ಅಂತರಸಂತೆ: ಸೌದೆ ತರಲು ಕಾಡಿಗೆ ಹೊದಂತಹ ಸಂದರ್ಭದಲ್ಲಿ ಹುಲಿಯೊಂದು ದಾಳಿ ನಡೆಸಿ ಯುವಕನೊಬ್ಬನನ್ನು ಬಲಿ ಪಡೆದಿರುವ ಘಟನೆ ನಾಹರಹೊಳೆ ಅರಣ್ಯ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಸಮೀಪ ನಡೆದಿದೆ.
ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಬಳ್ಳೆ ಹಾಡಿಯ ಮಂಜು(೧೭) ಎಂಬುವವರು ಹುಲಿ ದಾಳಿಗೆ ಬಲಿಯಾದ ದುರ್ಧೈವಿ. ಪುಷ್ಪ ಮತ್ತು ಲೇ. ಬಿ.ಕಾಳ ಎಂಬುವವರ ಮಗನಾದ ಮಂಜು ಪ್ರತಿದಿನದಂತೆಯೇ ಬಳ್ಳೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸೌದೆ ತರಲು ಕಾಡಿಗೆ ತೆಳಿದ್ದಾನೆ. ಈ ವೇಳೆ ಬಳ್ಳೆ ಹಾಡಿಯ ಸಮೀಪವೇ ಹುಲಿಯೊಂದು ಏಕಾಏಕಿ ಆತನ ಮೇಲೆ ದಾಳಿ ನಡೆಸಿದ್ದು, ದಾಳಿಯ ತೀವ್ರತೆಯಿಂದ ಯುವಕನ ತಲೆಗೆ ಗಂಭೀರವಾದ ಗಾಯವಾದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ: ಇನ್ನೂ ಘಟನೆಯಾದ ಬಳಿಕ ಅರಣ್ಯ ಇಲಾಖೆಯವರು ಕುಟುಂಬಸ್ಥರಿಗೆ ತಿಳಿಸದೆ ಹಾಗೂ ಹಾಡಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರ ತಿಳಿಸಿದಂತೆ ಮೃತದೇಹವನ್ನು ಅರಣ್ಯ ಇಲಾಖೆಯವರು ಸ್ಥಳಾಂತರ ಮಾಡಿದ್ದಾರೆ ಎಂದು ಆರೋಪಿಸಿ ಡಿ.ಬಿ.ಕುಪ್ಪೆ ಅರಣ್ಯ ಇಲಾಖೆಯ ಎದುರು ರಸ್ತೆ ನಡೆಸಿ ಡಿ.ಬಿ.ಕುಪ್ಪೆ ಮತ್ತು ಎನ್.ಬೆಳತ್ತೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಶಿವಕುಮಾರ್, ರಮೇಶ್, ಪುಟ್ಟಣ್ಣ, ಸುಬ್ರಮಣ್ಯ ಹಾಗೂ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಮಾಸ್ತಯ್ಯ ರವರ ನೇತೃತ್ವದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಕುಟುಂಬಸ್ಥರು ಸಹ ಆಸ್ಪತ್ರೆಗೆ ತೆರಳದೆ ಪ್ರತಿಭಟಿಸಿದರು. ಬಳಿಕ ಮೇಟಿಕುಪ್ಪೆ ವಲಯದ ಎಸಿಎಫ್ ರಂಗಸ್ವಾಮಿಯವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೋಲಿಸಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟು ಮೃತದೇಹದ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.
ಇದೇ ವೇಳೆ ಮಾತನಾಡಿದ ಎಸಿಎಫ್ ರಂಗಸ್ವಾಮಿರವರು, ಬಳ್ಳೆಯ ಹಾಡಿಯ ಸಮೀಪವೇ ಯುವಕ ಸೌದೆಯನ್ನು ಸಂಗ್ರಹಿಸುವಾಗ ಈ ಅವಘಡ ಸಂಭವಿಸಿದ್ದು, ಕುಟುಂಬಕ್ಕೆ ಸರ್ಕಾರದಿಂದ ಬರುವ ೧೫ ಲಕ್ಷರೂ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಈಗ ಪರಿಹಾರದಲ್ಲಿನ ೨ ಲಕ್ಷದ ೫೦ ಸಾವಿರದ ಪರಿಹಾರದ ಚೆಕ್ ನೀಡಲಾಗಿದೆ ಎಂದರು.
ಹಿಂದೆಯೂ ಇಂತಹದ್ದೇ ಘಟನೆ: ೨೦೧೯ರ ಜನವರಿಯಲ್ಲಿ ಡಿ.ಬಿ.ಕುಪ್ಪೆ ಸಮೀಪವೇ ತಿಂಗಳ ಅಂತರದಲ್ಲಿ ಇಬ್ಬರನ್ನು ಹುಲಿ ಬಲಿಪಡೆದಿತ್ತು. ಬಹಿರ್ದೆಸೆಗೆ ಹೋಗಿದ್ದ ಹುಲುಮಟ್ಟಲು ಗ್ರಾಮದ ಚಿನ್ನಪ್ಪ ಎಂಬುವವರ ಮೇಲೆ ಹುಲಿ ದಾಳಿ ನಡೆಸಿ ಬಲಿಪಡೆದಿತ್ತು. ಇದಾದ ಕೆಲ ದಿನಗಳ ಬಳಿಕ ಮತ್ತೇ ಮಧು ಎಂಬುವವರು ಹುಲಿದಾಳಿಗೆ ಬಲಿಯಾಗಿದ್ದರು.
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…