ಜಿಲ್ಲೆಗಳು

ಪೊಲೀಸ್ ಬಲ ಪ್ರಯೋಗಿಸಿ ರೈತರ ಹೋರಾಟ ಹತ್ತಿಕ್ಕಲು ಯತ್ನ

ರೈತರ ಬಂಧನ, ವೇದಿಕೆ ಚೆಲ್ಲಾಪಿಲ್ಲಿ, ಶಾಮಿಯಾನ ನೆಲಸಮ * ಸರ್ಕಾರದ ದಮನಕಾರಿ ನೀತಿಯ ವಿರುದ್ಧ ರೈತರ ವ್ಯಾಪಕ ಆಕ್ರೋಶ

ಮಂಡ್ಯ: ಟನ್ ಕಬ್ಬಿಗೆ ೪೫೦೦ ರೂ. ನಿಗಧಿ, ಲೀಟರ್ ಹಾಲಿಗೆ ೪೦ ರೂ. ದರ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿದ್ದ್ದ ರೈತರ ಹೋರಾಟವನ್ನು ಪೊಲೀಸ್ ಬಲ ಪ್ರಯೋಗಿಸಿ ಬಿಜೆಪಿ ಸರ್ಕಾರ ದಮನಿಸುವ ಪ್ರಯತ್ನ ಮಾಡಿದೆ.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ ೫೧ ದಿನದಿಂದ ರೈತರು ಹೋರಾಟ ಮುಂದುವರೆಸಿದ್ದರು, ಇಂದು ಮುಖ್ಯಮಂತ್ರಿ ಭಾವಚಿತ್ರಕ್ಕೆ ರಕ್ತಾಭಿಷೇಕ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಹೋರಾಟ ನಿರತ ರೈತರನ್ನು ಬಂದಿಸಿ, ವೇದಿಕೆಯನ್ನು ಕಿತ್ತೊಗೆದು ಶಾಮಿಯಾನವನ್ನು ನೆಲಸಮ ಮಾಡಿದ್ದಾರೆ. ಧರಣಿ ಸ್ಥಳದಲ್ಲಿದ್ಧ ರಾಷ್ಟ್ರ ನಾಯಕರ ಫೋಟೋಗಳನ್ನು ಅಡ್ಡದಿಡ್ಡಿ ಬಿಸಾಕಿದ್ದಾರೆ.
ಹೋರಾಟ ನಿರತ ರೈತರ ಮೇಲೆ ಪೊಲೀಸರು ಬಲ ಪ್ರಯೋಗಿಸಿದ್ದು, ನೋಕಾಡಿ, ತಳ್ಳಾಡಿ ರೈತರನ್ನು ಎಳೆದೊಯ್ದಿ ದ್ದಾರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಎರಡು ದಿನ ಮುನ್ನವೇ ಹೋರಾಟ ನಿರತ ರೈತರ ಮೇಲೆ ಬಿಜೆಪಿ ಸರ್ಕಾರ ದಮನಕಾರಿ ನೀತಿ ಮೂಲಕ ಹೋರಾಟವನ್ನು ಹತ್ತಿಕ್ಕಿರುವುದಕ್ಕೆ ರೈತ ಸಮುದಾಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಹೋರಾಟ ನಿರತರಾಗಿದ್ದ ರೈತರು, ೫೧ನೇ ದಿನವೂ ಧರಣಿ ಮುಂದುವರಿಸಿದ್ದರು. ವಿಭಿನ್ನ ಪ್ರತಿಭಟನೆಗೆ ಮುಂದಾಗಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರವನ್ನು ಇಟ್ಟು ಸಿರಿಂಜ್ ಮೂಲಕ ತಮ್ಮ ದೇಹದ ರಕ್ತವನ್ನು ಹೊರ ತೆಗೆದು ಅಭಿಷೇಕ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಂಧನಕ್ಕೆ ಮೊದಲೇ ಸಿದ್ಧವಾಗಿ ಬಂದಿದ್ದ ಪೊಲೀಸರು ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಎಳೆದೊಯ್ದರು.
ರೈತರ ಬಂಧನದ ನಂತರ ಕೆಲ ಹೊತ್ತಲ್ಲೇ ಪ್ರತಿಭಟನಾ ಸ್ಥಳದಲ್ಲಿದ್ದ ವೇದಿಕೆ ಚಿಲ್ಲಾಪಿಲ್ಲಿ ಮಾಡಿ, ಶಾಮಿಯಾನ ಕಿತ್ತೆಸೆದರು, ಅವಸರದಲ್ಲಿ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಉದ್ಯಾನವನದ ಆವರಣ ಗೋಡೆ ಕಡೆಗ ಹಾಕಿದ್ದು, ಹೋರಾಟಗಾರ ಸುಂದರೇಶ್‌ರ ಭಾವಚಿತ್ರ ನೆಲದ ಮೇಲೆ ಬಿದ್ದಿದ್ದರೆ, ಮಹಾತ್ಮ ಗಾಂಧೀಜಿರ ಭಾವಚಿತ್ರ ಚೇರಿನ ಮೇಲೆ ಅಂಗಾತ ಬಿದ್ದಿತ್ತು, ಅಂಬೇಡ್ಕರ್, ಪ್ರೊ.ಕೆ.ಎಸ್.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರ ಮೇಲಿದ್ದವು. ಸಾರ್ವಜನಿಕರು ರಾಷ್ಟ್ರ ನಾಯಕರ ಭಾವಚಿತ್ರವನ್ನು ಬಿಸಾಡಿರುವ ಬಗ್ಗೆ ಕಿಡಿಕಾರಿದಾಗ ಪೊಲೀಸರು ಫೋಟೋಗಳನ್ನು ಟೆಂಪೋದೊಳಗೆ ಹಾಕಿದರು.
ಪ್ರತಿಭಟನಾ ಸ್ಥಳದಲ್ಲಿದ್ದ ಅಸ್ತವ್ಯಸ್ತವನ್ನು ನೋಡಿದರೆ ಪೊಲೀಸರು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶ ಹೊಂದಿದ್ದರೆ ವಿನಹ ಕಾನೂನಾತ್ಮಕ ಪ್ರಕ್ರಿಯೆಯನ್ನು ನಡೆಸಲು ಬಂದಿರಲಿಲ್ಲ ಎಂಬುದು ತೋರ್ಪಡಿಸುತ್ತಿತ್ತು, ವೇದಿಕೆಗೆ ಹಾಕಲಾಗಿದ್ದ ಬೆಂಚ್, ಶಾಮಿಯಾನ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಟೆಂಪೋಗೆ ಪೋಲಿಸ್ ಸಿಬ್ಬಂದಿ ತುಂಬಿಕೊAಡು ಹೊರಟರು, ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ತರಾತುರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲವೂ ನಡೆದಿದ್ದು, ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರ್ಪಡಿಸಿದೆ ಎಂದು ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

andolanait

Recent Posts

ಓದುಗರ ಪತ್ರ: ಅರಳುವ ಪ್ರತಿಭೆಗಳಿಗೆ ಸಮಯ ಹೆಚ್ಚು ಸಿಗಲಿ

ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…

2 hours ago

ಅಗಲಿದ ದೃಶ್ಯಬ್ರಹ್ಮ ಸಿಂಗೀತಂ, ‘ನಟಸಮ್ರಾಟ್’ ನಾನಾ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ   ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದ ಪಾಟೇಕರ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಮ್ಮೆ ಕಾಲವು ತರುವ…

2 hours ago

ಮಹಾಲಯ ಅಮಾವಾಸ್ಯೆಗೆ ಮ.ಬೆಟ್ಟ ಸಜ್ಜು

ಮಹಾದೇಶ್ ಎಂ.ಗೌಡ ೩ ದಿನಗಳ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ; ಪ್ರಾಧಿಕಾರದಿಂದ ಸಕಲ ಸಿದ್ಧತೆ  ಹನೂರು: ಮಹಾಲಯ ಅಮಾವಾಸ್ಯೆ…

3 hours ago

ಮಹೇಂದ್ರನ ಸುತ್ತ ಅನುಮಾನದ ಹುತ್ತ!

ಚಿರಂಜೀವಿ ಸಿ.ಹುಲ್ಲಹಳ್ಳಿ ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು ಮೈಸೂರು: ಮಹಾಭಾರತದ ಭೀಮನ…

3 hours ago

ನಲ್ಲೂರು ಅಮಾನಿ ಕೆರೆಗೆ ಹರಿದು ಬಂದ ನೀರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ  ಗುಂಡ್ಲುಪೇಟೆ:…

3 hours ago

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

17 hours ago