ಚಾಮರಾಜನಗರ : ಬರ್ಹಿದೆಸೆಗೆ ತೆರಳಿದ್ದ ಯುವಕನ ಮೇಲೆ ಒಂಟಿ ಸಲಗ ದಾಳಿ ಮಾಡಿ, ತೀವ್ರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರದ ಮೇಲುಕಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ಆಗಸ್ಟ್ 13ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಗಸ್ಟ್ 13ರಂದು ನಾಗೇಶ್ ಎಂಬ ಯುವಕನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಆನೆ ದಾಳಿಗೆ ಒಳಗಾದ ಯುವಕನ ಬೆನ್ನು ಮೂಳೆ ಪುಡಿ ಪುಡಿಯಾಗಿದ್ದು ಕತ್ತಿನ ಹಿಂಭಾಗಕ್ಕೆ ಭಾರಿ ಹೊಡೆತ ಬಿದ್ದಿದೆ. ತಡರಾತ್ರಿ ಆನೆ ದಾಳಿ ನಡೆದಿದ್ದು ಬೆಳಗಿನ ಜಾವ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಬೆಳಿಗ್ಗೆ ನೋಡಿದಾಗ ಆನೆ ದಾಳಿ ನಡೆದ ವಿಷಯ ತಿಳಿದು ಬಂದಿದ್ದು, ರಾತ್ರಿಯಿಡಿ ಯುವಕ ಕಾಡಲ್ಲೇ ನರಳಾಡಿದ್ದ ಎನ್ನಲಾಗಿದೆ. ನಂತರ ಗಾಯಾಳು ನಾಗೇಶ್ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಪಾಸಣೆಯ ನಂತರ ವೈದ್ಯರು ಬಲಗಾಲು ಸ್ವಾದೀನ ತಪ್ಪಿದೆ ಮತ್ತು ಗಾಯಾಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸಾ ವೆಚ್ಚ ಭರಿಸಲಾಗದೆ ನಾಗೇಶ್ ತಾಯಿ ಕಂಗಾಲಾಗಿದ್ದಾರೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸದೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಮೊದಲು ಹಲವು ಬಾರಿ ಕಾಡಿನಲ್ಲಿ ಬೆಂಕಿ ಬಿದ್ದಾಗ ಆರಿಸಲು ಅರಣ್ಯಾಧಿಕಾರಿಗಳು ನಾಗೇಶ್ ಸಹಾಯ ಪಡೆದಿದ್ದರು, ಆದರೂ ಇದೀಗ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಘಟನಾ ಸ್ಥಳಕ್ಕೂ ಅರಣ್ಯಾಧಿಕಾರಿಗಳ ಕಚೇರಿಗೂ ಕೇವಲ 500 ಮೀಟರ್ ಅಂತರವಿದೆ. ಆದರೂ ಪ್ರಕರಣ ನಡೆದು ಇಷ್ಟು ದಿನವಾದರೂ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ನಿರ್ಲಕ್ಷವಹಿಸಿದ್ದರು ಎಂದು ಸ್ಥಳೀಯರು ದೂರಿದ್ದಾರೆ.
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…
ಯಳಂದೂರು: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ 4 ತಾಸು ಒದ್ದಾಟ ನಡೆಸಿದ ಘಟನೆ ಯಳಂದೂರು ತಾಲ್ಲೂಕಿನ ಗಂಗವಾಡಿಯಲ್ಲಿ…
ಮೈಸೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಾದಾಟ ತೀವ್ರಗೊಳ್ಳುತ್ತಿದ್ದಂತೆ, ಅಹಿಂದ ಸಮಾವೇಶದ ಹೆಸರಿನಲ್ಲಿ ಭಾರೀ ರಾಜಕೀಯ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಮುಖ್ಯಮಂತ್ರಿ…
ಮೈಸೂರು: ಚಿರತೆಯೊಂದು ರಾತ್ರೋರಾತ್ರಿ ಬೀದಿ ನಾಯಿಯನ್ನು ಹೊತ್ತೊಯ್ದಿರುವ ಘಟನೆ ಮೈಸೂರಿನ ಹೊರವಲಯದ ಬೆಳಗಾವಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಕಾಡು…
ಬೆಂಗಳೂರು,- ನಿರಂತರ ಏರಿಕೆಯಿಂದಾಗಿ ಚಿನ್ನ, ಬೆಳ್ಳಿ ಬೆಲೆಯು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಇಂದು ಪ್ರತೀ ಗ್ರಾಂ ಚಿನ್ನಕ್ಕೆ (24 ಕ್ಯಾರೆಟ್)…