ಜಿಲ್ಲೆಗಳು

ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ‘ಚಿತ್ರಕಲಾ ಶಿಬಿರ’ಕ್ಕೆ ಚಾಲನೆ

ಮೈಸೂರು: ಯಾವುದೇ ಕಲಾವಿದ ಅಥವಾ ವಿಚಾರವಾದಿಗೆ ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ದೇಶವು ನೀಡಿದೆ. ಆದರೆ, ನಮ್ಮ ನಂಬಿಕೆ, ಚಿಂತನೆಗಳ ಅಭಿವ್ಯಕ್ತಿಯು ಇನ್ನೊಬ್ಬರ ಹಕ್ಕು, ನಂಬಿಕೆಗೆ ಘಾಸಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ನಗರದ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ರಂಗಾಯಣದಲ್ಲಿ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಹಿನ್ನೆಲೆಯಲ್ಲಿ ಶನಿವಾರ ‘ಚಿತ್ರಕಲಾ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸುವ ಮುನ್ನ ಎಚ್ಚರಿಕೆ ಇರಬೇಕು. ಇನ್ನೊಬ್ಬರಿಗೆ ನೋವಾಗದಂತೆ ಅದನ್ನು ವ್ಯಕ್ತಪಡಿಸುವ ಸೂಕ್ಷ್ಮತೆ ಇರಬೇಕು. ಸಿಟ್ಟು ಬಂದಾಗ ಭಾವನೆಗಳನ್ನು ಕೆರಳಿಸುವಾಗೇ ವರ್ತಿಸಬಾರದು. ಬಹುತ್ವ ಹಾಗೂ ಉದಾರತತೆಯನ್ನು ಗೌರವಿಸುವುದು ಈ ನೆಲದ ಗುಣ ಎಂದರು. ಯುವ ಕಲಾವಿದರಿಗೆ ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೊಸತನಕ್ಕೆ ತೆರೆದುಕೊಂಡಾಗ ಸವಾಲು ಇದ್ದೇ ಇರುತ್ತದೆ. ಸೋಲನ್ನು ಕಾಯುವವರು ನಮ್ಮೆದುರು ಇದ್ದೇ ಇರುತ್ತಾರೆ. ಅವೆಲ್ಲವನ್ನು ಮೀರಿ ನಡೆಯಬೇಕು. ರಂಗಾಯಣ ಕ್ರಿಯಾಶೀಲ ವೇದಿಕೆಯಾಗಿದ್ದು, ಅದನ್ನು ಯುವ ಉತ್ಸಾಹಿಗಳು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಂಗ ಕಲೆಯಲ್ಲಿ ತೊಡಗಿಸಿಕೊಂಡವರು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗುತ್ತಾರೆ. ರಂಗಭೂಮಿಗೆ ಎಲ್ಲ ಕಡೆಯಿಂದಲೂ ಜ್ಞಾನ-ವಿಚಾರಗಳು ಹರಿದು ಬರುತ್ತವೆ. ಬಹುರೂಪಿ ರಂಗೋತ್ಸವಕ್ಕೆ ದೇಶದ ವಿವಿಧೆಡೆಗಳಿಂದ ಕಲಾವಿದರು, ತಂಡಗಳು ಬರುತ್ತಿದ್ದಾರೆ. ಎಲ್ಲರೊಂದಿಗೆ ಬೆರೆಯುವ ಅವಕಾಶ ಸಿಗುತ್ತಿದೆ ಎಂದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ಎಲ್ಲವನ್ನು ಗೌರವಿಸುವುದೇ ಸವಾನತೆ. ಭಾರತೀಯತೆಯೇ ನಮ್ಮ ತಾಯಿ. ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ ಮಾಡುವವರು ಕೆಲವೊಂದನ್ನು ಮಾತ್ರ ಹೇಳಿ, ಇನ್ನೊಂದಷ್ಟನ್ನು ಹೇಳಬಾರದು ಎನ್ನುತ್ತಾರೆ. ಅದು ಕೂಡ ಅಭಿವ್ಯಕ್ತಿಗೆ ಧಕ್ಕೆ ಅಲ್ಲವೇ. ಅಭಿವ್ಯಕ್ತಿಯನ್ನು ಸಹಿಸದೇ ವಿರೋಧ ಮಾಡುವವರಿಗೆ ಸ್ವೀಕರಿಸುವ ಮನೋಭಾವವೇ ಇಲ್ಲ. ನಾಟಕ ನಿಲ್ಲಿಸಬೇಕೆಂದು ತಡೆ ಹಾಕುವುದು, ನಮ್ಮ ಹಕ್ಕಿನ ಮೇಲಿನ ಹಲ್ಲೆ ಆಗುವುದಿಲ್ಲವೇ? ನಿರ್ದಿಷ್ಟ ಧರ್ಮದ ಬಗ್ಗೆ ಮಾತ್ರ ಪ್ರಶ್ನಿಸಬೇಡಿ ಎನ್ನುವ ಜಾತ್ಯತೀತರು ಇದ್ದಾರೆ. ಭಾರತ ಮಾತೆಗೆ ಗೌರವ ನೀಡದ ‘ತುಕ್ಡೇ-ತುಕ್ಡೇ ಗ್ಯಾಂಗ್’ ಈಗಲೂ ಇದೆ ಎಂದರು.

ಚಿತ್ರ ಕಲಾವಿದ ಎಲ್.ಶಿವಲಿಂಗಪ್ಪ ಮಾತನಾಡಿ, ಸರ್ವ ಜನಾಂಗವನ್ನು ಒಳಗೊಂಡರೆ ಅದು ಭಾರತೀಯತೆ ಆಗುತ್ತದೆ. ವೈವಿಧ್ಯತೆ, ನಂಬಿಕೆಗಳನ್ನು ಕಾಪಾಡಿಕೊಳ್ಳಬೇಕು. ಎಲ್ಲವನ್ನು ಗ್ರಹಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು. ಮನಸ್ಸು ವಿಶಾಲಗೊಳಿಸಿಕೊಳ್ಳಬೇಕು. ಆಗ ಮಾತ್ರ ಕಲಾವಿದ ಆಗುತ್ತಾನೆ ಎಂದರು.

ಶಿಬಿರದಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯು (ಕಾವಾ) ೨೨ ವಿದ್ಯಾರ್ಥಿಗಳು ಪಾಲ್ಗೊಂಡರು.
ರಂಗಾಯಣ ಉಪನಿರ್ದೇಶಕರಾದ ನಿರ್ಮಲಾ ಮಠಪತಿ, ಕಾವಾ ಆಡಳಿತಾಧಿಕಾರಿ ಎಚ್.ಎಂ.ಜಯಶಂಕರ್, ‘ಬಹುರೂಪಿ’ ಸಂಚಾಲಕ ಜಗದೀಶ್ ಮನವಾರ್ತೆ ಕಾರ್ಯಕ್ರಮದಲ್ಲಿ ಹಾಜರಿದ್ದರು.


ಎಂ.ಎಫ್.ಹುಸೇನ್ ಅವರು ದೇವತೆಗಳ ಬೆತ್ತಲೆ ಚಿತ್ರ ಬಿಡಿಸಿ ಅಭಿವ್ಯಕ್ತಿಯೆಂದರು. ಅದನ್ನು ವಿರೋಧಿಸದೇ ಭಾರತೀಯರು ಸಹಿಸಿಕೊಂಡರು. ಆದರೆ, ನಿರ್ದಿಷ್ಟ ಧರ್ಮದ ಮೇಲೆ ಅದೇ  ಮಾದರಿಯಲ್ಲಿ ಬರೆದಿದ್ದರೆ ತಲೆ ಉರುಳುತ್ತದೆ. ನಮ್ಮ ಭಾವ ನಾಶವಾಗಿ ಹೋಗುವ ಭಯ ಮನೆ ಮಾಡಿದ್ದು, ಅದು ಕುಕ್ಕರ್ ಬಾಂಬ್ ಮೂಲಕ ಅಡುಗೆ ಮನೆಯನ್ನೂ ಪ್ರವೇಶಿಸಿದೆ.

ಅಡ್ಡಂಡ ಸಿ.ಕಾರ್ಯಪ್ಪ, ನಿರ್ದೇಶಕರು, ರಂಗಾಯಣ.

andolanait

Recent Posts

ಚಿತ್ರದುರ್ಗದಲ್ಲಿ ಬಸ್‌ ಅಪಘಾತ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ…

22 mins ago

ಚಿತ್ರದುರ್ಗದಲ್ಲಿ ಬಸ್‌ ಅಪಘಾತ ಪ್ರಕರಣ: ಹಾಸನ ಮೂಲದ ಇಬ್ಬರು ಟೆಕ್ಕಿಗಳು ಕಣ್ಮರೆ

ಹಾಸನ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ.…

27 mins ago

ಚಿತ್ರದುರ್ಗದಲ್ಲಿ ಬಸ್‌ ದುರಂತ ಪ್ರಕರಣ: ಕಂಬನಿ ಮಿಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಕಂಟೇನರ್‌ ಹಾಗೂ ಖಾಸಗಿ ಬಸ್‌ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ…

37 mins ago

ಎಲ್ಲೆಡೆ ಕ್ರಿಸ್‌ಮಸ್ ಹಬ್ಬದ ಸಂಭ್ರಮ: ಗಣ್ಯರಿಂದ ಶುಭಾಶಯಗಳ ಮಹಾಪೂರ

ಬೆಂಗಳೂರು: ಮಧ್ಯರಾತ್ರಿಯಿಂದಲೇ ಎಲ್ಲೆಡೆ ಕ್ರಿಸ್‌ಮಸ್‌ ಸಡಗರ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಕ್ರಿಸ್‌ಮಸ್‌ ಹಬ್ಬವು ನಂಬಿಕೆಯೆಂಬ…

47 mins ago

ಚಿತ್ರದುರ್ಗದಲ್ಲಿ ಭೀಕರ ಬಸ್‌ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10ಕ್ಕೂ…

2 hours ago

ಭೀಕರ ರಸ್ತೆ ದುರಂತ: ಬಸ್‌ಗೆ ಬೆಂಕಿ ತಗುಲಿ 10ಕ್ಕೂ ಹೆಚ್ಚು ಮಂದಿ ಸಾವು

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಕ್ರಾಸ್‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಜೀವ…

2 hours ago