ಇಂದು ( ಡಿಸೆಂಬರ್ 29 ) ಮೈಸೂರಿನ ವರುಣದಲ್ಲಿ ಒಳಚರಂಡಿ ಕಾಮಗಾರಿಯ ವೇಳೆ ಜೈನ ಶಿಲ್ಪಗಳು ಪತ್ತೆಯಾಗಿವೆ. ಈ ಶಿಲ್ಪಗಳು ಮುರಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು, ಅವುಗಳನ್ನು ಪುರಾತತ್ವ ಸಂಗ್ರಹಾಲಯಕ್ಕೆ ಉಪನಿರ್ದೇಶಕಿ ಮಂಜುಳಾ ಅವರು ಕಳುಹಿಸಿಕೊಟ್ಟಿದ್ದಾರೆ.
ಕೈ ಹಾಗೂ ಕಾಲುಗಳಲ್ಲಿದ ಗೊಮ್ಮಟ್ಟನ ಶಿಲ್ಪ, ಕೇವಲ ತಲೆ ಮಾತ್ರ ಇರುವ ಒಂದು ಶಿಲ್ಪ ಹಾಗೂ ಹೆಣ್ಣು ದೇವರ ಒಂದು ಶಿಲ್ಪ ಪತ್ತೆಯಾಗಿವೆ. ಇನ್ನು ಈ ಶಿಲ್ಪಗಳು 11ನೇ ಶತಮಾನದ್ದು ಎನ್ನಲಾಗುತ್ತಿದ್ದು, ಗಂಗರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿ ವರುಣ, ವಾಜಮಂಗಲ ಹಾಗೂ ವರಕೋಡು ದೊಡ್ಡ ಜೈನ ಕೇಂದ್ರಗಳಾಗಿದ್ದವು.
ಈ ಶಿಲ್ಪಗಳು ಪತ್ತೆಯಾಗುತ್ತಿದ್ದಂತೆ ಕುತೂಹಲದಿಂದ ಸ್ಥಳೀಯರು ನೋಡಲು ಸ್ಥಳಕ್ಕೆ ಆಗಮಿಸಿದ್ದು, ಡಾ ಎನ್‌ಎಸ್ ರಂಗರಾಜು, ಡಾ ಶಶಿಧರ್, ಶ್ರೀ ಪ್ರಸನ್ನ ಕುಮಾರ್ ವಿನೋದ್ ಜೈನ್ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು.
ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರವಾಸಿಗರ ಮನಗೆದ್ದಿದ್ದ ಹೆಮ್ಮೆಯ ಹುಲಿ…
ಬೆಂಗಳೂರು: 42ನೇ ಎಸಿಜೆಎಂ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಯ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.…
ಮಡಿಕೇರಿ: ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೈಸೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಿರತೆ ದಾಳಿ ನಡೆಸಿದ ಪರಿಣಾಮ ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪದ ಹಾವಿನಮೂಲೆ…
ಬೆಂಗಳೂರು: ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿನ ರಣರಂಗವಾಗಿ ಏರ್ಪಟ್ಟು, 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ…