ಚಾಮರಾಜನಗರ

ಅಜ್ಜೀಪುರದಿಂದ ಬೆಂಗಳೂರಿಗೆ ಪಾದಯಾತ್ರೆ: ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ 1.31 ಟಿಎಂಸಿ ನೀರು ಒದಗಿಸಲು 2020-21 ಸಾಲಿನಲ್ಲಿ ಕ್ರಿಯೆ ಯೋಜನೆ ಮಾಡಲಾಗಿದ್ದ ಡಿಪಿಆ‌ರ್ ಗೆ ಅನುಮತಿ ದೊರಕಿದ್ದು, ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಒತ್ತಾಯಿಸಿ ಹನೂರು ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಪಾದಯಾತ್ರೆಯು ಐದು ದಿನಗಳ ಬಳಿಕ ಬೆಂಗಳೂರು ತಲುಪಿತು.

ಹನೂರು ತಾಲ್ಲೂಕಿನ ಪ್ರಮುಖ ಜಲಾಶಯಗಳು ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಅನುಮತಿ ದೊರಕಿರುವ ಡಿಪಿಆರ್ ಪ್ರಕಾರ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಹಾಗೂ ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಅರಣ್ಯದೊಳಗೆ ಇರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ರೈತ ಸಂಘ ಒತ್ತಾಯಿಸಿ ಮಾರ್ಚ್.25ರಂದು ಅಜ್ಜಿಪುರದ ಗ್ರಾಮದಿಂದ ಬೆಂಗಳೂರು ವಿಧಾನಸೌಧದವರೆಗೂ ಪಾದಯಾತ್ರೆ ಚಳುವಳಿ ಹಮ್ಮಿಕೊಂಡಿದ್ದರು.

ಹನೂರು ತಾಲ್ಲೂಕಿನ ಮಣಗಳ್ಳಿ, ಬಂಡಳ್ಳಿ, ಹಲಗಾಪುರ, ಮಾರ್ಟಳ್ಳಿ, ಕೀರಾಪಾತಿ, ಹಾಲೇರಿ ಕೆರೆ, ಹೂಗ್ರಂ, ಮಿಣ್ಣಂ ಜಲಾಶಯ, ಸೇರಿದಂತೆ ಕೆರೆಕಟ್ಟೆಗಳಿಗೆ ಕಾವೇರಿ ನದಿಯ ಸತ್ತೇಗಾಲದ ಸಮೀಪದ ಸರಗೂರು ಗ್ರಾಮದಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸಲು ಡಿಪಿಆರ್‌ಗೆ ಅನುಮತಿ ದೊರಕಿದ್ದು 419 ಕೋಟಿಯ ಪರಿಷ್ಕೃತ ಡಿಪಿಆರ್‌ನಲ್ಲಿ ಮಾರ್ಟಳ್ಳಿ, ಕುರಟ್ಟಿಹೊಸೂರು, ಕೌದಳ್ಳಿ, ಶೆಟ್ಟಿಹಳ್ಳಿ, ರಾಮಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಜಮೀನುಗಳನ್ನು ನೀರು ಒದಗಿಸಲು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಸರ್ಕಾರವು ತಕ್ಷಣವೇ ಹಣ ಬಿಡುಗಡೆ ರೈತರು ಗೂಳೆ ಹೋಗುವುದನ್ನು ತಪ್ಪಿಸಬೇಕು. ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಅರಣ್ಯ ಗ್ರಾಮಗಳಾದ ಆಲಂಬಾಡಿ, ಜಂಬೂರ್ ಪಟ್ಟಿ, ಮಾರಿಕೋಟೆ, ಪುದುಕೋಟೆ, ಅಪ್ಪುಕಾಂಪಟ್ಟಿ, ಪುಂಗಾತ್ತೂರು, ತೆಂಗಾಯ್ ಕೊಂಬು ಗ್ರಾಮಗಳು ಪಾರಂಪರಿಕ ಅರಣ್ಯ ವಾಸಿಗಳಿಗೆ ವಿದ್ಯುತ್, ಕುಡಿಯುವ ನೀರು ಸುಸಜ್ಜಿತ ರಸ್ತೆ, ಹಕ್ಕುಪತ್ರ ಇಲ್ಲದವರಿಗೆ ಯಾವುದೇ ಸರ್ಕಾರವು ಇಲ್ಲಿಯವರೆಗೂ ನೀಡಿರುವುದಿಲ್ಲ. ರಾಜ್ಯ ಸರ್ಕಾರ ನೀಡಬೇಕೆಂದು ತುರ್ತು ಹಕ್ಕು ಪತ್ರಗಳನ್ನು ನೀಡುವಂತೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಅಜ್ಜಿಪುರದಿಂದ ಬೆಂಗಳೂರು ವಿಧಾನಸೌಧದವರೆಗೂ ಪಾದಯಾತ್ರೆ ಮಾಡಿದ್ದರು.

ಸೋಮವಾರ ಪಾದಯಾತ್ರೆಗೆ ಬೆಂಗಳೂರಿಗೆ ತೆರಳುವ ರೈತರನ್ನು ಬೆಂಗಳೂರು ಕುಂಬಳಗೂಡಿನಲ್ಲೇ ಪೊಲೀಸರು ತಡೆದು ವಾಹನಗಳ ಮೂಲಕ ಪಾದಯಾತ್ರೆ ರೈತರನ್ನು ಬೆಂಗಳೂರು ಪ್ರೀಡಂ ಪಾರ್ಕ್‌ನಲ್ಲಿ ಇರಿಸಿ ಶಕ್ತಿಸೌಧದಲ್ಲಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರೈತ ಸಂಘದ ಪಾದಯಾತ್ರಿಗಳನ್ನು ಅಲ್ಲಿಗೆ ಕರೆಯಿಸಿ ಮನವಿ ಪತ್ರವನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತ್ ಕುಮಾರ್, ರಾಜ್ಯ ಕಾರ್ಯದರ್ಶಿ ಮಹದೇವ ಪ್ರಭು, ರಾಜ್ಯ ಕಾಯಂ ಸದಸ್ಯ ಮಹೇಶ್ ಕುಮಾರ್, ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ನೇತ್ರಾವತಿ, ರಮ್ಯರಾಮಣ್ಣ, ಚಾಮರಾಜನಗರ ರೈತ ಸಂಘದ ಉಪಾಧ್ಯಕ್ಷರಾದ ಗೌಡೇಗೌಡ, ಲೋಕೇಶ್ ಗೌಡ.ಹನೂರು ತಾಲ್ಲೂಕು ಅಧ್ಯಕ್ಷ ಅಮ್ಜದ್ ಖಾನ್, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಅಜ್ಜಿಪುರ ಗ್ರಾಮದ ಯುವ ಮುಖಂಡ ಪ್ರಶಾಂತ್‌ರವರನ್ನು ಒಳಗೊಂಡ ಸದಸ್ಯರು ಮನವಿ ಪತ್ರವನ್ನು ಸಲ್ಲಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹನೂರು ಭಾಗವೂ ಬರಪೀಡಿತ ಪ್ರದೇಶವೆಂದು ಗಮನದಲ್ಲಿದೆ ಹನೂರು ಭಾಗಕ್ಕೆ ಈ ಯೋಜನೆ ಮಾಡಿಕೊಡುವಂತೆ ಜಲ ಉಸ್ತುವಾರಿ ಸಚಿವ ವೆಂಕಟೇಶ್‌ರವರು ಸಹ ಒತ್ತಡ ಹಾಕುತ್ತಿದ್ದಾರೆ. ಒಂದೇ ಬಾರಿ ಎಷ್ಟು ದೊಡ್ಡ ಮೊತ್ತದ ಅನುದಾನವನ್ನು ನೀಡಲು ಸಾಧ್ಯವಿಲ್ಲ. ಬಜೆಟ್‌ನಲ್ಲಿ ಈ ಯೋಜನೆಯನ್ನು ಸೇರ್ಪಡೆ ಮಾಡಿ ಹಂತ ಹಂತವಾಗಿ ಅನುದಾನ ನೀಡಿ ಈ ಯೋಜನೆ ಯಶಸ್ವಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಸೇರ್ಪಡೆ ಮಾಡಿ ಅನುದಾನ ನೀಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಹಮ್ಮಿಕೊಂಡಿದ್ದ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪ್ರತಿಯೊಬ್ಬ ರೈತರಿಗೂ ದೊರಕಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಷೇರುದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೃಷಿ ಪತ್ತಿನ ಸಹಕಾರ ಸಂಘದ…

21 mins ago

ಹಾರ್ಮುಜ್‌ ಜನಸಂಧಿಯನ್ನು ಮುಚ್ಚಿದ ಇರಾನ್: ತೈಲ ಬೆಲೆಯಲ್ಲಿ ಭಾರೀ ಏರಿಕೆ

ಟೆಹರಾನ್:‌ ಅಮೇರಿಕಾ ಹಾಗೂ ಇಸ್ರೇಲ್‌ ದೇಶಗಳು ಇರಾನ್‌ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ…

29 mins ago

ಮಾರ್ಚ್.‌10ರಂದು ಡಿಕೆಶಿ ಡಿನ್ನರ್‌ ಪಾರ್ಟಿ: ಸಿದ್ದರಾಮಯ್ಯಗೂ ಆಹ್ವಾನ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾರ್ಚ್.10ರಂದು ಡಿನ್ನರ್‌ ಪಾರ್ಟಿ ಆಯೋಜನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾರ್ಚ್.‌6ರಂದು ಡಿ.ಕೆ.ಶಿವಕುಮಾರ್‌ ಕೆಪಿಸಿಸಿ…

1 hour ago

ಫೋನ್‌ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್‌ ತಿರುಗೇಟು

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು…

1 hour ago

ಖಮೇನಿ ಹತ್ಯೆ ವಿರೋಧಿಸಿ ಪ್ರತಿಭಟನೆ: ಕಾಶ್ಮೀರದಲ್ಲಿ ಕಠಿಣ ನಿರ್ಬಂಧ

ಶ್ರೀನಗರ: ಇರಾನ್‍ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ಕಣಿವೆಯಾದ್ಯಂತ ನಡೆದ ಬೃಹತ್ ಪ್ರತಿಭಟನೆಗಳ ನಂತರ ಕಾಶ್ಮೀರದಲ್ಲಿ…

1 hour ago

ಖಮೇನಿ ಹತ್ಯೆ ಬಳಿಕ ಕೇಂದ್ರ ಸರ್ಕಾರ ಮೌನವಹಿಸಿದೆ: ಸೋನಿಯಾ ಗಾಂಧಿ ಆಕ್ರೋಶ

ನವದೆಹಲಿ: ಇರಾನ್‍ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಕೇಂದ್ರ ಸರ್ಕಾರ ಮೌನವಾಗಿರುವುದಕ್ಕೆ ಕಾಂಗ್ರೆಸ್ ಸಂಸದೀಯ…

1 hour ago