೂಟೆಗಳ ಮಧ್ಯೆದಲ್ಲಿಅಂತರರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5ಲಕ್ಷರೂ.ಮೌಲ್ಯದ ಸ್ಪಿರಿಟ್ ಹಾಗೂ ವಾಹನವನ್ನು ತಾಲ್ಲೂಕಿನ ಪುಣಜನೂರು ಬಳಿ ಶುಕ್ರವಾರ ಪೊಲೀಸರುವಶಪಡಿಸಿಕೊಂಡುಇಬ್ಬರು ಆರೋಪಿಗಳನ್ನುಬಂಧಿಸಿದ್ದಾರೆ.
ಕೇರಳದ ಪಾಲಕ್ಕಾಡ್ ನ ಹರಿ, ಆಲಟ್ಟೂರಿನ ವಿನೋದ್ ಕುಮಾರ್ ಬಂಧಿತರು. ಮಹೇಂದ್ರ ಪ್ಯೊರೋ ವಾಹನದಲ್ಲಿ ಈರುಳ್ಳಿ ಸಾಗಿಸುವ ಸೋಗಿನಲ್ಲಿ ಸ್ಪಿರಿಟ್ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿ ಸಿಕ್ಕಿ ಬಿದ್ದಿದ್ದಾರೆ.
32ಲೀಟರ್ ಸಾಮರ್ಥ್ಯ ದ 202ಕ್ಯಾನ್ ಗಳಲ್ಲಿದ್ದ ಸುಮಾರು 7070ಲೀಟರ್ ಅಕ್ರಮ ಸ್ಪಿರಿಟ್ ದಾಳಿ ವೇಳಿ ಸಿಕ್ಕಿದ್ದು ತನಿಖೆ ಮುಂದುವರೆದಿದೆ.
ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಎಸ್ಪಿ ಸುಂದರರಾಜ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಎಸ್. ಆನಂದ್ ಮತ್ತು ಸಿಬ್ಬಂದಿ ದಾಳಿ ಮಾಡಿದ್ದು ಎಸ್ಪಿ ಶಿವಕುಮಾರ್ ಅವರು ಈ ಪತ್ತೆ ಕಾರ್ಯ ವನ್ನು ಪ್ರಶಂಸಿಸಿದ್ದಾರೆ.
ಗಿರೀಶ್ ಹುಣಸೂರು ಮೈಸೂರು: ಜೀವನದಲ್ಲಿ ಹಲವು ಏಳು-ಬೀಳುಗಳನ್ನು ನೀಡಿದ ೨೦೨೫ನೇ ವರ್ಷವನ್ನು ಬೀಳ್ಕೊಟ್ಟು, ಹಲವು ನಿರೀಕ್ಷೆಗಳೊಂದಿಗೆ ೨೦೨೬ನೇ ಹೊಸ ವರ್ಷವನ್ನು…
ಬಳ್ಳಾರಿ : ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ…
ಬಳ್ಳಾರಿ : ಜನಾರ್ಧನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು,…
ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…
ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…