ನಾಗನಹಳ್ಳಿ ಗ್ರಾಮದಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಪಕ್ಷಾತೀತವಾಗಿ ನಿರ್ಮಾಣ
ಎಚ್.ಡಿ.ಕೋಟೆ: ಜಾತ್ಯತೀತವಾಗಿ, ಪಕ್ಷಾತೀತವಾಗಿ ಗ್ರಾಮದಲ್ಲಿ ಎಲ್ಲರ ಪರಿಶ್ರಮದಿಂದ ಜಿಲ್ಲೆಯಲ್ಲಿ ದೊಡ್ಡದಾದ ೫ ಕೋಟಿ ರೂ. ವೆಚ್ಚದ ಯೇಸುವಿನ ದೇವಾಲಯವನ್ನು ನಿರ್ಮಿಸಿದ್ದು, ಶುಕ್ರವಾರ ಉದ್ಘಾಟನೆಗೆ ಸಜ್ಜಾಗಿದೆ.
ಪಟ್ಟಣ ಸಮೀಪದ ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಅತಿ ಹೆಚ್ಚಾಗಿ ಕ್ರೈಸ್ತ ಸಮುದಾಯದವರು, ಅಲ್ಪಸ್ವಲ್ಪ ಪ್ರಮಾಣದಲ್ಲಿ ಹಿಂದೂ ಸಮುದಾಯದವರು ವಾಸಿಸುತ್ತಿದ್ದಾರೆ.
ರಾಜಕೀಯದಲ್ಲಿ ಪಕ್ಷಗಳ ಮತ್ತು ಮುಖಂಡರುಗಳ ನಡುವೆ ತೀವ್ರ ಪೈಪೋಟಿ ಇದ್ದರೂ ಎಲ್ಲರೂ ಒಗ್ಗಟ್ಟಾಗಿ ಗ್ರಾಮದಲ್ಲಿ ಅತ್ಯುತ್ತಮವಾದ ಮತ್ತು ಬೃಹತ್ತಾದ ಯೇಸುವಿನ ದೇವಾಲಯ ನಿರ್ಮಿಸಿರುವುದು ವಿಶೇಷ.
೨೦೧೧ರಲ್ಲಿ ಚರ್ಚಿನ ಫಾದರ್ ಆಗಿದ್ದ ಮರಿ ಜೋಸೆಫ್ ಈ ಗ್ರಾಮದಲ್ಲಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದ ಯೇಸುವಿನ ದೇವಾಲಯ ನಿರ್ಮಾಣವಾಗಬೇಕೆಂದು ಗ್ರಾಮಸ್ಥರು ಮತ್ತು ಧರ್ಮಧ್ಯಕ್ಷರ ಜೊತೆ ಚರ್ಚಿಸಿ ಅದೇ ಸಾಲಿನಲ್ಲಿ ದೇವಾಲಯ ನಿರ್ಮಾಣಕ್ಕೆ ಧರ್ಮಾಧ್ಯಕ್ಷರಾದ ಥಾಮಸ್ ಅಂತೋನಿ ವಾಳ ಪಿಳ್ಳಿ, ಶಾಸಕರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ, ಸಂಸದರಾಗಿದ್ದ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದೇಶ್ ನಾಗರಾಜು, ಚಿಕ್ಕಮಾದು, ಸಿದ್ದರಾಜು ಮುಂತಾದವರ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು.
ಶಾಸಕರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ ೧೦ ಲಕ್ಷ ರೂ., ಚಿಕ್ಕಮಾದು ೫ ಲಕ್ಷ ರೂ., ಅನಿಲ್ ಚಿಕ್ಕಮಾದು ೫ ಲಕ್ಷ ರೂ.ಗಳನ್ನು ನೀಡಿದ್ದರು. ನಾಲ್ಕೂವರೆ ಕೋಟಿ ರೂ.ಗಳನ್ನು ಗ್ರಾಮಸ್ಥರು, ದಾನಿಗಳು, ಮೈಸೂರು ಧರ್ಮ ಕ್ಷೇತ್ರ ಸೇರಿದಂತೆ ಇನ್ನಿತರರ ಮೂಲಕ ಹಂತ ಹಂತವಾಗಿ ಸಂಗ್ರಹಿಸಿ ಕಳೆದ ಹತ್ತು ವರ್ಷಗಳಿಂದ ದೇವಾಲಯದ ಕಾಮಗಾರಿ ನಡೆಸಿದ್ದು, ಈಗ ಪೂರ್ಣಗೊಂಡಿರುವುದರಿಂದ ಡಿ.೩೦ರಂದು ಬೆಳಿಗ್ಗೆ ೧೦ ಗಂಟೆಗೆ ಶುಕ್ರವಾರ ದೇವಾಲಯವನ್ನು ಮಹಾ ಧರ್ಮಾಧ್ಯಕ್ಷರಾದ ಜಾನ್ ಕಾರ್ಡಿನಲ್ ರಿಬಟ್, ಧರ್ಮಾಧ್ಯಕ್ಷರಾದ ಆಂಟೊನಿ ವಿಲಿಯಂ, ಥಾಮಸ್ ಆಂಟೊನಿ, ರೋಸರಿಯೂ, ಸಿಪ್ರಿಯನ್, ಜಾನ್, ಡೊಮೆನಿಕಲ್, ಶಾಸಕರಾದ ಅನಿಲ್ ಚಿಕ್ಕಮಾದು, ಜಿ.ಟಿ.ದೇವೇಗೌಡ, ಸಂಸದ ಶ್ರೀನಿವಾಸಪ್ರಸಾದ್, ಮಾಜಿ ಸಂಸದ ಧ್ರುವನಾರಾಯಣ, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಶಿವಣ್ಣ, ಚಿಕ್ಕಣ್ಣ, ನಾಗನಹಳ್ಳಿ ಚರ್ಚ್ ಫಾದರ್ ಅಂತೋಣಿ ಸ್ವಾಮಿ, ಸಮಿತಿಯವರಾದ ಉಪಕಾರಿ, ಮೆಟ್ರಿನ್, ನಾಗನಹಳ್ಳಿ ಶಾಂತರಾಜು, ನಾಗನಹಳ್ಳಿ ಪ್ರದೀಪ, ಸ್ಟ್ಯಾನಿ, ಅಂತೋಣಿ, ಲಾಜರ್, ಚೋರಪ್ಪ, ಬಾಲರಾಜು, ಗೋಲ್ಡನ್, ಪೆದ್ರು, ಕ್ರೈಸ್ತ ಸಮುದಾಯದವರು ಭಾಗವಹಿಸಲಿದ್ದಾರೆ.
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…