ರೈತರ ಬಂಧನ, ವೇದಿಕೆ ಚೆಲ್ಲಾಪಿಲ್ಲಿ, ಶಾಮಿಯಾನ ನೆಲಸಮ * ಸರ್ಕಾರದ ದಮನಕಾರಿ ನೀತಿಯ ವಿರುದ್ಧ ರೈತರ ವ್ಯಾಪಕ ಆಕ್ರೋಶ
ಮಂಡ್ಯ: ಟನ್ ಕಬ್ಬಿಗೆ ೪೫೦೦ ರೂ. ನಿಗಧಿ, ಲೀಟರ್ ಹಾಲಿಗೆ ೪೦ ರೂ. ದರ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿದ್ದ್ದ ರೈತರ ಹೋರಾಟವನ್ನು ಪೊಲೀಸ್ ಬಲ ಪ್ರಯೋಗಿಸಿ ಬಿಜೆಪಿ ಸರ್ಕಾರ ದಮನಿಸುವ ಪ್ರಯತ್ನ ಮಾಡಿದೆ.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ ೫೧ ದಿನದಿಂದ ರೈತರು ಹೋರಾಟ ಮುಂದುವರೆಸಿದ್ದರು, ಇಂದು ಮುಖ್ಯಮಂತ್ರಿ ಭಾವಚಿತ್ರಕ್ಕೆ ರಕ್ತಾಭಿಷೇಕ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಹೋರಾಟ ನಿರತ ರೈತರನ್ನು ಬಂದಿಸಿ, ವೇದಿಕೆಯನ್ನು ಕಿತ್ತೊಗೆದು ಶಾಮಿಯಾನವನ್ನು ನೆಲಸಮ ಮಾಡಿದ್ದಾರೆ. ಧರಣಿ ಸ್ಥಳದಲ್ಲಿದ್ಧ ರಾಷ್ಟ್ರ ನಾಯಕರ ಫೋಟೋಗಳನ್ನು ಅಡ್ಡದಿಡ್ಡಿ ಬಿಸಾಕಿದ್ದಾರೆ.
ಹೋರಾಟ ನಿರತ ರೈತರ ಮೇಲೆ ಪೊಲೀಸರು ಬಲ ಪ್ರಯೋಗಿಸಿದ್ದು, ನೋಕಾಡಿ, ತಳ್ಳಾಡಿ ರೈತರನ್ನು ಎಳೆದೊಯ್ದಿ ದ್ದಾರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಎರಡು ದಿನ ಮುನ್ನವೇ ಹೋರಾಟ ನಿರತ ರೈತರ ಮೇಲೆ ಬಿಜೆಪಿ ಸರ್ಕಾರ ದಮನಕಾರಿ ನೀತಿ ಮೂಲಕ ಹೋರಾಟವನ್ನು ಹತ್ತಿಕ್ಕಿರುವುದಕ್ಕೆ ರೈತ ಸಮುದಾಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಹೋರಾಟ ನಿರತರಾಗಿದ್ದ ರೈತರು, ೫೧ನೇ ದಿನವೂ ಧರಣಿ ಮುಂದುವರಿಸಿದ್ದರು. ವಿಭಿನ್ನ ಪ್ರತಿಭಟನೆಗೆ ಮುಂದಾಗಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರವನ್ನು ಇಟ್ಟು ಸಿರಿಂಜ್ ಮೂಲಕ ತಮ್ಮ ದೇಹದ ರಕ್ತವನ್ನು ಹೊರ ತೆಗೆದು ಅಭಿಷೇಕ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಂಧನಕ್ಕೆ ಮೊದಲೇ ಸಿದ್ಧವಾಗಿ ಬಂದಿದ್ದ ಪೊಲೀಸರು ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಎಳೆದೊಯ್ದರು.
ರೈತರ ಬಂಧನದ ನಂತರ ಕೆಲ ಹೊತ್ತಲ್ಲೇ ಪ್ರತಿಭಟನಾ ಸ್ಥಳದಲ್ಲಿದ್ದ ವೇದಿಕೆ ಚಿಲ್ಲಾಪಿಲ್ಲಿ ಮಾಡಿ, ಶಾಮಿಯಾನ ಕಿತ್ತೆಸೆದರು, ಅವಸರದಲ್ಲಿ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಉದ್ಯಾನವನದ ಆವರಣ ಗೋಡೆ ಕಡೆಗ ಹಾಕಿದ್ದು, ಹೋರಾಟಗಾರ ಸುಂದರೇಶ್‌ರ ಭಾವಚಿತ್ರ ನೆಲದ ಮೇಲೆ ಬಿದ್ದಿದ್ದರೆ, ಮಹಾತ್ಮ ಗಾಂಧೀಜಿರ ಭಾವಚಿತ್ರ ಚೇರಿನ ಮೇಲೆ ಅಂಗಾತ ಬಿದ್ದಿತ್ತು, ಅಂಬೇಡ್ಕರ್, ಪ್ರೊ.ಕೆ.ಎಸ್.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರ ಮೇಲಿದ್ದವು. ಸಾರ್ವಜನಿಕರು ರಾಷ್ಟ್ರ ನಾಯಕರ ಭಾವಚಿತ್ರವನ್ನು ಬಿಸಾಡಿರುವ ಬಗ್ಗೆ ಕಿಡಿಕಾರಿದಾಗ ಪೊಲೀಸರು ಫೋಟೋಗಳನ್ನು ಟೆಂಪೋದೊಳಗೆ ಹಾಕಿದರು.
ಪ್ರತಿಭಟನಾ ಸ್ಥಳದಲ್ಲಿದ್ದ ಅಸ್ತವ್ಯಸ್ತವನ್ನು ನೋಡಿದರೆ ಪೊಲೀಸರು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶ ಹೊಂದಿದ್ದರೆ ವಿನಹ ಕಾನೂನಾತ್ಮಕ ಪ್ರಕ್ರಿಯೆಯನ್ನು ನಡೆಸಲು ಬಂದಿರಲಿಲ್ಲ ಎಂಬುದು ತೋರ್ಪಡಿಸುತ್ತಿತ್ತು, ವೇದಿಕೆಗೆ ಹಾಕಲಾಗಿದ್ದ ಬೆಂಚ್, ಶಾಮಿಯಾನ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಟೆಂಪೋಗೆ ಪೋಲಿಸ್ ಸಿಬ್ಬಂದಿ ತುಂಬಿಕೊAಡು ಹೊರಟರು, ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ತರಾತುರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲವೂ ನಡೆದಿದ್ದು, ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರ್ಪಡಿಸಿದೆ ಎಂದು ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ನಗದು ದರೋಡೆ ಮಾಡಿರುವ ಘಟನೆ ಮಂಡ್ಯ…
ಹೈದರಾಬಾದ್: ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನೋಟಿಸ್ ನೀಡಲಾಗಿದೆ. ನಾಳೆ ಬೆಳಿಗ್ಗೆ 11…
ಬೆಂಗಳೂರು: ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಂದು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ…
ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ…
ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…