ಜಿಲ್ಲೆಗಳು

ನನ್ನ ಹೋರಾಟದ ಹಿಂದೆ ನೂರಾರು ಕೈಗಳು, ಕಣ್ಣುಗಳು, ಹೃದಯಗಳ ಬೆಂಬಲವಿದೆ- ಪದ್ಮಶ್ರೀ ಸೋಮಣ್ಣ

ಮೈಸೂರು : ನನ್ನ ಹೋರಾಟದ ಹಿಂದೆ ನೂರಾರು ಕೈಗಳು, ಕಣ್ಣುಗಳು ಹಾಗೂ ಹೃದಯಗಳ ಬೆಂಬಲವಿದೆ ಎಂದು ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಆದಿವಾಸಿ ನಾಯಕ ಎಚ್.ಡಿ. ಕೋಟೆ ತಾಲೂಕು ಮೊತ್ತ ಹಾಡಿಯ ಸೋಮಣ್ಣ ಹೇಳಿದರು.

ಕುವೆಂಪುನಗರದ ಕೆ ಬ್ಲಾಕಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಕಲ್ಪತರು ಚಾರಿಟಬಲ್ ಟ್ರಸ್ಟಿನಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆಗಷ್ಟೇ ಜೀತದಿಂದ ವಿಮುಕ್ತನಾಗಿದ್ದ ನಾನು ಮೊದಲಿಗೆ ನನ್ನ ಹೋರಾಟ ದಲಿತ ಸಂಘರ್ಷ ಸಮಿತಿಯ ಮೂಲಕ ಆರಂಭವಾಯಿತು. ಚಾ. ನಂಜುಂಡಮೂರ್ತಿ, ಬೆಟ್ಟಯ್ಯ ಕೋಟೆ ಅವರೊಂದಿಗೆ ಸೇರಿ ಹೋರಾಟಕ್ಕಿಳಿದೆ.

ನಂತರ ಕ್ಷೀರಸಾಗರ ಜೊತೆಯಾದರು. ಈ ಹೋರಾಟದಲ್ಲಿ ನೂರಾರು ಕೈಗಳು, ಕಣ್ಣುಗಳು, ಹೃದಯಗಳು ಬೆಂಬಲಿಸಿದ್ದರಿಂದ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದರು.

ಕಳೆದ ಐದು ದಶಕಗಳಿಂದ ಆದಿವಾಸಿಗಳ ಹಕ್ಕಗಳಿಗಾಗಿ ಹೋರಾಟ ಮಾಡುತ್ತಾ ಬಂದರೂ ಇನ್ನೂ ಹಲವಾರು ಸಮಸ್ಯೆಗಳು ಹಾಗೆಯೇ ಉಳಿದಿವೆ. ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು.

ಆದಿವಾಸಿಗಳಿಗೆ ಒಳ ಮೀಸಲಾತಿ ನೀಡಬೇಕು. ಆದಿವಾಸಿಗಳ ಮಕ್ಕಳ ಕಲಿಕೆಗೆ ಪ್ರತ್ಯೇಕ ವಿವಿ ಸ್ಥಾಪಿಸಬೇಕು. ಈ ಮಕ್ಕಳು ಕೂಡ ಪಿಎಚ್.ಡಿ. ಪಡೆಯುವ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಸೋಮಣ್ಣ ಅವರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಟ್ರಸ್ಟಿನ ಅಧ್ಯಕ್ಷ ಡಾ. ಅಮ್ಮಸಂದ್ರ ಸುರೇಶ್, ಕಾರ್ಯದರ್ಶಿ ಜಗದೀಶ್ ಆರ್. ತುಂಗಾ, ಉಪಾದ್ಯಕ್ಷ ಪಿ. ಕುಮಾರ್, ಖಜಾಂಚಿ ಪುರುಷೋತ್ತಮ, ಟ್ರಸ್ಟಿ ಲಕ್ಷ್ಮೀಕಾಂತ, ಮಹದೇವ ಮೊದಲಾದವರು ಸೋಮಣ್ಣ  ಅವರನ್ನು ಸನ್ಮಾನಿಸಿದರು.

andolanait

Recent Posts

ಮೈಸೂರು | ಠಾಣಾ ಮಟ್ಟದಲ್ಲಿ ರೌಡಿ ಪ್ರತಿಬಂಧಕ ದಳ ಸ್ಥಾಪನೆ

ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…

5 hours ago

ಮೈಸೂರು ʼಜಯದೇವʼಕ್ಕೆ ಹೃದಯ ಬಿರಿಯುವಷ್ಟು ಒತ್ತಡ

ಮೈಸೂರು: ದಶಕಗಳ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದನ್ನು ತಗ್ಗಿಸುವ ಜತೆಗೆ ಬೆಂಗಳೂರಿನ…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ : ಚಿತ್ರೋದ್ಯಮವೂ ಪೈರಸಿ ಎಂಬ ಪೆಡಂಬೂತವೂ

ನಾಳಿದ್ದು 21ರಂದು ನಡೆಯುವ ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆಪ್‌ಅನ್ನು ಜೂ. 27ರ ವರೆಗೆ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಬ್ಯಾನ್…

5 hours ago

ಮೀಸಲಾತಿ ಸಾಂವಿಧಾನಿಕ ಹಕ್ಕು ; ಸಮಾನತೆಯ ಮೆಟ್ಟಿಲು

ಮೀಸಲಾತಿ ಸೌಲಭ್ಯ ಇದ್ದರೂ ಕಠಿಣ ಪರೀಕ್ಷೆ ಪಾಸ್ ಮಾಡಲೇಬೇಕು ಟಿ.ಕೆ. ಹರೀಶ್ ಐತಿಹಾಸಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಗೊಳಗಾಗಿ, ಶಿಕ್ಷಣ ಹಾಗೂ…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 19  ಶುಕ್ರವಾರ  

6 hours ago

ಮುಂಗಾರು ಮತ್ತೆ ಚುರುಕು ; ಮೈಸೂರು, ಮಂಡ್ಯ, ಕೊಡಗಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…

15 hours ago