ಗುಂಡ್ಲುಪೇಟೆ : ಪಟ್ಟಣದ ಸಿಎಂಎಸ್ ಕ್ರಿಸ್ಚಿಯನ್ ಹಾಸ್ಟಲ್( ವಸತಿ ನಿಲಯ) ನಲ್ಲಿದ್ದ ವಿದ್ಯಾರ್ಥಿನಿ ಪೆಲೀಸಾ( 16) ಹಾಸ್ಟಲ್ ನಲ್ಲಿ ವ್ಯಾಯಾಮ ಪ್ರೇಯರ್ ಮುಗಿಸಿ ನಂತರ ಕೊಠಡಿಗೆ ತೆರಳುವಾಗ ಕುಸಿದುಬಿದ್ದಿದ್ದು ಅಕೆಯನ್ನು ಸಮೀಪದ ಸಾರ್ವಜನಿಕ ಅಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿ ಮೂಲತಃ ಬೆಂಗಳೂರಿನ ನಿವಾಸಿ. ತಾಯಿ ಅನಿತಾ ತಂದೆ ಪ್ರಭು ಇವರ ನಾಲ್ಕನೇ ಮಗಳಾಗಿದ್ದು ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟ್ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿದ್ಯಾಬಾಸ ಮಾಡುತಿದ್ದು ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತಿದ್ದಳು, ಸಿಎಂಎಸ್ ಕ್ರಿಸ್ಚಿಯನ್ ಹಾಸ್ಟಲ್ ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತಿದ್ದಳು ಬುಧವಾರ ಬೆಳಿಗ್ಗೆ 6.30 ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದು ಮೃತ ವಿದ್ಯಾರ್ಥಿನಿ ಮರಣೋತ್ತರ ಪರಿಕ್ಷೆ ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ನಡೆಸಲಾಯಿತು ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಯಿತು.
ವಿದ್ಯಾರ್ಥಿನಿ ಮೃತವಿಚಾರ ತಿಳಿದು ನಿರ್ಮಲಾ ಕಾನ್ವೆಂಟ್ ಸಾಲೆಗೆ ರಜೆ ಘೋಷಿಸಲಾಗಿತ್ತು, ಬಿಇಓ ರಾಜಶೇಖರ್, ಶಾಲಾ ಶಿಕ್ಷಕರು, ವಸತಿ ಶಾಲೆಯ ಸಿಬ್ಬಂದಿ ಸಂತಾಪ ಸೂಚಿಸಿದರು.
ಹೊಸದಿಲ್ಲಿ : ವೋಟ್ ಚೋರಿ ವಿರುದ್ಧ ಮತ್ತೆ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು…
ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…
ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…
ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬಹಳ…
ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…