ಚಾಮರಾಜನಗರ

ಚಾ.ನಗರ| ಆಸ್ತಿ ವಿವಾದ: ದಲಿತ ಸಮುದಾಯದಿಂದ ಎರಡು ದಲಿತ ಕುಟುಂಬಗಳಿಗೆ ಬಹಿಷ್ಕಾರ

ಚಾಮರಾಜನಗರ : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲೆಯ ದಲಿತ ಸಮುದಾಯವು ನಾಲ್ಕು ವರ್ಷಗಳ ಕಾಲ ತಮ್ಮದೇ ಸಮುದಾಯಕ್ಕೆ ಸೇರಿದ ಎರಡು ಕುಟುಂಬಗಳಿಗೆ ಬಹಿಷ್ಕಾರ ವಿಧಿಸಿದೆ.

ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಸದಸ್ಯರು ದಲಿತರ ಕಾಲೋನಿಯಲ್ಲಿರುವ ಮನೆಗಳಲ್ಲಿ ಊಟ ಮಾಡುವಂತಿಲ್ಲ ಮತ್ತು ಅಂಗಡಿಗಳಿಗೆ ತೆರಳುವಂತಿಲ್ಲ. ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗುವುದಿಲ್ಲ ಅಥವಾ ಭಾಗವಹಿಸಲು ಅನುಮತಿಸುವುದಿಲ್ಲ.

ಈ ಕುಟುಂಬಗಳ ಮಕ್ಕಳೂ ಕಾಲೋನಿಯ ಇತರ ಮಕ್ಕಳೊಂದಿಗೆ ಆಟವಾಡುವಂತಿಲ್ಲ ಎಂದು ಹೇಳಲಾಗಿದೆ.

ದಲಿತ ಸಮುದಾಯದ ಹಿರಿಯರಾದ ಯಜಮಾನ್ ಚನ್ನಂಜಯ್ಯ, ನಿವೃತ್ತ ಶಿಕ್ಷಕ ಮತ್ತು ನಗರ ಪಾಲಿಕೆಯಲ್ಲಿ ನೀರು ಸರಬರಾಜು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಹದೇವಯ್ಯ ಅವರು ಬಹಿಷ್ಕಾರದ ಆದೇಶವನ್ನು ನೀಡಿದ್ದಾರೆ. ಬಹಿಷ್ಕಾರದ ಆದೇಶವನ್ನು ಪಂಚಾಯಿತಿ ನಡೆಸುವ ಸಮಯದಲ್ಲಿ ನೀಡಲಾಗಿದೆ.

ಬಹಿಷ್ಕಾರಕ್ಕೊಳಗಾಗಿರುವ ರಾಮಸಮುದ್ರ ವಾರ್ಡ್‌ನ ಎರಡು ಕುಟುಂಬಗಳು, ತಮಗೆ ಮಾನಸಿಕ ಹಿಂಸೆ ಮತ್ತು ಅವಮಾನ ಮಾಡಲಾಗುತ್ತಿದೆ. ಯಾರೊಬ್ಬರೂ ತಮಗೆ ನ್ಯಾಯ ನೀಡುತ್ತಿಲ್ಲ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ತಮ್ಮ ಕುಟುಂಬದವರ ಮೇಲಿನ ಬಹಿಷ್ಕಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಸಂತ್ರಸ್ತರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇದರೊಂದಿಗೆ ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

andolanait

Recent Posts

ಓದುಗರ ಪತ್ರ:  ನಂಜನಗೂಡಿನ ಪ್ರಮುಖ ವೃತ್ತಕ್ಕೆ ಬಿ.ವಿ.ಪಂಡಿತರ ಹೆಸರಿಡಿ

ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…

9 mins ago

ಓದುಗರ ಪತ್ರ:  ಭೈರಪ್ಪ ಸ್ಮಾರಕ, ತಿಮ್ಮಕ್ಕ ವಸ್ತು ಸಂಗ್ರಹಾಲಯ ಸ್ವಾಗತಾರ್ಹ

ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…

15 mins ago

ಓದುಗರ ಪತ್ರ:  ಗೋಪಾಲಸ್ವಾಮಿ ಬೆಟ್ಟದ ಬಸ್ ಪ್ರಯಾಣ ದರ ಇಳಿಕೆ ಮಾಡಿ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…

19 mins ago

ಓದುಗರ ಪತ್ರ: ಮಸೂದೆ ಅಂಗೀಕಾರಕ್ಕಷ್ಟೇ ವಿಧಾನಸಭೆ ಅಧಿವೇಶನ ಸೀಮಿತವಾಗದಿರಲಿ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…

21 mins ago

ಥಿಯೇಟರ್‌ಗಳಲ್ಲಿ ಡೆವಿಲ್‌ ಅಬ್ಬರ: ದರ್ಶನ್‌ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್‌ ಆಗಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.…

23 mins ago

ಚಿರತೆಗಳು ಕಾಣಿಸಿಕೊಳ್ಳುವಿಕೆ: ಮೈಸೂರಿನ ಅಭಿವೃದ್ಧಿಯ ಮತ್ತೊಂದು ಮುಖ

ಮೈಸೂರು ನಗರವು ತನ್ನ ಸಾಂಸ್ಕೃತಿಕ ಪರಂಪರೆ, ಹಸಿರು ಪರಿಸರ ಮತ್ತು ಸುಸ್ಥಿರ ಜೀವನಶೈಲಿಗಾಗಿ ಬಹಳ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ…

56 mins ago