ಗುಂಡ್ಲುಪೇಟೆ: ಬಂಡೀಪುರ ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಚಿರತೆ ಹಾಗೂ ಆನೆಗಳಿರುವ ತಾಣ. ಈ ಅರಣ್ಯದಲ್ಲಿ ದೇಶದಲ್ಲೇ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭಿಸಲಾಗಿತ್ತು. ಅರಣ್ಯ ಅಪರಾಧಗಳನ್ನು ಬೇಧಿಸಲು ಬೆಲ್ಜಿಯಂ ಮಾಲಿನಾಯ್ಸ್ ಶ್ವಾನಗಳಿಗೆ ಒಂದು ವರ್ಷ ಕಾಲ ಯಶಸ್ವಿ ತರಬೇತಿ ನೀಡಲಾಗಿದ್ದು ಮೊದಲ ತಂಡದ ಶ್ವಾನಗಳನ್ನು ರಾಜ್ಯದ ಐದು ಹುಲಿಸಂರಕ್ಷಿತ ಪ್ರದೇಶಗಳಿಗೆ ನಿಯೋಜಿಸಲಾಗುತ್ತಿದೆ
ಅರಣ್ಯಗಳಲ್ಲಿ ಕಳ್ಳಬೇಟೆ, ಮರಗಳ್ಳತನ, ದಂತಕ್ಕಾಗಿ ಆನೆಗಳ ಬೇಟೆ, ಅರಣ್ಯ ಸಂಪತ್ತು ಕಳ್ಳಸಾಗಾಣಿಕೆ ಮತ್ತಿತರ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗು ಇಂತಹ ಅಪರಾಧ ಕೃತ್ಯ ಮಾಡಿದವರನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಗೆ ತನ್ನದೆ ಆದ ಶ್ವಾನದಳದ ಅವಶ್ಯಕತೆಯಿತ್ತು. ಇದಕ್ಕಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವರ್ಷ ದೇಶದಲ್ಲೇ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭಿಸಲಾಗಿತ್ತು.
ಸದ್ಯ ಹತ್ತು ಬೆಲ್ಜಿಯಂ ಮಾಲಿನಾಯ್ಸ್ ತಳಿಯ ಶ್ವಾನಗಳಿಗೆ ಇಲ್ಲಿ ಕಠಿಣ ತರಬೇತಿ ನೀಡಲಾಗಿದೆ. ಈ ತಳಿಯ ನಾಯಿಗಳು ಮಾದಕವಸ್ತು, ಬಾಂಬ್, ಅನಿಲ ಸೋರಿಕೆ ಸೇರಿದಂತೆ ಯಾವುದೇ ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವಲ್ಲಿ ಪತ್ತೆ ಹಚ್ಚುವಲ್ಲಿ ಪರಿಣಿತಿ ಹೊಂದಿವೆ. ಹಾಗಾಗಿ ಈ ತಳಿಯ ನಾಯಿಗಳನ್ನು ತಂದು ಅರಣ್ಯ ಅಪರಾಧಗಳನ್ನು ತಡೆಗಟ್ಟುವ ಹಾಗು ಭೇದಿಸುವ ಬಗ್ಗೆ ನುರಿತ ತಜ್ಞರಿಂದ ತರಬೇತಿ ಕೊಡಿಸಲಾಗಿದೆ. ಈ ಶ್ವಾನಗಳ ಪಾಲನೆ ಪೋಷಣೆಗೆ ಒಂದು ಶ್ವಾನಕ್ಕೆ ಇಬ್ಬರು ಹ್ಯಾಂಡ್ಲರ್‌ಗಳಂತೆ ಇಪ್ಪತ್ತು ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೂ ಸಹ ತರಬೇತಿ ಕೊಡಲಾಗಿದೆ
ಇನ್ನೂ ಹುಲಿ, ಚಿರತೆ, ಕಾಡಮ್ಮೆ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಮೂಳೆ, ಚರ್ಮ ಉಗುರು, ಆನೆ ದಂತ, ವನ್ಯಪ್ರಾಣಿಗಳ ಆವಯವ ಪತ್ತೆ ಹಚ್ಚುವುದು, ಶ್ರೀಗಂಧ, ರಕ್ತಚಂದನ ಮತ್ತಿತರ ಅರಣ್ಯಸಂಪತ್ತು ಪತ್ತೆ ಹಚ್ಚುವುದರ ಬಗ್ಗೆ ಈ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. 10 ತಿಂಗಳ ಕಾಲ ತರಬೇತಿ ನೀಡಿದ್ದು ಈಗ ಈ ಶ್ವಾನಗಳನ್ನು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗು ಭೇದಿಸಲು ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ ಹಾಗು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ತಲಾ ಎರಡು ಶ್ವಾನಗಳಂತೆ ನಿಯೋಜಿಸಲಾಗಿದೆ.
ನಿಪುಣತೆ ಹಾಗು ಚಾಕಚಕ್ಯತೆಗೆ ಹೆಸರಾಗಿರುವ ಬೆಲ್ಜಿಯಂ ಮಾಲಿನಾಯ್ಸ್ ತಳಿಯ ಶ್ವಾನಗಳು ಇದೀಗಾ ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿವೆ. ಇದರೊಂದಿಗೆ ಅರಣ್ಯ ಸಂರಕ್ಷಣೆಗೆ ಸಿಬ್ಬಂದಿ ಜೊತೆಗೆ ಈ ಶ್ವಾನಬಲವು ದೊರಕಿದಂತಾಗಿದೆ.
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…