ಜಿಲ್ಲೆಗಳು

‘ಪುನೀತ’ಮಯ ದಸರಾದಲ್ಲಿ ಎಲ್ಲೆಲ್ಲೂ ಅಪ್ಪು ನೆನಪು

ಮೈಸೂರು: ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ವಿರಾಜಮಾನರಾದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರಿಗೆ ಈ ಬಾರಿಯ ದಸರಾದುದ್ದಕ್ಕೂ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ನವರಾತ್ರಿಯ ದಿನಗಳಲ್ಲಿ ಅಪ್ಪು ಗುಣಗಾನದ ಮೆರವಣಿಗೆ ನಡೆದಿದೆ.

ಕಳೆದ ವರ್ಷ ಅಕ್ಟೋಬರ್ 29ರಂದು ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಹಠಾತ್ ನಿರ್ಗಮಿಸಿದಾಗ ಕಣ್ಣೀರಿಡದವರಿಲ್ಲ. ಆ ನೋವಿನ ಶೋಕ ಇನ್ನೂ ಮಡುಗಟ್ಟಿದೆ. ನಾಡಿನಾದ್ಯಂತ ನಾನಾ ವೇದಿಕೆಗಳಲ್ಲಿ ಈ ಶೋಕಾಚರಣೆ ಆಗಾಗ ವ್ಯಕ್ತವಾಗುತ್ತಲೇ ಇದೆ.

ಅಪ್ಪು ಅಭಿಮಾನಿಗಳಂತು ಇನ್ನೂ ದುಃಖದಿಂದ ಹೊರ ಬಂದಿಲ್ಲ. ಕೆಲವರು ಅವರು ನಟಿಸಿರುವ ಚಿತ್ರಗಳನ್ನು ಆಗಿಂದಾಗ್ಗೆ ನೋಡಿಕೊಂಡು ಕಾಲ ಕಳೆಯುತ್ತಿದ್ದಾರೆ. ರಾಜ್ಯ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಘೋಷಣೆ ಮಾಡಿದೆ. ಇದೆಲ್ಲವೂ ಅವರ ಮೇಲಿನ ಅಭಿಮಾನಕ್ಕೆ ಸಾಕ್ಷಿ. ಈಗ ದಸರಾ ಮಹೋತ್ಸವದಲ್ಲಿ ಎಲ್ಲ ವೇದಿಕೆಗಳಲ್ಲೂ ಅಪ್ಪು ಗುಣಗಾನ ನಡೆಯುತ್ತಿದ್ದು, ಅಗಲಿದ ಚೇತನಕ್ಕೆ ಗೌರವ ಸಲ್ಲಿಸಲಾಗುತ್ತಿದೆ.

ಸೆ.28ರಂದು ಅಪ್ಪು ಸ್ಮರಣೆಯ ಮೂಲಕವೇ ಯುವ ದಸರಾ ಆರಂಭಗೊಂಡಿತ್ತು. ನಟ ರಾಘವೇಂದ್ರ ರಾಜಕುಮಾರ್‌ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಮ್ಮುಖದಲ್ಲಿ ಖ್ಯಾತ ಗಾಯಕರು ಪುನೀತ್ ನಟನೆಯ ಚಲನಚಿತ್ರಗಳ ಗೀತೆಗಳನ್ನು ಪ್ರಸ್ತುತಪಡಿಸಿದ್ದರು. ಅಪ್ಪು ಕುರಿತ ಗಂಧದ ಗುಡಿ ಚಿತ್ರದ ಟ್ರೇಲರ್‌ ಬಿಡುಗಡೆಯಾದಾಗ ಪತ್ನಿ ಅಶ್ವಿನಿ ಅವರು ಕಣ್ಣೀರಿಟ್ಟಿದ್ದರು.

 

ಚಲನಚಿತ್ರೋತ್ಸವದಲ್ಲಿ ರಾಜಕುಮಾರ

ಸೆ. 29ರಂದು ದಸರಾ ಚಲನಚಿತ್ರೋತ್ಸವದಲ್ಲಿ ಪುನೀತ್‌ ಬಾಲ ಕಲಾವಿದನಾಗಿ ನಟಿಸಿ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ “ಬೆಟ್ಟದ ಹೂವುʼ ಪ್ರದರ್ಶಿಸಲಾಗಿತ್ತು. ಇದೇ ದಿನ ಮತ್ತು ರಾಜಕುಮಾರ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಿಸಿದ್ದರು. ಇಡೀ ದಿನ ಪುನೀತ್ ರಾಜ್‌ಕುಮಾರ್ ಸಿನಿಮಾದ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ಫಲಪುಷ್ಪ ಪ್ರದರ್ಶನ

ಅರಮನೆ ಮತ್ತು ಕುಪ್ಪಣ್ಣ ಗಾರ್ಡನ್‌ ಫಲಪುಷ್ಪ ಪ್ರದರ್ಶನದಲ್ಲೂ ಬಗೆ ಬಗೆಯ ಹೂಗಳಿಂದ ಅಪ್ಪು ಅವರ ಕಲಾಕೃತಿಯನ್ನು ರಚಿಸಲಾಗಿದ್ದು ಈ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಗಾಜಿನ ಮನೆ ಎದುರು ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆ ನಿರ್ಮಿಸಲಾಗಿದೆ. ಜತೆಗೆ “ಅಪ್ಪು ಐ ಲವ್ ಯುʼ ಎಂದು ಬರೆಯಲಾಗಿದೆ.

ಮರಳಿನಲ್ಲಿ ಅರಳಿದ ಅಪ್ಪು

ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಮರಳು ಶಿಲ್ಪ ಕಲಾವಿದೆ ಗೌರಿ ಅವರು ಅಪ್ಪು ಅವರ ಹಲವು ಕೃತಿಗಳನ್ನು ರಚಿಸಿದ್ದಾರೆ. ಬಾಲ್ಯದಿಂದ ಹಿಡಿದು ಜೇಮ್ಸ್ ಚಿತ್ರದವರೆಗಿನ 8 ಕಲಾಕೃತಿಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ದೀಪಾಲಂಕಾರದಲ್ಲೂ ಪವರ್‌ ಸ್ಟಾರ್‌

ನಗರದ ಪ್ರಮುಖ ರಸ್ತೆಗಳಲ್ಲಿ ನೂರು ಕಿ.ಮೀ.ಗೂ ಹೆಚ್ಚು ದೂರಕ್ಕೆ ವ್ಯಾಪಿಸಿರುವ ದೀಪಾಲಂಕಾರದಲ್ಲೂ ಅಲ್ಲಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಕಲಾಕೃತಿಗಳಿವೆ. ಮಹಾರಾಜ ಮೈದಾನ ಪ್ರವೇಶ ದ್ವಾರದಿಂದ ಹಿಡಿದು ನಾನಾ ಭಾಗಗಳಲ್ಲಿ ಪುನೀತ್‌ ಡಿಜಿಟಲ್‌ ಕಲಾಕೃತಿಗಳು ಅಭಿಮಾನಿಗಳ ಮನೆ ಸೆಳೆಯುತ್ತಿದೆ.

ಯುವ ದಸರಾ

ಯುವದಸರೆಯ ವೇದಿಕೆಯಲ್ಲಿ ಬಂದ ಅತಿಥಿಗಳೆಲ್ಲರೂ ಅಗಲಿದ “ಯುವರತ್ನʼನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಮೊದಲ ದಿನದ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ ಕುಮಾರ್‌ ಸೇರಿದಂತೆ ಪುನೀತ್‌ ಕುಟುಂಬಸ್ಥರೆಲ್ಲರೂ ವೇದಿಕೆ ಏರಿ ಅಪ್ಪು ಸ್ಮರಣೆ ಮಾಡಿ ಅಭಿಮಾನಿಗಳ ದು:ಖದಲ್ಲಿ ಭಾಗಿಯಾದರು. ಪ್ರತೀ ಬಾರಿಯೂ ಅಪ್ಪುವಿನ ಹೆಸರು ಬಂದಾಗಲೆಲ್ಲಾ ಪ್ರೇಕ್ಷಕ ವರ್ಗ ಚಪ್ಪಾಳೆ, ಶಿಳ್ಳೆಗಳ ಮೂಲಕ ಕರ್ನಾಟಕ ರತ್ನನ ಮೇಲಿನ ಅಭಿಮಾನವನ್ನು ತೋರಿಸುತ್ತಿದ್ದಾರೆ.

andolana

Recent Posts

ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಮದುವೆಯ ಫೋಟೋಗಳು ವೈರಲ್‌

ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…

21 mins ago

ರೈಲ್ವೆ ಹುದ್ದೆ ಪಡೆಯಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ: ಸಚಿವ ವಿ.ಸೋಮಣ್ಣ

ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…

42 mins ago

ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ: ಡ್ರೋನ್‌ ಪ್ರತಾಪ್‌ಗೆ ಜಾಮೀನು ಮಂಜೂರು

ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್‌ ಪ್ರತಾಪ್‌ಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ಜಾಮೀನು ಮಂಜೂರು ಮಾಡಿ…

59 mins ago

9 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: 9823 ರೂ ಕೋಟಿ ಮೌಲ್ಯದ 9 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರಿ…

2 hours ago

ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ದರ್ಶನ್‌ ಅವರು ನಾಡಿನ…

2 hours ago

5 ಹಾಗೂ 8ನೇ ತರಗತಿ ಪರೀಕ್ಷೆಗೆ ಮಹತ್ವದ ತೀರ್ಮಾನ ಕೈಗೊಂಡ ಕೇಂದ್ರ ಸರ್ಕಾರ

ನವದೆಹಲಿ: ಇನ್ನು ಮುಂದೆ ಐದು ಹಾಗೂ ಎಂಟನೇ ತರಗತಿಗಳಲ್ಲೂ ವಿದ್ಯಾರ್ಥಿಗಳನ್ನು ಫೇಲ್‌ ಮಾಡಬಹುದು ಎಂಬ ಹೊಸ ತಿದ್ದುಪಡಿಯನ್ನು ಕೇಂದ್ರ ಸರ್ಕಾರ…

2 hours ago