ಚಾಮರಾಜನಗರ

ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಘಟನೆ ನಡೆದಿದ್ದು, ಅಂತರಗಂಗೆ ಹೊಸ ಕೊಳದಲ್ಲಿ ಸುಮಾರು 40-45 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ.

ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪರಿಚಿತ ಶವದ ಕೈ ಮೇಲೆ ರಾಣಿ ಎಂದು ಹಾಗೂ ಎದೆಯ ಮೇಲೆ ಡಾ ಅಂಬೇಡ್ಕರ್‌ ಎಂದು ಬರೆದಿರುವ ಟ್ಯಾಟೂ ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿ ಯಾರೆಂದು ತಿಳಿದುಬರಬೇಕಿದೆ.

ಆಂದೋಲನ ಡೆಸ್ಕ್

Recent Posts

ಮಧ್ಯಪ್ರಾಚ್ಯ ಬಿಕ್ಕಟ್ಟು: ಕನ್ನಡಿಗರ ರಕ್ಷಣೆಗೆ ಕೇಂದ್ರ ಸಚಿವ ಜೈಶಂಕರ್‌ಗೆ ಮನವಿ

ನವದೆಹಲಿ: ಇಸ್ರೇಲ್-ಇರಾನ್‌ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸಂಪೂರ್ಣವಾಗಿ ಬಂದ್‌ ಆಗಿದೆ. ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ…

40 mins ago

ಮುಂದುವರಿದ ಇರಾನ್‌-ಇಸ್ರೇಲ್‌ ಸಂಘರ್ಷ: ಬೆಂಗಳೂರಿನಲ್ಲಿ 17 ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ ಮತ್ತೆ ತೀವ್ರಗೊಂಡ ಪರಿಣಾಮ ಬೆಂಗಳೂರಿಗೆ ಆಗಮಿಸಬೇಕಿದ್ದ 8 ಮತ್ತು ನಿರ್ಗಮಿಸಬೇಕಿದ್ದ 9 ವಿಮಾನಗಳ ಹಾರಾಟ ರದ್ದಾಗಿದೆ.…

1 hour ago

ಡಿ.ಕೆ.ಶಿವಕುಮಾರ್‌ ಅತ್ಯಂತ ಯಶಸ್ವಿ ಅಧ್ಯಕ್ಷ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಇವತ್ತಿಗೆ ಆರು ವರ್ಷಗಳಾಗಿದ್ದು, ಅತ್ಯಂತ ಯಶಸ್ವಿ ಅಧ್ಯಕ್ಷ ಎನಿಸಿಕೊಂಡಿದ್ದಾರೆ ಎಂದು ಸಚಿವೆ…

2 hours ago

ಸ್ಮೃತಿ ಇರಾನಿ ಕಾಣುತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವ್ಯಂಗ್ಯ

ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ.…

2 hours ago

ಮೃಗಾಲಯದ ಆನೆ ಅಭಿ ಮತ್ತಿಗೋಡಿನಲ್ಲಿ ಕೊನೆಯುಸಿರು

ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ.‌ ನಾಗರಹೊಳೆ ರಾಷ್ಟ್ರೀಯ…

2 hours ago

ರಾಜ್ಯದ ಹಲವೆಡೆ ತಾಪಮಾನ ಹೆಚ್ಚಳ: ಹೀಟ್‌ ಸ್ಟ್ರೋಕ್‌ ಭೀತಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದು, ಹೀಟ್‌ ಸ್ಟ್ರೋಕ್‌ ಭೀತಿ ಎದುರಾಗಿದೆ. ಹಲವೆಡೆ…

2 hours ago