ಚಾಮರಾಜನಗರ: ತಾಲೂಕಿನ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 8 ಅಂಗನವಾಡಿ ಕಾರ್ಯಕರ್ತೆ ಹಾಗೂ 19 ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಇಲಾಖಾ ವೆಬ್ ಸೈಟ್ https://karnemakaone.kar.nic.in/abcd/ ನಲ್ಲಿ ಫೆಬ್ರವರಿ 7 ರೊಳಗೆ ಸಲ್ಲಿಸಬೇಕು. ಆನ್‌ಲೈನ್ ಮೂಲಕವೇ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಇತರೇ ಯಾವುದೇ ಮೂಲದಿಂದ ಸಲ್ಲಿಸಲು ಅವಕಾಶವಿರುವುದಿಲ್ಲ.
ಒಬ್ಬರೇ ಅಭ್ಯರ್ಥಿ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ, ಪ್ರತ್ಯೇಕವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮಪಂಚಾಯಿತಿಯ ಕುಂಟಗುಡಿ ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ), ದೇಮಹಳ್ಳಿ ಗ್ರಾಮಪಂಚಾಯಿತಿಯ ಹೆಬ್ಬಹಳ್ಳಿ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಬಿ.ಎಂ.ಕೆ ಹುಂಡಿ ಅಂಗನವಾಡಿ ಕೇಂದ್ರ (ಇತರೆ), ಕೆಂಪನಪುರ ಗ್ರಾಮಪಂಚಾಯಿತಿಯ ಕೆಂಪನಪುರ ಕೇಂದ್ರ-೪ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಇರಸವಾಡಿ ಗ್ರಾಮಪಂಚಾಯಿತಿಯ ಕಳ್ಳಿಪುರ ಅಂಗನವಾಡಿ ಕೇಂದ್ರ (ಇತರೆ), ಭೋಗಾಪುರ ಗ್ರಾಮಪಂಚಾಯಿತಿಯ ಕಸ್ತೂರು ಅಂಗನವಾಡಿ ಕೇಂದ್ರ (ಇತರೆ), ಕಾಗಲವಾಡಿ ಗ್ರಾಮ ಪಂಚಾಯಿತಿಯ ಕಾಗಲವಾಡಿಮೋಳೆ-೧ನೇ ಅಂಗನವಾಡಿ ಕೇಂದ್ರ (ಇತರೆ), ಆಲೂರು ಗ್ರಾಮಪಂಚಾಯಿತಿಯ ಬಸಪನಪಾಳ್ಯ -೨ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಮಾದಪುರ ಗ್ರಾಮಪಂಚಾಯಿತಿಯ ಕಾಡಹಳ್ಳಿ-೨ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಇರಸವಾಡಿ ಗ್ರಾಮಪಂಚಾಯಿತಿಯ ಸುತ್ತೂರು ೩ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಗಂಗವಾಡಿ-೧ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಜ್ಯೋತಿಗೌಡನಪುರ ಗ್ರಾಮಪಂಚಾಯಿತಿಯ ನಲ್ಲೂರು ೧ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಕುರುಬರಹುಂಡಿ (ಇತರೆ), ದೇಮಳ್ಳಿ ಗ್ರಾಮಪಂಚಾಯಿತಿಯ ಮೂಡಲ ಅಗ್ರಹಾರ ೨ನೇ ಅಂಗನವಾಡಿ ಕೇಂದ್ರ (ಇತರೆ ೩ನೆ ಬಾರಿ), ಹೊಂಗನೂರು ಗ್ರಾಮಪಂಚಾಯಿತಿಯ ಹೊಂಗನೂರು ೭ನೇ ಅಂಗನವಾಡಿ ಕೇಂದ್ರ (ಇತರೆ), ಕೆಂಪನಪುರ ಗ್ರಾಮ ಪಂಚಾಯಿತಿಯ ಚುಂಗಡಿಪುರ ಅಂಗನವಾಡಿ ಕೇಂದ್ರ (ಇತರೆ), ಮಸಣಾಪುರ ಗ್ರಾಮಪಂಚಾಯಿತಿಯ ಚಾಟೀಪುರ ೩ನೇ ಅಂಗನವಾಡಿ ಕೇಂದ್ರ (ಇತರೆ), ನಾಗವಳ್ಳಿ ಗ್ರಾಮಪಂಚಾಯಿತಿಯ ಪುಟ್ಟನಪುರ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಬಿಎಂಕೆ ಹುಂಡಿ ಅಂಗನವಾಡಿ ಕೇಂದ್ರ (ಇತರೆ), ಗಣಿಗನೂರು ೧ನೇ ಅಂಗನವಾಡಿ ಕೇಂದ್ರ (ಇತರೆ), ಬಾಗಳಿ ಗ್ರಾಮಪಂಚಾಯಿತಿಯ ಬಾಗಳಿ-೪ ಅಂಗನವಾಡಿ ಕೇಂದ್ರ (ಇತರೆ), ಬದನಗುಪ್ಪೆ ಗ್ರಾಮಪಂಚಾಯಿತಿಯ ಬದನಗುಪ್ಪೆ-೨ನೇ ಅಂಗನವಾಡಿ ಕೇಂದ್ರ (ಇತರೆ), ಮಂಗಲ ಗ್ರಾಮಪಂಚಾಯಿತಿಯ ಹುಲ್ಲೇಪುರ ಅಂಗನವಾಡಿ ಕೇಂದ್ರ (ಇತರೆ), ಹೆಗ್ಗೋಠಾರ ಗ್ರಾಮಪಂಚಾಯಿತಿಯ ಪಣ್ಯದಹುಂಡಿ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಸೊತ್ತನಹುಂಡಿ ಅಂಗನವಾಡಿ ಕೇಂದ್ರ (ಇತರೆ), ಭೋಗಾಪುರ ಗ್ರಾಮಪಂಚಾಯಿತಿಯ ಕೆ.ಮೂಕಹಳ್ಳಿ ಅಂಗನವಾಡಿ ಕೇಂದ್ರ (ಇತರೆ), ಆಲೂರು ಗ್ರಾಮಪಂಚಾಯಿತಿಯ ಲಿಂಗರಾಜಪುರ ಅಂಗನವಾಡಿ ಕೇಂದ್ರ (ಇತರೆ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
೧೯ ರಿಂದ ೩೫ ವಯೋಮಿತಿಯೊಳಗಿನ ಮಹಿಳೆಯರು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸಂತೇಮರಹಳ್ಳಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…