ಮೈಸೂರು : ಬಹುರೂಪಿ ಚಲನಚಿತ್ರೋತ್ಸವಕ್ಕೆ ಮೂರನೇ ದಿನವೂ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶ್ರೀರಂಗ ರಂಗಮಂದಿರದಲ್ಲಿ ಭಾನುವಾರ ಪ್ರದರ್ಶನಗೊಂಡ ಮೂರು ಸಿನಿಮಾಗಳ ಪೈಕಿ ಮಧ್ಯಾಹ್ನ ೨ ರಿಂದ ೪.೩೦ರವೆರೆಗೆ ಪ್ರದರ್ಶನಗೊಂಡು ಮಲಯಾಳಂ ಭಾಷೆಯ ಮಹೇಶ್ ನಾರಾಯಣ್ ನಿರ್ದೇಶನದ ಟೇಕ್ ಆಫ್ ಸಿನಿಮಾಗೆ ಮಾಮೂಲಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಜನರು ಕಂಡು ಬಂದರು. ಆದರೂ, ಆಸನಗಳು ಭರ್ತಿಯಾಗಿರಲಿಲ್ಲ.
ಬೆಳಿಗ್ಗೆ 10.30 ಕ್ಕೆ ಪ್ರದರ್ಶನಗೊಂಡ ಆದಿತ್ಯ ರಾನಡೆ ನಿರ್ದೇಶನದ ರಾಂಚಿ ಪಖಾರ್ ಎಂಬ 30 ನಿಮಿಷಗಳ ಹಿಂದಿ ಸಿನಿಮಾ ಮತ್ತು ಮಧ್ಯಾಹ್ನ ೧೨ಕ್ಕೆ ಪ್ರದರ್ಶನಗೊಂಡ ಡೆರಿಕ್ ಡೊನೆನ್ ನಿರ್ದೇಶನದ ದಿ ಪ್ರೈಸ್ ಆಫ್ ಫ್ರೀ ಸಿನಿಮಾ ವೀಕ್ಷಣೆಗೆ ಐದಾರು ಮಂದಿ ವೀಕ್ಷಕರಷ್ಟೆ ಇದ್ದರು. ಇನ್ನು ಸಿನಿಮಾ ಕುರಿತ ಚರ್ಚೆಗಳು ಕೂಡ ಕಾಣಲಿಲ್ಲ. ಭಾನುವಾರವಾದರೂ, ಮಳೆಯ ಕಾರಣದಿಂದ ಜನರು ಬರಲಿಲ್ಲ.
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…