ಜಿಲ್ಲೆಗಳು

ಬಿ.ಆರ್.ಹಿಲ್ಸ್ ಹೆದ್ದಾರಿಯಲ್ಲಿ ಕಿತ್ತು ಹೋದ ಡಾಂಬರು

ಜಲ್ಲಿಯಿಂದ ಮುಚ್ಚಿದರೂ ಮತ್ತೆ ಹಳ್ಳ ನಿರ್ವಾಣ; ಸಂಚಾರ ದುಸ್ತರ

ವರದಿ: ಪ್ರಸಾದ್ ಲಕ್ಕೂರು

ಚಾಮರಾಜನಗರ: ನಗರದಿಂದ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ(೮೦)ಯಲ್ಲಿ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.

ಕಳೆದ ಮೂರು ತಿಂಗಳಿಂದ ಸುರಿದ ಸತತ ಮಳೆಗೆ ಡಾಂಬರು ಕಿತ್ತು ಬಂದಿದೆ. ಇತ್ತೀಚೆಗೆ ಎಂ.ಸ್ಯಾಂಡ್ ಮತ್ತು ಜಲ್ಲಿ ಮಿಶ್ರಣ ಮಾಡಿ ಹಾಕಿ ಗುಂಡಿಗಳಿಗೆ ತೇಪೆ ಹಾಕಿದ್ದರೂ ಪ್ರೋಂಜನವಾಗಿಲ್ಲ. ವಾಹನಗಳ ಓಡಾಟದಿಂದ ಜಲ್ಲಿ ಚದುರಿ ಹೋಗಿ ಮತ್ತಷ್ಟು ತೊಂದರೆಯಾಗಿದೆ.

ನಗರದ ರಾಮಸಮುದ್ರದ ಬಡಾವಣೆಯ ಮುಂಭಾಗದ ತಿರುವಿನಲ್ಲಿ ರಸ್ತೆ ಪದೇ ಪದೇ ಕಿತ್ತು ಹೋಗುತ್ತಿದೆ. ಗುಣಮಟ್ಟದ ಡಾಂಬರು ಹಾಕಿ ಸರಿಪಡಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡದೆ ಇರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ನಾಗವಳ್ಳಿಯಲ್ಲಿ ೩ ಕಡೆ ಪೈಪ್‌ಲೈನ್ ಹಾಕಲು ಹೆದ್ದಾರಿಯನ್ನು ೬ ತಿಂಗಳ ಹಿಂದೆಯೇ ಅಗೆದು ಹಳ್ಳ ಮಾಡಲಾಗಿದೆ. ಇನ್ನೂ ಸರಿಯಾಗಿ ಡಾಂಬರು ಹಾಕಿ ಮುಚ್ಚದೆ ಹಾಗೆಯೇ ಬಿಡಲಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿಯ ಹೊಂಡರಬಾಳು ಗ್ರಾಮದ ಬಳಿಯಿಂದ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದೊಳಗೆ ೨೫ ಕಿ.ಮೀ.ಸಾಗಲಿದ್ದು, ಐತಿಹಾಸಿಕ ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸಲಿದೆ.

ಅರಣ್ಯದೊಳಗೆ ಕಿರಿದಾದ ಹೆದ್ದಾರಿಯು ೭-೮ ಕಡೆ ಕಿತ್ತು ಹೋಗಿದೆ. ತಾತ್ಕಾಲಿಕವಾಗಿ ಜಲ್ಲಿ ಮತ್ತು ಎಂ.ಸ್ಯಾಂಡ್ ಬಳಿಸಿ ಮುಚ್ಚಿದರೂ ಮತ್ತೆ ಹಳ್ಳವಾಗಿದೆ. ಜಲ್ಲಿ ಚದುರಿ ಹೋಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವು ಕಡೆ ರಸ್ತೆಯ ಬದಿ ಕೊಚ್ಚಿ ಹೋಗಿ ಮಂಡಿುುಂದ್ದದ ಹಳ್ಳ ಬಿದ್ದಿದೆ. ಬೈಕ್‌ನಲ್ಲಂತೂ ಓಡಾಡಲು ಸರ್ಕಸ್ ವಾಡಬೇಕಿದೆ.

 ವೀಕೆಂಡ್‌ನಲ್ಲಿ ಹೆಚ್ಚು ವಾಹನ ಓಡಾಟ
ಹೆದ್ದಾರಿಯಲ್ಲಿ ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್ ಚಾಮರಾಜನಗರದಿಂದ – ಬಿಳಿಗಿರಿರಂಗನಬೆಟ್ಟಕ್ಕೆ ಸಂಚರಿಸುತ್ತದೆ. ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಾಲಯಕ್ಕೆ ಹೋಗಿ ಬರುತ್ತಾರೆ. ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಕೆ.ಗುಡಿಯಲ್ಲಿರುವ ಜಂಗಲ್ ರೆಸಾರ್ಟ್‌ಗೆ ತೆರಳುತ್ತಾರೆ. ವಾಸ್ತವ್ಯ ಹೂಡಿ
ಸಫಾರಿ ಹೋಗಿ ಅರಣ್ಯದ ಸೊಬಗು ಸವಿದು ಖುಷಿ ಪಡುತ್ತಾರೆ. ಇನ್ನು ಕೆ.ಗುಡಿ ವಲಯಾರಣ್ಯ ಕಚೇರಿಯ ನಲ್ಲೂರು ಸಮೀಪವಿದ್ದು, ಪ್ರತಿನಿತ್ಯ ಅರಣ್ಯಾಧಿಕಾರಿಗಳ ಜೀಪು, ಸಫಾರಿ ವಾಹನಗಳು ಓಡಾಡುತ್ತವೆ. ಆದರೆ, ಅರಣ್ಯದೊಳಗಿನ ಕಿರಿದಾದ ಹೆದ್ದಾರಿ ಕಿತ್ತು ಹೋಗಿದ್ದರಿಂದ ಚಾಲಕರು ಪ್ರಯಾಸ ಪಡಬೇಕಿದೆ.

 ಹಿತಕರ ವನಸಿರಿ; ಸಂಚಾರ ಕಿರಿಕಿರಿ
ಹೊಂಡರಬಾಳು ಬಳಿಯ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಿಂದ ಹೊರಟರೆ ಗಗನ ಚುಂಬಿ ಮರಗಳು, ಹಸಿರು ನೆಲ, ಅಲ್ಲಲ್ಲಿ ಜಿಂಕೆಗಳ ಪ್ರತ್ಯಕ್ಷ, ಪಕ್ಷಿಗಳ ಕಲರವ, ಜನರು-ವಾಹನಗಳ ಸದ್ದುಗದ್ದಲವಿಲ್ಲದ ತಂಪಾದ ಹಿತಕರ ವಾತಾವರಣ ಕಣ್ಮನ ಸೆಳೆಯುತ್ತದೆ. ಪ್ರಕೃತಿಯು ಸಿರಿ ಮನಸ್ಸಿಗೆ ಹಿತ ನೀಡಿದರೂ ಹೆದ್ದಾರಿ ಮಾತ್ರ ಸಂಚಾರಕ್ಕೆ ಕಿರಿಕಿರಿ ಮಾಡುತ್ತದೆ.

 ಮಳೆಯಿಂದ ಹುಲಿ ಸಂರಕ್ಷಿತಾರಣ್ಯದೊಳಗೆ ಕಿತ್ತುಹೋದ ಹೆದ್ದಾರಿಯನ್ನು ದುರಸ್ತಿ ಮಾಡಿಸಿಕೊಡಿ ಎಂದು ಅರಣ್ಯ ಇಲಾಖೆಯ ವತಿಯಿಂದ ಲೋಕೋಪಯೋಗಿ ಇಲಾಖೆ ಈಗಾಗಲೇ ಮನವಿ ಮಾಡಲಾಗಿದೆ. -ವಿನೋದ್‌ಗೌಡ, ಕೆ.ಗುಡಿ ವಲಯ ಅರಣ್ಯಾಧಿಕಾರಿ.

andolana

Recent Posts

ಟಿವಿಕೆ ಗೆಲುವು : ಹನೂರಲ್ಲಿ ಸಂಭ್ರಮಾಚರಣೆ

ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…

1 hour ago

ಪ.ಬಂಗಾಳ | ವಿಟೋ ಅಧಿಕಾರ ಬಳಸಿ ಮಂತ್ರಿಮಂಡಳ ವಿಸರ್ಜಿಸಿದ ರಾಜ್ಯಪಾಲ ; ದೀದಿಗೆ ಹಿನ್ನೆಡೆ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…

1 hour ago

ಹನೂರು | ಕಾಡು ಹಂದಿ ದಾಳಿ ; ರೈತನಿಗೆ ಗಂಭೀರ ಗಾಯ

ಹನೂರು : ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿ ದಾಳಿ ನಡೆಸಿ ರೈತನಿಗೆ ಗಂಭೀರ ಗಾಯಗೊಳಿಸಿರುವ ಘಟನೆ…

2 hours ago

ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿ ; ಸ್ಟಾಲಿನ್‌ ಹೇಳಿದ್ದೇನು?

ಚೆನ್ನೆ : ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ…

2 hours ago

ಮೇಲು-ಕೀಳು ಕಳೆಯಲಿ ; ಸರ್ವರೂ ಒಂದೇ ಎಂಬ ಮನೋಭಾವ ಮೂಡಲಿ : ಮೋಹನ್‌ ಭಾಗವತ್‌

ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ…

2 hours ago

ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌ ಪಂದ್ಯ : ಕೆಎಸ್‌ಸಿಎ ಹೇಳಿದ್ದೇನು?

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಧಿಕೃತವಾಗಿ ಸ್ಥಳಾಂತರಿಸಿದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್…

2 hours ago