ಪಕ್ಷಿಗಳ ಪ್ರಭೇದ ಪತ್ತೆಗಾಗಿ ಈ ಸರ್ವೆ
ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.26ರಿಂದ 29ರತನಕ ಹಕ್ಕಿಗಳ ಸಮೀಕ್ಷೆ ನಡೆಯಲಿದೆ.
2012ರ ಆಸುಪಾಸಿನಲ್ಲಿ ನಡೆದಿದ್ದ ಸಮೀಕ್ಷೆ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಕಂಡುಬಂದಿದ್ದವು. ಈಗೆಷ್ಟು ಪ್ರಭೇದಗಳಿವೆ ಎಂಬುದನ್ನು ತಿಳಿಯಲು ಈ ಸಮೀಕ್ಷೆ ಮಾಡಲಾಗುತ್ತಿದೆ. ಇದು ಹಕ್ಕಿಗಳ ಸಂಖ್ಯೆಯನ್ನು ಎಣಿಸುವ ಸಮೀಕ್ಷೆಯಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮುಂಜಾನೆ ಮಂಜು ಆವರಿಸಿಕೊಂಡಿರುತ್ತದೆ. ಹಾಗಾಗಿ ಬೆಳಿಗ್ಗೆ 8.30ರ ಸುಮಾರಿಗೆ ಪ್ರಾರಂಭಿಸಿ ಸಂಜೆ 4ಗಂಟೆವರೆಗೂ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಹಿಂದೆ ಎಲ್ಲಾದರೂ ಪಕ್ಷಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರೆ ಅಥವಾ ಈ ಬಗ್ಗೆ ತರಬೇತಿ ಹೊಂದಿದ್ದರು ಅಂಥವರನ್ನು ಸಮೀಕ್ಷೆಗೆ ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ.
ಬಿಆರ್‌ಟಿ ಕಚೇರಿಯಲ್ಲಿ ನೇರವಾಗಿ ಅಥವಾ ಆನ್‌ಲೈನ್‌ನಲ್ಲಿ ಪಕ್ಷಿ ವೀಕ್ಷಕರು ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. 574.82ಚದರ ಕಿಮೀ ಪ್ರದೇಶ ಹೊಂದಿರುವ ಬಿಆರ್‌ಟಿಯಲ್ಲಿ ಬಫರ್ ಏರಿಯಾ 215.72ಚಕಿಮೀ., ಕೋರ್ ಏರಿಯಾ 359.10ಚಕಿಮೀ ಇದೆ. ಕೆ.ಗುಡಿ, ಪುಣಜನೂರು, ಚಾ.ನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಬೈಲೂರು ವನ್ಯಜೀವಿ ವಲಯಗಳಿದ್ದು ಸಮೀಕ್ಷೆ ಸಂದರ್ಭದಲ್ಲಿ ಯಾವ ವಲಯದತ್ತ ಯಾರ್ಯಾರು ಹೋಗಬೇಕೆಂದು ವಿಂಗಡಿಸಲಾಗುತ್ತದೆ. ಹಾಗಾಗಿ ಮೊದಲೆರಡು ದಿನ ಅರಣ್ಯ ವೀಕ್ಷಕರ ಆಯ್ಕೆ, ವಿಂಗಡಣೆಗೇ ಹಿಡಿಯಲಿದೆ. ಕೊನೆಯ 2ದಿನಗಳು ಮಾತ್ರ ಸಮೀಕ್ಷೆ ಜರುಗಲಿದೆ ಎಂದು ಬಿಆರ್‌ಟಿ ನಿರ್ದೇಶಕಿ ದೀಪ್ ಜೆ.ಕಾಂಟ್ರಾಕ್ಟರ್ ಪತ್ರಿಕೆಗೆ ತಿಳಿಸಿದರು.
ಪಕ್ಷಿಗಳ ಶಬ್ದ, ಗೂಡುಕಟ್ಟಿರುವ ಸ್ಥಳ ಗಮನಿಸಿಕೊಂಡು ಅವನ್ನು ಬೈನಾಕ್ಯುಲರ್ ಮುಖಾಂತರ ಗುರುತಿಸಲಾಗುತ್ತದೆ. ಈಗಿನ ವಾತಾವರಣ ಗಮನಿಸಿದರೆ ಅಪರೂಪದ ಹಾಗೂ ವಿಭಿನ್ನ ಪ್ರಭೇದದ ಪಕ್ಷಿಗಳು ಸಮೀಕ್ಷೆ ಸಂದರ್ಭದಲ್ಲಿ ಕಂಡುಬರುವಂತೆ ಕಾಣುತ್ತದೆ. ದಟ್ಟ ಅರಣ್ಯದ ಒಳಗೆ ಸಮೀಕ್ಷೆ ನಡೆಯುವುದರಿಂದ ಭದ್ರತೆಗಾಗಿ ಇಲಾಖೆ ಸಿಬ್ಬಂದಿ ಜೊತೆಯಲ್ಲಿರುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಗೂಗಲ್ ಪಾರಂ ಮುಖಾಂತರ ರಾಜ್ಯದ ಹೊರಗಿನ 12ಜನರ ಸಹಿತ 122ಮಂದಿ ಪಕ್ಷಿ ವೀಕ್ಷಕರು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಜ.18ರವರೆಗೂ ನೊಂದಣಿ ನಡೆಯಲಿದ್ದು ಯಾರು ಅರ್ಹರಿದ್ದಾರೆ ಅವರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ,
–ದೀಪ್ ಜೆ.ಕಾಂಟ್ರಾಕ್ಟರ್, ಬಿಆರ್‌ಟಿ ನಿರ್ದೇಶಕರು.
ಸಮೀಕ್ಷೆ ಚಳಿಗಾಲದಲ್ಲೇ ಯಾಕೆ?
ಹಕ್ಕಿಗಳು ಮರಿಗಳ ಜೊತೆ ಇರುವ ಮತ್ತು ಸಂತಾನೋತ್ಪತ್ತಿಯ ಸಮಯವಿದು. ಮರಿಗಳ ಕಾರಣಕ್ಕೆ ಹಕ್ಕಿಗಳು ಪದೇಪದೇ ಗೂಡಿನತ್ತ ಎಡತಾಕುತ್ತಿರುತ್ತವೆ. ಈ ಕಾರಣಕ್ಕೆ ಸಾಮಾನ್ಯವಾಗಿ ಚಳಿಗಾಲದಲ್ಲೇ ಸಮೀಕ್ಷೆ ನಡೆಯುತ್ತದೆ.
2020ರ ಡಿಸೆಂಬರ್‌ನಲ್ಲಿ ಬಿಆರ್‌ಟಿಯಲ್ಲಿ ಹಕ್ಕಿಗಳ ಹಬ್ಬ ಕೂಡ ನಡೆದಿತ್ತು. 2021ರ ಫೆಬ್ರವರಿಯಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಪಕ್ಷಿಗಳ ಸಮೀಕ್ಷೆ ಜರುಗಿತ್ತು.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…