ಚಾಮರಾಜನಗರ : ಆಹಾರ ಪದಾರ್ಥ ಅರಸಿ ನಾಡಿನಿಂದ ಕಾಡಿಗೆ ಬಂದ ಕರಡಿಯೊಂದು ಶಾಲಾ ಶಿಕ್ಷಕರ ಕೊಠಡಿಯ ಬಾಗಿಲು ಮುರಿದು, ಆಃಆರ ಪದಾರ್ಥಗಳನ್ನು ತಿಂದು ಜೊತೆಗೆ ಪೀಠೋಪಕರಣಗಳನ್ನು ಮುರಿದು ಹಾಕಿರುವ ಘಟನೆ ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಫ್ರೌಢ ಶಾಲೆಯಲ್ಲಿ ಮಧ್ಯರಾತ್ರಿ ನಡೆದಿದೆ.
ಇಂದು(ಶುಕ್ರವಾರ) ಬೆಳಿಗ್ಗೆ ಮುಖ್ಯ ಶಿಕ್ಷಕ ಲೂಯಿಸ್ ಸೇನಸ್ ಅವರು ಶಾಲೆಗೆ ಬಂದಾಗ ಶಿಕ್ಷಕರ ಕೊಠಡಿಯ ಬಾಗಿಲು ಮುರಿದಿರುವುದನ್ನು ನೋಡಿದ್ದಾರೆ. ಒಳ ಹೋಗಿ ನೋಡಿದಾ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿದ ಮುಖ್ಯ ಶಿಕ್ಷಕರು ಸಿಸಿ ಟಿವಿಯಲ್ಲಿ ಕರಿಡಿ ದಾಂಧಲೆ ನಡೆಸಿರುವುದು ಗೊತ್ತಾಗಿದೆ.
ತಡರಾತ್ರಿ ಸುಮಾರು ೧ ಗಂಟೆ ವೇಳೆಯಲ್ಲಿ ಕರಡಿಯೊಂದು ರೂಂ ಬಾಗಿಲು ಮುರಿದು ಒಳನುಗ್ಗಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕರಡಿ ಒಳನುಗ್ಗಿ ಅಡುಗೆ ಎಣ್ಣೆ, ಬೆಲ್ಲ ಇತ್ಯಾದಿ ಪದಾರ್ಥಗಳನ್ನು ತಿಂದು ಪೀಠೋಪಕರಣಗಳಿಗೆ ಹಾನಿ ಮಾಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಫಾದರ್ ಟೆನ್ನಿ ಕುರಿಯನ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ಅಜ್ಜಿಪುರ ಗ್ರಾಮದಲ್ಲಿನ ಅಂಗಡಿಯೊಂದಕ್ಕೆ ನುಗ್ಗಿದ್ದ ಕರಡಿ ಮೊಟ್ಟೆಗಳನ್ನು ತಿಂದು ಹಾಳು ಮಾಡಿತ್ತು. ಈ ಕರಡಿಯನ್ನು ಸೆರೆಹಿಡಿದು ಕಾಡಿಗೆ ಬಿಡಲಾಗಿತ್ತು. ಇದಾದ ಬಳಿಕವೂ ಈ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…