ಜಿಲ್ಲೆಗಳು

ಚಾಮರಾಜನಗರ: ರೇಷ್ಮೆ ಮಾರುಕಟ್ಟೆ ಜಾಗ ಕಾಯ್ದಿರಿಸಿ ಆದೇಶ

ಹೈಟೆಕ್ ನಿಲ್ದಾಣಕ್ಕೆ ೨.೩೦ಎಕರೆ ಜಾಗ ಕೊನೆಗೂ ಅಸ್ತು

ಚಾಮರಾಜನಗರ: ಚಾಮರಾಜನಗರದಲ್ಲಿ ಹೈಟೆಕ್ ಸಾರಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಇದ್ದ ಜಾಗದ ಸಮಸ್ಯೆ ಕೊನೆಗೂ ಬಗೆಹರಿದಿದೆ. ಇಲ್ಲಿನ ರೇಷ್ಮೆ ವಾರುಕಟ್ಟೆಯ(ಸಂತೇಮರಹಳ್ಳಿ ರಸ್ತೆ) ೨.೩೦ ಎಕರೆ ಜಾಗವನ್ನು ನಿಲ್ದಾಣಕ್ಕೆ ಕಾಯ್ದಿರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯ ಹೆಸರಿಗೆ ಜಾಗ ಹಸ್ತಾಂತರಿಸಿಕೊಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ವಾಡಿರುವುದಾಗಿ ಚಾಮರಾಜನಗರ ಸಾರಿಗೆ ವಿಭಾಗೀುಂ ನಿುಂಂತ್ರಣಾಧಿಕಾರಿ ಶ್ರೀನಿವಾಸ್ ಪತ್ರಿಕೆಗೆ ತಿಳಿಸಿದರು.

ನಿಲ್ದಾಣಕ್ಕೆ ಕಾಯ್ದಿರಿಸುವ ಜಾಗ ಉದ್ದೇಶಿತ ಕಾನೂನು ಕಾಲೇಜಿನ ಕಟ್ಟಡ ಬಳಿ ಇದೆ. ಡೀವಿಯೇಷನ್ ರಸ್ತೆಯಲ್ಲಿ ಹಾಲಿ ಇರುವ ಬಸ್ ನಿಲ್ದಾಣ ಜಿಲ್ಲಾ ಕೇಂದ್ರಕ್ಕೆ ಸೂಕ್ತವಾಗಿಲ್ಲ. ಆದ ಕಾರಣ ವಿಶಾಲ ನಿಲ್ದಾಣ ವಾಡುವ ದಿಸೆುಂಲ್ಲಿ ಸುವಾರು ವರ್ಷಗಳಿಂದ ರೇಷ್ಮೆ ಇಲಾಖೆಗೆ ಸೇರಿದ ಈ ಜಾಗ ಪಡೆುಂಲು ಪ್ರುಂತ್ನ ನಡೆಯುತ್ತಲೇ ಇತ್ತು. ಒಂದು ಹಂತದಲ್ಲಿ ರೇಷ್ಮೆ ಇಲಾಖೆ ಈ ಜಾಗ ನೀಡಲು ಸ್ಪಷ್ಟವಾಗಿ ನಿರಾಕರಿಸಿತ್ತು. ನಿರೀಕ್ಷಿಸಿದ್ದ ಕಡೆಯೇ ತಡವಾಗಿಯಾದರೂ ಜಾಗ ದೊರಕಿದೆ.

ಈಗಿನ ಸಾರಿಗೆ ಬಸ್ ನಿಲ್ದಾಣವನ್ನು ಭವಿಷ್ಯದಲ್ಲಿ ಗ್ರಾವಾಂತರ ಬಸ್ ನಿಲ್ದಾಣವಾಗಿ ಪರಿವರ್ತಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ನಿಲ್ದಾಣವನ್ನು ತೀರಾ ಹೊರಭಾಗದಲ್ಲಿ ವಾಡಿದರೆ ಅದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎಂಬ ಮುನ್ನೆಚ್ಚರಿಕೆ ವಹಿಸಿ ರೇಷ್ಮೆ ಇಲಾಖೆ ಜಾಗವನ್ನು ಹಠಕ್ಕೆ ಬಿದ್ದವರಂತೆ ಪಡೆಯಲಾಗಿದೆ. ಜಾಗ ಸಂಸ್ಥೆ ಹೆಸರಿಗೆ ಹಸ್ತಾಂತರ ಆದ ಮೇಲೆ ಹೊಸ ನಿಲ್ದಾಣದ ಪ್ಲಾನ್-ಅಂದಾಜು ಪಟ್ಟಿ ಸಿದ್ಧಪಡಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ ಎಂದು ಇಲಾಖೆುಂ ಮೂಲಗಳು ತಿಳಿಸಿವೆ.

ಬಿ.ರಂ.ಬೆಟ್ಟದಲ್ಲೂ ನಿಲ್ದಾಣ

ಪ್ರಸಿದ್ಧ ಯಾತ್ರಾಸ್ಥಳ ಯಳಂದೂರು ತಾಲ್ಲೂಕು ಬಿಳಿಗಿರಿರಂಗನಬೆಟ್ಟದಲ್ಲಿ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲು ೩೭ಗುಂಟೆ ಜಾಗವನ್ನು ಸಂಸ್ಥೆಗೆ ನೀಡಲಾಗಿದೆ. ಮುೂರು ವಸತಿ ಗೃಹದ ಹತ್ತಿರ ನಿಲ್ದಾಣಕ್ಕೆ ನೀಡಲಾಗಿರುವ ಜಾಗದ ಸುತ್ತ ಕಾಂಪೌಂಡ್ ನಿರ್ಮಿಸುವ ಕಾರ್ಯ ಸಾಗಿದೆ. ಚಾ.ನಗರ ಹಿಂದುಳಿದ ಜಿಲ್ಲೆ ಪಟ್ಟಿಯಲ್ಲಿರುವುದರಿಂದ ವಿಶೇಷ ಅಭಿವೃದ್ಧಿ ನಿಧಿ(ಎಸ್‌ಡಿಎಫ್) ಅನುದಾನ ತಂದು ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ವಿಭಾಗೀಯ ನಿುಂಂತ್ರಣಾಧಿಕಾರಿ ಶ್ರೀನಿವಾಸ್ ವಾಹಿತಿ ನೀಡಿದರು.

ಈ ತಾಲ್ಲೂಕುಗಳಲ್ಲಿ ಬಸ್ ಡಿಪೋ…

ಪ್ರತಿ ತಾಲ್ಲೂಕಿನಲ್ಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ಇರಬೇಕಂತಿದೆ. ಈ ಉದ್ದೇಶ ಸಾಕಾರಗೊಳಿಸಲು ಹನೂರು ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಡಿಪೋಗೆ ಕನಿಷ್ಠ ೩ಎಕರೆ ಜಾಗ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಸಾರಿಗೆ ಸಂಸ್ಥೆ ಮನವಿ ವಾಡಿದೆ.

ಡಿಪೋ ನಿರ್ವಾಣ ಆದರೆ ಕನಿಷ್ಠ ೬೦ರಿಂದ ೮೦ಬಸ್‌ಗಳು ಆ ತಾಲ್ಲೂಕಿಗೆ ಸೀಮಿತವಾಗಿ ನಿಲ್ಲುತ್ತವೆ. ತಾಂತ್ರಿಕ ಸಿಬ್ಬಂದಿ, ಚಾಲಕರು, ನಿರ್ವಾಹಕರು ಎಲ್ಲರೂ ಸ್ಥಳೀಯವಾಗಿಯೇ ಇರುತ್ತಾರೆ. ಕುಗ್ರಾಮಕ್ಕೂ ಉತ್ತಮ ಸೇವೆಯನ್ನು ಬೆಳಗಿನ ಜಾವವೇ ಒದಗಿಸಲು ಸಾಧ್ಯವಾಗುತ್ತದೆ. ಬಸ್ ಕೆಟ್ಟರೆ ಬದಲಿ ವ್ಯವಸ್ಥೆುಂನ್ನು ಕೂಡಲೇ ವಾಡಲು ಅನುಕೂಲವಾಗುತ್ತದೆ. ಯಳಂದೂರು ಪರಿಮಿತಿುಂಲ್ಲಿ ಜಾಗದ ಕೊರತೆಯಾದರೆ ಸಂತೇಮರಹಳ್ಳಿಯಲ್ಲಿಯಾದರೂ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿರುವ ಪತ್ರದಲ್ಲಿ ಕೋರಲಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಲ್ಲಿ ಈಗಾಗಲೇ ಬಸ್ ಡಿಪೋಗಳಿವೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

31 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago