ಚಾಮರಾಜನಗರ : ಕಳೆದ 18 ದಿನಗಳಿಂದ ಸ್ಥಳೀಯ ಜನರಲ್ಲಿ ಆತಂಕ ಉಂಟು ಮಾಡಿದ್ದ ಚಿರತೆಯೊಂದು ಇಂದು ಬೆಳಗ್ಗೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪದ ಸಿದ್ದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಕಳೆದ 18 ದಿನಗಳಿಂದ ಜನರಲ್ಲಿ ಆತಂಕ ಉಂಟು ಮಾಡಿದ್ದ ಚಿರತೆ ಇದೇ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೋನಿಗೆ ಬಿದ್ದಿರುವ ಚಿರತೆ ಮನುಷ್ಯರ ಮೇಲೆ ದಾಳಿ ಮಾಡಿರುವ ಚಿರತೆಯೇ ಅಥವಾ ಬೇರೆಯದ್ದೇ ಎಂಬುದನ್ನು ಅರಣ್ಯ ಇಲಾಖೆ ದೃಢಪಡಿಸಬೇಕಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಬಾಲಕಿ ಮೇಲೆ ಹಾಗೂ ಕಂಚಗಳ್ಳಿ ಗ್ರಾಮದಲ್ಲಿ ರೈತನ ಮೇಲೆ ದಾಳಿ ನಡೆಸಿ ಜನತೆಯ ನಿದ್ದೆಗೆಡಿಸಿತ್ತು. ಅರಣ್ಯ ಇಲಾಖೆ 6 ಬೋನು, 30 ಕ್ಯಾಮರಾ ಅಳವಡಿಸಿ ಸೆರೆ ಕಾರ್ಯಾಚರಣೆ ನಡೆಸಿತ್ತು.
ಚಿರತೆ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಬಾಲಕಿ ಸುಶೀಲ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಜೂನ್ 26ರಂದು ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದ ರಾಮು ಹಾಗೂ ಲಲಿತಾ ಎಂಬವರ ಪುತ್ರಿ ಸುಶೀಲಾ ತಮ್ಮ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಚಿರತೆ ದಾಳಿ ನಡೆಸಿತ್ತು.
ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಸಾಂಪ್ರದಾಯಿಕವಾಗಿ…
ಏಕಸ್ವಾಮ್ಯ ಸಾಧಿಸಲು ತಯಾರು ಪರಮಾಣು ಅಣ್ವಸ್ತ್ರ ಅದಕ್ಕಾಗಿಯೇ ನಿಲ್ಲದೆ ನಡೆಯುತ್ತಿದೆ ವಾಯು, ಡ್ರೋನ್, ಕ್ಷಿಪಣಿ ದಾಳಿ ನೆತ್ತರು ಹರಿಯುತ್ತಿದೆ ಹಿಂಸೆ…
ಸಂಬಂಧ..! ಒಂದೊಂದು ರೀತಿ ಒಬ್ಬೊಬ್ಬರ ಸಂಬಂಧ.. ಇವರದು ಹಾಲು-ಜೇನು ಅವರದು ಎಣ್ಣೆ-ಸೀಗೆಕಾಯಿ ಬೇಕಿದ್ದರೆ ಗಮನಿಸಿ.. ಇರಾನ್ -ಇಸ್ರೇಲ್ ಹಾವು-ಮುಂಗುಸಿ !…
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಿರ್ಗಮನ ದ್ವಾರದ ಬಳಿ ಮರವೊಂದು ಒಣಗಿ ನಿಂತಿದ್ದು, ಯಾವಾಗಲಾದರೂ ಬೀಳುವ ಸಾಧ್ಯತೆಯಿದೆ. ಕ್ರಾ-ರ್ಡ್ ಹಾಲ್…
ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದಲ್ಲಿರುವ ಎಸ್ಕಲೇಟರ್ ಕೇವಲ ತೋರಿಕೆಗೆ ಮಾತ್ರ ಇದೆ ಎನಿಸುತ್ತದೆ. ಒಂದನೇ ಪ್ಲಾಟ್ ಫಾರ್ಮ್ ಬಿಟ್ಟರೆ ಉಳಿದ…
ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ…