ಬಲಿ ಪಾಡ್ಯಮಿಗಿಂತ ನರಕ ಚತುರ್ದಶಿಯಂದೇ ಹೆಚ್ಚು ಸದ್ದು….
ಚಾಮರಾಜನಗರ: ನಗರದಲ್ಲಿ ದೀಪಾವಳಿ ಪಟಾಕಿ ಶಬ್ದ ಕಳೆದ ವರ್ಷಕ್ಕಿಂತ ಈ ಬಾರಿ ಜೋರಾಗಿದ್ದರಿಂದ ಸಹಜವಾಗಿಯೇ ಶಬ್ದಮಾಲಿನ್ಯ ಪ್ರಮಾಣ ಹಿಂದಿಗಿoತ ಸರಾಸರಿ ೮ ಡೆಸಿಬಲ್ನಷ್ಟು ಜಾಸ್ತಿಯಾಗಿದೆ!
ದೀಪಾವಳಿಯನ್ನು ಎಂದಿನoತೆ ೩ದಿನಗಳ ಕಾಲ ಆಚರಣೆ ಮಾಡಲಾಗಿದ್ದು ಈ ಪೈಕಿ ನರಕ ಚತುರ್ದಶಿಯಂದು(ಅ.೨೪)ಪಟಾಕಿ ಆರ್ಭಟ ಜೋರಾಗಿ ಆ ದಿನ ಶಬ್ದಮಾಲಿನ್ಯ ಪ್ರಮಾಣ ೭೧.೫ಡೆಸಿಬಲ್ ದಾಖಲಾಗಿದೆ.
ಹಬ್ಬದ ೨ನೇ ದಿನವಾದ ಅ.೨೫ರ ಅಮಾವಾಸ್ಯೆಯಂದು ಸೂರ್ಯಗ್ರಹಣ ಇದ್ದ ಕಾರಣದಿಂದಲೋ ಏನೋ ಪಟಾಕಿ ಸದ್ದು ಅಷ್ಟಾಗಿ ಮೊಳಗಿಲ್ಲ. ಹೀಗಾಗಿ ಆ ದಿನ ೬೧.೭ಡೆಸಿಬಲ್
ಶಬ್ದವಿತ್ತು. ಇದು ದೀಪಾವಳಿಗೆ ಮುಂಚಿನ (ಅ.೧೮) ಶಬ್ದಮಾಲಿನ್ಯಕ್ಕೆ ಸಮನಾಗಿದೆ.
ಇನ್ನು ಬಲಿಪಾಡ್ಯಮಿಯಂದು ಶಬ್ದಮಾಲಿನ್ಯ ಸರಾಸರಿ
೬೬.೧ಡೆಸಿಬಲ್ ಕಂಡುಬoದಿದೆ. ಈ ಪ್ರಕಾರ ಬಲಿಪಾಡ್ಯಮಿಗಿಂತ ನರಕಚತುರ್ದಶಿಯಂದೇ
ಪಟಾಕಿ ಮೊರೆತ ಹೆಚ್ಚಾಗಿರುವುದು ಗಮನಾರ್ಹ.
ಕಳೆದ ವರ್ಷ ಬಲಿಪಾಡ್ಯಮಿ ನ.೩ರಂದು ನಡೆದಿತ್ತು. ಆಗ ಶಬ್ದಮಾಲಿನ್ಯ ೫೮.೦೪ ಡೆಸಿಬಲ್ ದಾಖಲಾಗಿತ್ತು. ಆವಾಗ ಕೋವಿಡ್ ಹಿನ್ನೆಲೆಯಲ್ಲಿ ಪಟಾಕಿ ಬಳಕೆ ಕಡಿಮೆ ಕಾರಣ ದೀಪಾವಳಿಗೆ ಮುಂಚಿನ ಶಬ್ದಮಾಲಿನ್ಯಕ್ಕಿಂತ ೧.೧೦ಡೆಸಿಬಲ್ನಷ್ಟು ಶಬ್ದಮಾಲಿನ್ಯ ಮಾತ್ರ ಜಾಸ್ತಿಕಂಡುಬoದಿತ್ತು.
ಕರ್ನಾಟಕ ರಾಜ್ಯಮಾಲಿನ್ಯ
ನಿಯಂತ್ರಣಮoಡಳಿ ಕಚೇರಿ ಚಾ.ನಗರದ ವಾಣಿಯಾರ್ ಸ್ಟಿoಟ್ ಎಸ್ಪಿಎಸ್ ಕಾಂಪ್ಲೆಕ್ಸ್ನಲ್ಲಿ
ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಸಂಜೆ ೬ರಿಂದ ರಾತ್ರಿ ೧೨ರ ತನಕ ದೀಪಾವಳಿ ಸಂದರ್ಭ ಶಬ್ದದ ಗುಣಮಟ್ಟ ಮಾಪನಯಂತ್ರ ಇರಿಸಲಾಗಿತ್ತು. ಈ ಕಚೇರಿ ವ್ಯಾಪ್ತಿಯಲ್ಲಿ ದಾಖಲಾಗಿರುವ ಶಬ್ದಮಾಲಿನ್ಯದ ಪ್ರಮಾಣ
ಇದಾಗಿದೆ.
ಮೈಸೂರು : ಚಾಮುಂಡಿ ಬೆಟ್ಟ ಉಳಿಸಿ ಎಂಬ ಆಶಯದಲ್ಲಿ ಹಲವು ಸಂಘಟನೆಗಳು ಹಾಗೂ ನಾಗರಿಕರು ಸೇರಿ ‘ಚಾಮುಂಡಿಬೆಟ್ಟ ಸಂರಕ್ಷಣೆಗಾಗಿ ನಡಿಗೆ’…
ಬೆಂಗಳೂರು : ಬೆಂಗಳೂರು ನಗರದ ಜನಸಂಖ್ಯೆ ಮುಂದಿನ 20 ರಿಂದ 25 ವರ್ಷಗಳಲ್ಲಿನ ದ್ವಿಗುಣಗೊಳ್ಳಲಿದ್ದು, ನಗರದ ಮೂಲ ಸೌಕರ್ಯ ಕೊರತೆ…
ಮೈಸೂರು : ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕುಕ್ಕರಹಳ್ಳಿ ರೈಲ್ವೆ ಗೇಟ್ ಬಳಿ ನಡೆದಿದೆ.ಜ…
ಶಿರಸಿ : ಇಲ್ಲಿನ ಯಲ್ಲಾಪುರದಲ್ಲಿ ನಡೆದ ವಿವಾಹಿತೆ ರಂಜಿತಾ ಹತ್ಯೆ ಕೇಸ್ಗೆ ಬಿಗ್ ಟ್ವೀಸ್ಟ್ ಸಿಕ್ಕಿದ್ದು, ಹತ್ಯೆ ಆರೋಪಿ ರಫೀಕ್…
ಬೆಂಗಳೂರು : ಹಿಂದುಳಿದವರು ಸಂಘಟಿಸಿದರೆ ಜಾತೀಯತೆಯಾಗುವುದಿಲ್ಲ. ಉಪಜಾತಿಗಳಲ್ಲಿ ವಿಭಜಿಸದೇ ಒಂದೇ ಶಕ್ತಿಯಾಗಿ ಸಂಘಟಿತರಾಗಿ ಎಂದು ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ…
ಬೆಂಗಳೂರು: ಬಳ್ಳಾರಿ ಗಲಭೆಗೆ ಕಾರಣಕರ್ತರಾದ ಶಾಸಕ ನಾರಾ ಭರತ್ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಸರ್ಕಾರ ಜೈಲಿಗೆ ಏಕೆ ಹಾಕಿಲ್ಲ ಎಂದು…