ಗುಣಮಟ್ಟ ಪರೀಕ್ಷೆ ವರದಿ ನೀಡಲು ೪,೫೦೦ ರೂ. ಪಡೆಯುವಾಗ ಬಂಧನ
ಚಾಮರಾಜನಗರ: ಎಂ-ಸ್ಯಾಂಡ್ ಗುಣಮಟ್ಟ ವರದಿ ನೀಡಲು ೪,೫೦೦ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ಇಲ್ಲಿನ ಲೋಕೋಪಯೋಗಿ ಇಲಾಖೆ ನೌಕರ(ಹೊರಗುತ್ತಿಗೆ) ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಗುಣ ಭರವಸೆ ಉಪವಿಭಾಗದ ತಾಂತ್ರಿಕ ಸಹಾಯಕ (ಟೆಕ್ನಿಕಲ್ ಅಸಿಸ್ಟೆಂಟ್) ನಂದರಾಜು ಲಂಚ ಪಡೆಯುವಾಗ
ಸಿಕ್ಕಿಬಿದ್ದವರು.
ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಪ್ರಸನ್ನ ಅವರಿಂದ ಮಧ್ಯಾಹ್ನ ೩.೪೫ರಲ್ಲಿ ಹಣ ಪಡೆಯುವಾಗ ದಾಳಿಗೆ ಒಳಗಾದರು.
ಪ್ರಸನ್ನ ಅವರು ಗುತ್ತಿಗೆ ಆಧಾರದಲ್ಲಿ ಎಂ-ಸ್ಯಾಂಡ್ ಕ್ರಷರ್ ಘಟಕ ನಡೆಸುತ್ತಿದ್ದು, ಎಂ-ಸ್ಯಾಂಡ್ (ಮರಳು) ಮಾರಾಟ ಮಾಡಲು ಅದರ ಗುಣಮಟ್ಟ ಪರೀಕ್ಷೆ ವರದಿಯನ್ನು ಇಲಾಖೆಯಿಂದ ಕಡ್ಡಾಯವಾಗಿ ಪಡೆಯಬೇಕಿದೆ.
ಈ ವರದಿ ನೀಡಲು ಸತಾಯಿಸಿದ ನಂದರಾಜು ಏತನ್ಮಧ್ಯೆ ೫,೫೦೦ರೂ.ಗೆ ಬೇಡಿಕೆ ಇಟ್ಟಾಗ ಮುಂಗಡವಾಗಿ ೧ ಸಾವಿರ ರೂ. ನೀಡಿದ್ದರು. ಉಳಿದ ೪,೫೦೦ ರೂ.ಅನ್ನು ಪ್ರಸನ್ನ ಅವರಿಂದ ಮಧ್ಯಾಹ್ನ ೩.೪೫ರಲ್ಲಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದರು.
ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್ಪಿ ಕೆ.ಟಿ.ಮ್ಯಾಥ್ಯೂಥಾಮಸ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್, ಮುಖ್ಯಪೇದೆ ಮನೋರಂಜನ್, ಪೇದೆಗಳಾದ ಗುರುಪ್ರಸಾದ್, ಶ್ರೀನಿವಾಸ್ ಈ ದಾಳಿ ನಡೆಸಿದರು.
ವಿಚಾರಣೆ ಮುಂದುವರಿದಿದ್ದು ಆರೋಪಿ ನಂದರಾಜು ಅವರನ್ನು ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು.
ಲಂಚದ ೪,೫೦೦ ರೂ.ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ‘ಆಂದೋಲನಕ್ಕೆ’ ತಿಳಿಸಿದರು.
ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಬಂಧ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿತ್ತು.
ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್ ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್…
ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…
ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…
ಬಿಆರ್‌ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…
ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…