ಫೈರ್ ಮಾಡಿದ ಮೃತದೇಹ ಬಿಟ್ಟ ಕರಡಿ!
ಚಾಮರಾಜನಗರ: ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡಾನೆಗಳ ಉಪಟಳ ಹೆಚ್ಚಾಗುತ್ತಿರುವ ಮಧ್ಯೆಯೇ ಇದೀಗ ಕರಡಿ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನುಭೀಕರವಾಗಿ ಬಲಿತೆಗೆದುಕೊಂಡಿರುವ ಘಟನೆ ತಾಲ್ಲೂಕಿನ ಪುಣಜನೂರು ಬಳಿ ಶನಿವಾರ ನಡೆದಿದೆ.
ಪುಣಜನೂರು ರಾಜು(50) ಬಿನ್.ಭದ್ರಪ್ಪ ಮೃತಪಟ್ಟವರು.ಇವರೊಂದಿಗೆ ಇದ್ದ ಸಂಬಂಧಿಯೊಬ್ಬರು ಕರಡಿ ದಾಳಿಯಿಂದ ಬಚಾವಾಗಿದ್ದಾರೆ.
ವಿಷಯ ತಿಳಿದು ಗ್ರಾಮಸ್ಥರು ಘಟನಾ ಸ್ಥಳದಲ್ಲಿ
ಏನೆಲ್ಲಾ ಕೂಗಾಟ ಮಾಡಿದರೂ ರಾಜು ಅವರ ದೇಹವನ್ನು ಬಿಡದೆ ಸುಮಾರು 1ಕಿಮೀದೂರ ಎಳೆದು -ಎತ್ತಿಕೊಂಡು ಓಡಾಡಿದೆ. ಮಾಂಸ ಖಂಡಗಳನ್ನು ಕಿತ್ತು ತಿಂದು ಸಿಕ್ಕಸಿಕ್ಕ ಜಾಗಗಳೆಲ್ಲಾ ಕಚ್ಚಿ ದೇಹವನ್ನು ಗುರುತಿಸಲಾಗದ ಮಟ್ಟಿಗೆ ಮಾಡಿದೆ.
ಅರಣ್ಯ ಸಿಬ್ಬಂದಿ ಮೇಲಿಂದ ಮೇಲೆ ಏರ್ ಫೈರ್ ಮಾಡಿ ಕರಡಿಯನ್ನು ಓಡಿಸುವ ವೇಳೆಗೆ ಮೃತದೇಹವನ್ನು ಒದರಿ ಬಿಸಾಡಿತ್ತು.
ಬಿ ಆರ್ ಟಿ ಗೆ ಸೇರಿದ ಪುಣಜನೂರು ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಡಿ ದಾಳಿಯಿಂದ ಮೃತ ಪಟ್ಟ ವರದಿಯಾಗಿರಲಿಲ್ಲ.ಈಘಟನೆ ಪುಣಜನೂರು ಸುತ್ತಮುತ್ತಲಿನ ಕಾಡಂಚಿನ ಜನರಲ್ಲಿ ಆತಂಕ ಉಂಟು ಮಾಡಿದೆ.
ಮಧ್ಯಾಹ್ನ 3.30ರಲ್ಲಿ ಘಟನೆ ನಡೆದಿದ್ದು ಮೃತರು ದನ ಮೇಯಿಸಲು ಹೋಗಿದ್ದರೇ? ಅಥವಾ ಆ ಮಾರ್ಗದಲ್ಲಿ ಬೇರೆ ಎಲ್ಲಾದರೂ ಹೋಗಿದ್ದರೇ ಎಂಬುದನ್ನು ವಿಚಾರ ಮಾಡಲಾಗುತ್ತಿದೆ.
ಮೃತರಿಗೆ ಪತ್ನಿ, ಪುತ್ರ ಇದ್ದು ದನಕರು ಮತ್ತು ಕುರಿ ಸಾಕಾಣಿಕೆ ಯಿಂದ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.ಘಟನಾ ಸ್ಥಳದ ಬಳಿಯಲ್ಲೇ ಸಂಜೆ 7ಘಂಟೆಯಲ್ಲಿಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವನ್ಯ
ಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಸರ್ಕಾರದಿಂದ 15ಲಕ್ಷರೂ.ಪರಿಹಾರ ನೀಡಲು ಅವಕಾಶವಿದೆ.ಕರಡಿ ಏನಾದರೂ ಮತ್ತೆ ಪ್ರತ್ಯಕ್ಷವಾದರೆ ಅದಕ್ಕೆ ಅರಿವಳಿಕೆ ನೀಡಿ ಬೇರೆಡೆ ಬಿಡಲು ಘಟನಾ ಸ್ಥಳದ ಸುತ್ತಮುತ್ತ ಹೆಚ್ಚಿನ ಅರಣ್ಯ ಸಿಬ್ಬಂದಿಹಾಕುವುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.
ಪುಣಜನೂರು ವಲಯದ ಹುಚ್ಚನಕೆಂಬಾರೆ ಎಂಬ ಅರಣ್ಯದ ಒಳಗಡೆಕರಡಿದಾಳಿ ನಡೆದಿರುವುದಾಗಿ ಬಿ ಆರ್ ಟಿ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸಿಎಫ್ ಸುರೇಶ್, ಆರ್ ಎಫ್ ಒ ನಸೀರ್ ಅಹಮ್ಮದ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…