ಚಾಮರಾಜನಗರ: ಕಾಡು ಪ್ರಾಣಿಗಳು ಈ ಭಾಗದಲ್ಲಿ ಊರು ಪ್ರವೇಶಿಸುವುದನ್ನು ಕೇಳಿದ್ದೇವೆ- ಕಂಡಿದ್ದೇವೆ. ಆದರೆ ಹುಲಿಯೊಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಸನಿಹದಲ್ಲೇ ಮೇಲಿಂದ ಮೇಲೆ ಸುಳಿದಾಡುತ್ತಿದ್ದು ಸಹಜವಾಗಿಯೇ ಇದರಿಂದ ಜನತೆ ಭಯಭೀತರಾಗಿದ್ದಾರೆ.
ಚಾಮರಾಜನಗರ -ನಂಜನಗೂಡು ಮುಖ್ಯರಸ್ತೆಯಲ್ಲಿರುವ ಮಕಾವ್ ಹೋಟೆಲ್ ಹತ್ತಿರದ ಕಾಳನಹುಂಡಿ ರಸ್ತೆಯಲ್ಲಿ ಸಿಗುವ ಕಟ್ಟೇಪುರದಲ್ಲಿ ಹುಲಿ ಇತ್ತೀಚೆಗೆ ಕರುವನ್ನು ಕೊಂದು ತಿಂದಿತ್ತು.
ಚಾ.ನಗರ ಪ್ರವೇಶ ದ್ವಾರದಿಂದ ಸುಮಾರು 5 ಕಿ.ಮೀ ದೂರದ ಕಟ್ಟೇಪುರದಲ್ಲಿ ಚಾಮರಾಜನಗರದ ಎಸ್‌ಪಿ ಎಸ್ ಸಾಹುಕಾರ್ ಜಿಯಾವುಲ್ಲಾ ಷರೀಫ್ ಅವರ ತೋಟವಿದ್ದು ಅಲ್ಲಿ ಕಟ್ಟಲಾಗಿದ್ದ ಕರುವನ್ನು ಏ.2ರಂದು ತಿಂದಿತ್ತು.
ಅರಣ್ಯ ಇಲಾಖೆ ಡಿಆರ್‌ಎಫ್ಒ ಸುರೇಶ್, ಫಾರೆಸ್ಟರ್ ಶ್ವೇತಾದ್ರಿ ಇತರರು ಪರಿಶೀಲನೆ ನಡೆಸಿದಾಗ ಮಾರನೇ ದಿನ ಕರುವಿನ ಕಳೇಬರ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನ ತಿಳಿಯಲು ಘಟನಾ ಸ್ಥಳದಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿತ್ತು. ಸೆರೆಗೆ ಬೋನನ್ನೂ ಇಟ್ಟು ಅದರ ಒಳಗಡೆ ಮೇಕೆ ಮರಿಯನ್ನು ಕಟ್ಟಲಾಗಿದೆ.
ಮೇಕೆ ತಿನ್ನುವ ಆಸೆಯಿಂದ ಬಂದು ಬೋನಿಗೆ ಬೀಳಲೆಂದು ಹೀಗೆ ಮಾಡಲಾಗಿದೆ. ಆದರೆ, ಚಾಲಾಕಿ ಹುಲಿ ಬೋನಿನತ್ತ ಸುಳಿಯದೇ ಅದರ ಹತ್ತಿರದಲ್ಲೇ ಮಂಗಳವಾರ (ಏ.8) ಮತ್ತೆ ನಡೆದು ಹೋಗಿರುವುದು, ಅದರ ಹೆಜ್ಜೆ ಗುರುತುಗಳು ಮೂಡಿರುವುದು ನೋಡಿ ಅಲ್ಲಿನ ತೋಟದ ಮನೆಗಳವರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆಯವರು ಹೇಳುವ ಪ್ರಕಾರ ಕಟ್ಟೆ ಪುರದಲ್ಲಿ ಏ.2ರಂದು ಕರುವನ್ನು ಕೊಂದು ತಿಂದಿದ್ಧ ಹುಲಿಯೇ ಏ.6ರ ಭಾನುವಾರ ಅರಕಲವಾಡಿ ಬಳಿಯ ಲಿಂಗಣಾಪುರದಲ್ಲಿಯೂ ರೈತರೊಬ್ಬರ ಕರುವನ್ನು ಕೊಂದು ತಿಂದಿದೆ. ಹುಲಿ ಕರುಗಳ ಮೇಲೆ ದಾಳಿ ಮಾಡಿರುವ ಈ ಎರಡೂ ಗ್ರಾಮಗಳ ನಡುವಿನ ಅಂತರ ದೂರ ಇದೆಯಾದರೂ ಹುಲಿ ಈ ಪ್ರದೇಶವನ್ನು ತನ್ನ ಎಲ್ಲೆಯಾಗಿ ಮಾಡಿಕೊಂಡಿದೆ. ಅದು ಆಗಾಗ್ಗೆ ಸಂಚಾರ ಮಾಡುತ್ತಿರುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಅರಣ್ಯ ಇಲಾಖೆಯವರು.
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹಮ್ಮದ್ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್ ಅಹಮ್ಮದ್ ಅವರು ಸಿಎಂ…
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…
ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…
ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…
ಶ್ರೇಷ್ಠ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಅವರ ಬಾಳಿಗೆ…
ಸಿ.ಹರಕುಮಾರ್, ಬರಹಗಾರ ಬಾಬಾ ಸಾಹೇಬ್‌ರ ಧಾರ್ಮಿಕ ನಿಲುವು ಅರಿಯಲು ಬಹುತೇಕರು ವಿಫಲ ಭಾರತದ ಭಾಗ್ಯವಿಧಾತ ಮತ್ತು ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್…