ಜಿಲ್ಲೆಗಳು

ಬಿಜೆಪಿಯಿಂದಾಗಿ ಧರ್ಮಗಳ ನಡುವೆ ಕದಡಿರುವ ಶಾಂತಿಯನ್ನು ಒಗ್ಗೂಡಿಸುವುದಕ್ಕಾಗಿಯೇ ಜೋಡೋ ಯಾತ್ರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ

ಹನೂರು: ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಶಾಂತಿ ಕದಡುವ ಮೂಲಕ ಬಿಜೆಪಿ ಸಮುದಾಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಇದನ್ನು ಒಗ್ಗೂಡಿಸುವ ಸಲುವಾಗಿ ಭಾರತ್  ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಮನವಿ‌ ಮಾಡಿದರು.
ಪಟ್ಟಣದ ಗೌರಿಶಂಕರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಪಾದಯಾತ್ರೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಬಿಜೆಪಿ ದೇಶದಲ್ಲಿ ಉಂಟು ಮಾಡಿರುವ ಸಮಸ್ಯೆಗಳ ಪೈಕಿ ಐದು ಮುಖ್ಯ ಅಂಶಗಳ ಬಗ್ಗೆ ದೇಶದ ಜನತೆಗೆ ತಿಳಿಸಿಕೊಡುವ ಉದ್ದೇಶದಿಂದ ಈ ಭಾರತ್ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಜನರನ್ನು ಭ್ರಮೆಯಲ್ಲಿಡುವ ಕೆಲಸ ಮಾಡಿದ್ದಾರೆ. ದಿನಬಳಕೆ ಆಹಾರ ಪದಾರ್ಥಗಳು, ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ. ಕೀಟನಾಶಕ ಹಾಗೂ ರಸಗೊಬ್ಬರಗಳ ಬೆಲೆಯನ್ನು ಏರಿಸುವ ಮೂಲಕ ಸಾಮಾನ್ಯ ಜನರು ಹಾಗೂ ರೈತರ ಬದುಕನ್ನು ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ 40% ಸರ್ಕಾರ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯದ ಜನತೆಯ ಮೇಲೆ ಒಲವಿಲ್ಲ. ಪ್ರತಿ ಕೆಲಸದಲ್ಲೂ ಪರ್ಸೆಂಟೇಜ್ ತಗೆದುಕೊಳ್ಳುವ ಮೂಲಕ ದೇಶದ ಗಮನ ಸೆಳೆಯುವ ಮೂಲಕ ಕುಖ್ಯಾತಿ ಗಳಿಸಿದೆ. ಇದೆಲ್ಲವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ 3570 ಕಿ.ಮೀ ದೂರ ಇದೆ. ಇದು ಸತತ 150 ದಿನಗಳ ಕಾಲ ನಡೆಯಲಿದೆ. 10 ರಾಜ್ಯಗಳು ಹಾಗೂ 2‌ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರಗೆ ಜಿಲ್ಲೆಯಲ್ಲಿಯೆ ಕಾಂಗ್ರೆಸ್ ನ ಭದ್ರಕೋಟೆ ಎಂದು ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲೂ ಸಾಬೀತುಪಡಿಸಿರುವ ಹನೂರು ಕ್ಷೇತ್ರದಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ಮೂಲಕ ರಾಹುಲ್ ಗಾಂಧಿಯವರ ಪಾದಯಾತ್ರಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಶಾಸಕ ಆರ್. ನರೇಂದ್ರ ಮಾತನಾಡಿ, ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಮುಂದೊಂದು ದಿನ ಇತಿಹಾಸ ಸೃಷ್ಟಿಸಲಿದ್ದು, ಇದರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕಾರ್ಯಕರ್ತರು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದ್ದಾರೆ ಎಂದರು.
ಬಿಜೆಪಿ ಇಂದು ಹೆಣ ಹಾಗೂ ಹಣದ ಮೇಲೆ ರಾಜಕಾರಣ ಮಾಡುತ್ತಿದೆ. ಸಾಕಷ್ಟು ಸಾಮಾಜಿಕ ಕೃತ್ಯಗಳನ್ನು ನಡೆಸಿ ಅದನ್ನು ಅಮಾಯಕರು ಅಥವಾ ಬೇರೆ ಪಕ್ಷದ ನಾಯಕರ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿದೆ. ಘಟನೆಗಳ ನಡೆದ ಬಳಿಕ ಮಾಡಿದ ತನಿಖೆಗಳಲ್ಲಿ ಇದು ಬಯಲಾಗಿದೆ. ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಹುಟ್ಟು ಹಾಕುವ ಮೂಲಕ ಬಿಜೆಪಿ ಸಾಮಾನ್ಯರನ್ನು ಸಾವಿನ ದವಡೆಗೆ ಸಿಲುಕಿಸುವ ಪಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ್, ದೇವರಾಜು,ಕೆಪಿಸಿಸಿ ಸದಸ್ಯ ರಾಮಪುರ ಬಸವರಾಜು ಪಪಂ ಉಪಾಧ್ಯಕ್ಷ ಗಿರೀಶ್,ಸದಸ್ಯರುಗಳಾದ ಸುದೇಶ್, ಸಂಪತ್, ಹರೀಶ್ ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಮಾದನಾಯಕ,ನಿರ್ದೇಶಕ ಮುರುಡೇಶ್ವರ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಮುರುಗೇಶ್, ಸುಧಾ,ಯೂತ್ ಕಾಂಗ್ರೆಸ್ ಅಧ್ಯಕ್ಷ ಗುಂಡಾಪುರ ಮಾದೇಶ್,ಸುರೇಶ್ ಹಿರಿಯ ಮುಖಂಡರುಗಳ ಪೆದ್ದನಪಾಳ್ಯ ಮಣಿ, ಚಿಕ್ಕತಮ್ಮಯ್ಯ,ಅಜ್ಜಿಪುರ ನಾಗರಾಜು,ಮತೀನ್ ವೆಂಕಟರಮಣನಾಯ್ಡು, ಪಾಳ್ಯ ಕೃಷ್ಣ ಹಾಗೂ ಕಾರ್ಯಕರ್ತರು ಹಾಜರಿದ್ದರು

andolanait

Recent Posts

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು 60 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…

2 mins ago

ಓದುಗರ ಪತ್ರ:  ನಂಜನಗೂಡಿನ ಪ್ರಮುಖ ವೃತ್ತಕ್ಕೆ ಬಿ.ವಿ.ಪಂಡಿತರ ಹೆಸರಿಡಿ

ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…

13 mins ago

ಓದುಗರ ಪತ್ರ:  ಭೈರಪ್ಪ ಸ್ಮಾರಕ, ತಿಮ್ಮಕ್ಕ ವಸ್ತು ಸಂಗ್ರಹಾಲಯ ಸ್ವಾಗತಾರ್ಹ

ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…

20 mins ago

ಓದುಗರ ಪತ್ರ:  ಗೋಪಾಲಸ್ವಾಮಿ ಬೆಟ್ಟದ ಬಸ್ ಪ್ರಯಾಣ ದರ ಇಳಿಕೆ ಮಾಡಿ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…

23 mins ago

ಓದುಗರ ಪತ್ರ: ಮಸೂದೆ ಅಂಗೀಕಾರಕ್ಕಷ್ಟೇ ವಿಧಾನಸಭೆ ಅಧಿವೇಶನ ಸೀಮಿತವಾಗದಿರಲಿ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…

25 mins ago

ಥಿಯೇಟರ್‌ಗಳಲ್ಲಿ ಡೆವಿಲ್‌ ಅಬ್ಬರ: ದರ್ಶನ್‌ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್‌ ಆಗಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.…

27 mins ago