ಚಾಮರಾಜನಗರ

ಮಹದೇಶ್ವರ ಬೆಟ್ಟ : ವಿವಿಧ ಸೇವೆಗಳಿಂದ 1.16 ಕೋಟಿ ಸಂಗ್ರಹ

ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಬಂದಿದ್ದ ಭಕ್ತಾದಿಗಳ ವಿವಿಧ ಸೇವೆಗಳಿಂದ 1.16 ಕೋಟಿ ಸಂಗ್ರಹವಾಗಿದೆ

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಮಾರ್ಚ್ 16 ರಿಂದ 19 ರವರೆಗೆ ಜರುಗಲಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿದ ಭಕ್ತಾದಿಗಳು ಹಾಗೂ ಎರಡನೇ ಶನಿವಾರ ಭಾನುವಾರ ಇದ್ದ ಹಿನ್ನೆಲೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿದ ಹಿನ್ನೆಲೆ ಎರಡು ದಿನಗಳ ಅವಧಿಯಲ್ಲಿ 1.38 ಲಕ್ಷ ಲಾಡು ಮಾರಾಟವಾಗಿದೆ. ಪ್ರತಿ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಮೂರು ಲಕ್ಷ ಲಾಡು, ಮಾರಾಟವಾಗುತ್ತಿತ್ತು ಆದರೆ ಈ ಬಾರಿ ಜಾತ್ರೆಗೆ ಮುನ್ನವೇ 1.38 ಲಕ್ಷ ಮಾರಾಟವಾಗಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ. ಫೆಬ್ರವರಿ 14ರಂದು 70 ಸಾವಿರ ಫೆಬ್ರವರಿ 15ರಂದು 68 ಸಾವಿರ ಲಾಡು ಮಾರಾಟವಾಗಿದೆ.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಲಾಡು ತಯಾರಿಕೆ ಮಾಡಲಾಗುತ್ತಿದ್ದು ಭಾನುವಾರ ಹಾಗೂ ಸೋಮವಾರ ಎಪ್ಪತ್ತು ಸಾವಿರ ಲಾಡು ತಯಾರಿಕೆ ಮಾಡಲಾಗಿದೆ ಈ ಪೈಕಿ ಈಗಾಗಲೇ ರೂ.30 ಸಾವಿರ ಲಾಡು ಮಾರಾಟವಾಗಿದ್ದು ಒಂದು ಪಾಯಿಂಟ್ 1.10 ಸಾವಿರ ಲಾಡು ಶೇಖರಣೆ ಮಾಡಲಾಗಿದೆ.

ವಿವಿಧ ಉತ್ಸವಗಳಿಂದ 24 ಲಕ್ಷ ಆದಾಯ : ಸರ್ಕಾರಿ ರಜಾ ದಿನ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮನೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ಭಕ್ತಾದಿಗಳು ಹರೆಕೆ ರೂಪದಲ್ಲಿ ಬಂಗಾರದ ರಥೋತ್ಸವ 665, ಬಳ್ಳಿ ರಥೋತ್ಸವ 40 ಹೋಲಿವಾಹನ 359 ಬಸವ ವಾಹನ 715 ರುದ್ರಾಕ್ಷಿ ವಾಹನ 123 ಈ ಉತ್ಸವಗಳಿಂದ 24, 34,8005 ಆದಾಯ ಬಂದಿದೆ.

ಈ ಪೈಕಿ ಬಂಗಾರದ ರಥೋತ್ಸವದಿಂದ 19,95,665, ಬೆಳ್ಳಿ ರಥೋತ್ಸವ 80,040 ಹುಲಿ ವಾಹನ 1,07,700,ಬಸವ ವಾಹನ 2,14,500 ರುದ್ರಾಕ್ಷಿ ವಾಹನ 36900 ಒಟ್ಟಾರೆ 24 ಲಕ್ಷ ಆದಾಯ ಬಂದಿದೆ.

ಉಳಿದಂತೆ ಮಾಹಿತಿ ಕೇಂದ್ರ, ಲಾಡು ಮಾರಾಟ, ತೀರ್ಥ ಪ್ರಸಾದ, ಕಲ್ಲು ಸಕ್ಕರೆ ಬ್ಯಾಗ್, ಅಕ್ಕಿ ಸೇವೆ, ಪುದುವಟ್ಟು ವಿಶೇಷ ಪ್ರವೇಶ ಶುಲ್ಕ, ಜನ ವಾಹನ, ನೆಗದು ಕಾಣಿಕೆ ಇತರೆ ಸೇವೆಗಳಿಂದ 1,14 ಕೋಟಿ ಆದಾಯ ಸಂಗ್ರಹವಾಗಿದೆ.

ಆಂದೋಲನ ಡೆಸ್ಕ್

Recent Posts

ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆ ದರೋಡೆ; ಆರೋಪಿ ಬಂಧನ

ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…

5 hours ago

ಹೊರ್ಮುಜ್‌ ಜಲಸಂಧಿ ಶತ್ರುಗಳಿಗೆ ಮಾತ್ರ ಮುಚ್ಚಿದೆ : ಇರಾನ್

ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…

6 hours ago

ಹುಣಸೂರು | ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆ

ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…

6 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ; ಪ್ರತಿಭಟನೆ

ಮೈಸೂರು : ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕುಕ್ಕರಹಳ್ಳಿ…

6 hours ago

2 ಸಾವಿರ ಬೋಧಕ ಹುದ್ದೆಗಳಿಗೆ ನೇಮಕಾತಿ : ಉನ್ನತ ಶಿಕ್ಷಣ ಸಚಿವ ಸುಧಾಕರ್‌

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಯಲ್ಲಿ ಖಾಲಿ ಇರುವ…

6 hours ago

ಎಲ್‌ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ದೃಢಿಕರಣ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

ಹೊಸದಿಲ್ಲಿ : ಹಾರ್ಮುಜ್ ಜಲಸಂಧಿ ಸಂಘರ್ಷದಿಂದ ಉಂಟಾದ ಅಡುಗೆ ಅನಿಲ (ಎಲ್‌ಪಿಜಿ) ಸರಬರಾಜು ಕೊರತೆಯ ನಡುವೆ ಕೇಂದ್ರ ಪೆಟ್ರೋಲಿಯಂ ಮತ್ತು…

6 hours ago