ಜಿಲ್ಲೆಗಳು

ಚಾ.ನಗರದಲ್ಲಿ ಸೊನೆ ಅವರೆ ಘಮಘಮ!

ಮಾರುಕಟ್ಟೆಗೆ ಬಂದಿರುವ ಅವರೆ; ಷಷ್ಠಿ ಹಬ್ಬದ ಹಿನ್ನೆಲೆಯಲ್ಲಿ ಕಿಲೋಗೆ 80 ರೂ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಜಿಲ್ಲೆಯಲ್ಲಿ ಚುಮು ಚುಮು ಚಳಿಯೊಂದಿಗೆ ಸೊನೆ ಅವರೆಕಾಯಿಯ ಘಮಲೂ ಪ್ರಾರಂಭವಾಗಿ ಗ್ರಾಹಕರನ್ನು ತನ್ನತ್ತ ಆಕರ್ಷಿಸಲಾರಂಭಿಸಿದೆ.
ಮಂಗಳವಾರ ಷಷ್ಠಿ ಹಬ್ಬ ಇರುವ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾದಿನ ನಗರದಲ್ಲಿ ಅವರೆಕಾಯಿ ಕಿಲೋಗೆ ೮೦ರೂ.ಗೆ ಮಾರಾಟವಾಯಿತು. ಜನರ ಪಾಲಿಗೆ ಈ ಬೆಲೆ ತುಟ್ಟಿ! ಅಲ್ಲಲ್ಲಿ ಕೊಯ್ಲು ಶುರುವಾಗಿ ಅವರೆಕಾಯಿ ಈಗಷ್ಟೇ ಮಾರುಕಟ್ಟೆಗೆ ಬರಲಾರಂಭಿಸಿದೆ. ಕೊಯ್ಲು ಸಾರ್ವತ್ರಿಕವಾಗಿ ನಡೆಯತೊಡಗಿ ಎಲ್ಲೆಡೆಯಿಂದ ಅವರೆ ಬರತೊಡಗಿದರೆ ಬೆಲೆ ದುಬಾರಿ ಇರಲ್ಲ. ನವೆಂಬರ್ ಕೊನೆಯಿಂದ ಜನವರಿ ಅಂತ್ಯದವರೆಗೆ ಅವರೆಕಾಯಿ ಸೀಜನ್ ಇರುವುದಾಗಿ ವ್ಯಾಪಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಮಳೆ ಆಶ್ರಿತ ಖುಷ್ಕಿ ಜಮೀನಿನಲ್ಲಿ ಅಧಿಕವಾಗಿ ಅವರೆ ಬೆಳೆಯಲಾಗುತ್ತದೆ. ನೀರಾವರಿಯಲ್ಲಿ ಬೆಳೆದಿದ್ದಕ್ಕಿಂತ ಖುಷ್ಕಿ ಜಮೀನಿನಲ್ಲಿ ಬೆಳೆದ ಅವರೆೆಯೇ ಹೆಚ್ಚು ಸ್ವಾದಿಷ್ಟ. ಮಂಜಿನ ಹನಿಯಿಂದ ತೊಯ್ದು ಘಮಘಮಿಸುವ ಸೊನೆ ಸೊಗಡಿನ ಅವರೆ ಬಹಳ ರುಚಿಕರವಾಗಿರುತ್ತದೆ. ಯಾವುದರಲ್ಲಿ ಈ ಸೊಗಡು ಇರುವುದಿಲ್ಲವೋ ಅದು ಅಷ್ಟೊಂದು ರುಚಿಯಾಗಿರುವುದಿಲ್ಲ ಎಂದು ಗ್ರಾಹಕ ಮಲ್ಲು ಹೇಳಿದರು.
ಎಲ್ಲಾ ಕಾಲದಲ್ಲಿ ಹೈಬ್ರಿಡ್ ಅವರೆ ಸಿಗುತ್ತದೆ. ಅದರಲ್ಲಿ ಅವರೆ ಪರಿಮಳವೇ ಇರುವುದಿಲ್ಲ. ಹೀಗಾಗಿ ಚಳಿಗಾಲದ ಅವರೆಕಾಯಿಯನ್ನು ಜನ ಇಷ್ಟಪಡುವುದಾಗಿ ಹೇಳುತ್ತಾರೆ ಅವರು.
ಹನೂರು, ಮಲೆಮಹದೇಶ್ವರಬೆಟ್ಟ, ರಾಮಾಪುರ, ಲೊಕ್ಕನಹಳ್ಳಿ ಹಾಗೂ ಕೊಳ್ಳೇಗಾಲ ಭಾಗದಲ್ಲಿ ಅವರೆಕಾಯಿಯನ್ನು ಹೆಚ್ಚು ಬೆಳೆಲಾಗುತ್ತದೆ. ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕುಗಳಲ್ಲೂ ಈ ಬೆಳೆ ಇದ್ದು ಈಗೀಗ ಕೊಯ್ಲಿಗೆ ಬರತೊಡಗಿದೆ. ಅನೇಕ ಕಡೆ ಇನ್ನೂ ಹೂ ಹಂತದಲ್ಲೇ ಇದೆ. ಟಿ.ನರಸೀಪುರ, ಹುಣಸೂರು ಕಡೆಯಿಂದಲೂ ನಗರದ ಮಾರುಕಟ್ಟೆಗೆ ಅವರೆಕಾಯಿ ಬರುತ್ತಿದೆ.
ಸಂಕ್ರಾಂತಿವರೆಗೂ ಅಡುಗೆ ಮನೆಗಳಲ್ಲಿ ಅವರೆಕಾಯಯದೇ ಕಾರುಬಾರು. ಇದು ದೇಹದ ಉಷ್ಣತೆ ಹೆಚ್ಚಿಸಲಿದೆ. ಹೀಗಾಗಿ ಚಳಿಯ ಋತುಮಾನದ ಬೆಳೆಗಳಲ್ಲಿ ಒಂದಾದ ಅವರೆಯನ್ನು ತಿಂಡಿ, ಊಟಕ್ಕೆ ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಲಾಗುತ್ತದೆ ಎಂದು ಪಾಕಪ್ರವೀಣರೊಬ್ಬರು ಮಾಹಿತಿ ನೀಡಿದರು.


ತಳ್ಳುಗಾಡಿಗಳಲ್ಲಿ ಮಾರಾಟ, ಬೇಡಿಕೆ
ಹೊರಗಿನಿಂದ ಮತ್ತು ಸ್ಥಳೀಯವಾಗಿ ಮಾರುಕಟ್ಟೆಗೆ ಬಂದಿರುವ ಅವರೆಕಾಯಿಯನ್ನು ರಸ್ತೆಬದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿಯವರು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು. ಷಷ್ಠಿ ಹಬ್ಬದಂದು ಬೆಳಿಗ್ಗೆ ಅವರೆಕಾಯಿ ಉಪ್ಪಿಟ್ಟು, ಕೋಸಂಬರಿ, ಪಂಚಾಮೃತ ಮಾಡಲಾಗುತ್ತದೆ. ಅಲ್ಲದೆ ಅವರೆ ಸಾಂಬಾರು ಮಾಡಿ ಸವಿಯಲಾಗುತ್ತದೆ. ಹೀಗಾಗಿ ಅವರೆಕಾಯಿಗೆ ಬೇಡಿಕೆ ಕಂಡುಬಂದಿತು.


ಜಿಲ್ಲೆಯಲ್ಲಿ ೧೫೧೦ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಅವರೆ ಬೆಳೆ ಬೆಳೆಯಲಾಗಿದ್ದು ಅಲ್ಲಲ್ಲಿ ಈಗ ಕೊಯ್ಲು ಪ್ರಾರಂಭವಾಗಿದೆ. ಕೊಳ್ಳೇಗಾಲ, ಹನೂರು ತಾಲ್ಲೂಕಿನಲ್ಲಿ ಹೆಚ್ಚು ಬೆಳೆ ಇದೆ. ಕಳೆದ ಮುಂಗಾರಿಗೆ ಹೋಲಿಸಿದರೆ ಈ ಬಾರಿ ಅವರೆ ಬೆಳೆ ಜಾಸ್ತಿ ಇದೆ.
-ಕೆ.ಮಧುಸೂದನ್, ಜಂಟಿ ಕೃಷಿ ನಿರ್ದೇಶಕರು.

andolanait

Recent Posts

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

11 hours ago

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್…

11 hours ago

ಯಮುನಾ ನದಿಯಲ್ಲಿ ಮುಳುಗಿದ ಪ್ರವಾಸಿಗರ ದೋಣಿ ; 6 ಮಂದಿ ಸಾವು, ಹಲವರು ನಾಪತ್ತೆ

ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…

12 hours ago

ಹಡಗುಗಳ ಮೇಲಿನ ಶುಲ್ಕ ನಿಲ್ಲಿಸಿ ; ಇರಾನ್‌ಗೆ ಟ್ರಂಪ್ ಸೂಚನೆ

ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ, ಅದು ತಕ್ಷಣವೇ ಅದನ್ನು ನಿಲ್ಲಿಸಬೇಕು…

13 hours ago

ನಂಜನಗೂಡು | ದೇವರಾಯಶೆಟ್ಟಿಪುರದಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮಲ್ಕುಂಡಿ : ರಾತ್ರಿ ವೇಳೆ ರಸ್ತೆ ಮಧ್ಯೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ದೇವರಾಯಶೆಟ್ಟಿಪುರ ಗ್ರಾಮದಿಂದ ಹುರ ಗ್ರಾಮಕ್ಕೆ ತೆರಳುವ ಮುಖ್ಯ…

13 hours ago

ಹನೂರು | ಪ್ರತ್ಯೇಕ ಮನೆಕಳ್ಳತನ ; ಐವರ ಬಂಧನ

ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…

14 hours ago