ಜಿಲ್ಲೆಗಳು

ಆಂದೋಲನ ಸಂದರ್ಶನ : ‘ಯಶಸ್ವಿನಿ’ಗೆ ಅರ್ಹರ ನೋಂದಣಿಗೆ ಸೂಚನೆ

ಜಿಲ್ಲೆಯಲ್ಲಿ ಒಟ್ಟು ೮೨೫ ಸಹಕಾರ ಸಂಘಗಳು; ನವೆಂಬರ್ ೧ರಿಂದ ನೋಂದಣಿ ಶುರು
ಪ್ರಸಾದ್ ಲಕ್ಕೂರು
ಚಾಮರಾಜನಗರ : ಗ್ರಾಮೀಣ ಜನರ ಪಾಲಿಗೆ ವರದಾನವಾಗಿದ್ದ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರವು ನವೆಂಬರ್ 1 ರಂದು ಜಾರಿಗೊಳಿಸುತ್ತಿದೆ. ೨೦೧೮ರ ಮೇ 31 ರಂದು ಸ್ಥಗಿತಗೊಂಡಿದ್ದ ಈ ಯೋಜನೆಯನ್ನು ರೈತರು, ಸಹಕಾರ ಸಂಘಗಳ ಭಾರಿ ಬೇಡಿಕೆಯಂತೆ ಪುನಾರಂಭ ಮಾಡುತ್ತಿದೆ.
೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಘೋಷಿಸಿ ೩೦೦ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ನವೆಂಬರ್ ೧ ರಿಂದ ನೋಂದಣಿ ಆರಂಭವಾಗಲಿದೆ. ಜಿಲ್ಲೆಯಲ್ಲಿ ಈ ಬಗ್ಗೆ ತಯಾರಿ ಹೇಗೆ ಸೇರಿದಂತೆ ಇತರೆ ವಿಚಾರಗಳ ಕುರಿತು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಸಿ.ಜ್ಯೋತಿ ಅರಸ್ ಅವರು ‘ಆಂದೋಲನ’ ನಡೆಸಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಶ್ನೆ : ಜಿಲ್ಲೆಯಲ್ಲಿ ಎಷ್ಟು ಸಹಕಾರ ಸಂಘಗಳಿವೆ. ಇವುಗಳಲ್ಲದೆ ಇನ್ನೂ ಯಾರು ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ ?
ಉತ್ತರ: ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ, ಪಿಎಲ್‌ಡಿ, ಪತ್ತಿನ ಸಹಕಾರ, ಲ್ಯಾಂಪ್ಸ್, ಮಹಿಳಾ ಮತ್ತು ಪುರುಷ ಸಹಕಾರ ಸಂಘಟನೆಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಸೇರಿದಂತೆ ಸೇರಿದಂತೆ ಸುಮಾರು ೮೨೫ ಸಹಕಾರ ಸಂಘಗಳಿವೆ. ಇವುಗಳಲ್ಲದೆ ಬೀಡಿ, ಬೀಡಿ ಕಾರ್ಮಿಕರು, ಮೀನುಗಾರರು, ನೇಕಾರರ ಸಹಕಾರ ಸಂಘಟನೆಗಳು ಇವೆ.

ಪ್ರಶ್ನೆ : ಯಶಸ್ವಿನಿ ಯೋಜನೆಗೆ ನೋಂದಣಿ ಹೇಗೆ ?
ಉತ್ತರ : ಸಹಕಾರ ಸಂಘಗಳ ಸದಸ್ಯರಾಗಿ ೩ ತಿಂಗಳಾಗಿರಬೇಕು. ಗ್ರಾಮೀಣ ಭಾಗದಲ್ಲಿ ೪ ಜನರಿರುವ ರೈತ ಕುಟುಂಬಕ್ಕೆ ೫೦೦ ರೂ.ವಂತಿಕೆ ಹಾಗೂ ೪ ಕ್ಕಿಂತ ಹೆಚ್ಚು ಜನರಿದ್ದರೆ ಹೆಚ್ಚುವರಿಯಾಗಿ ೧೦೦ ರೂ. ಪಡೆಯಲಾಗುವುದು. ನಗರದ ಪ್ರದೇಶದಲ್ಲಿ ೪ ಜನರಿರುವ ರೈತ ಕುಟುಂಬದದಿಂದ ೧ ಸಾವಿರ ರೂ. ವಂತಿಕೆ ಮತ್ತು ಹೆಚ್ಚುವರಿಯಾಗಿದ್ದರೆ ೨೦೦ ರೂ. ವಂತಿಕೆ ಪಡೆದು ನೋಂದಣಿ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತ ನೋಂದಣಿ ಇರುತ್ತದೆ. ಸರ್ಕಾರವೇ ಇವರಿಗೆ ವಂತಿಕೆ ಭರಿಸಲಿದೆ.

ಪ್ರಶ್ನೆ: ಯಾವ ಬಗೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು?
ಉತ್ತರ: ೨೦೧೮ಕ್ಕೂ ಮೊದಲು ಇದ್ದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಯೋಜನೆಯಡಿ ಶಸ್ತ್ರ ಚಿಕಿತ್ಸೆಗೆ ಮಾತ್ರ ಅವಕಾಶವಿದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯಲು ಇಚ್ಛಿಸಿದರೆ ಎಪಿಎಲ್ ಚೀಟಿದಾರರಿಗೆ ಶೇ.೨೦ ರಷ್ಟು, ಬಿಪಿಎಲ್‌ನವರಿಗೆ ಶೇ.೩೦ ರಷ್ಟು, ಅಂತ್ಯೋದಯದವರಿಗೆ ಶೇ.೪೦ ರಷ್ಟು ಚಿಕಿತ್ಸೆಯಲ್ಲಿ ರಿಯಾಯಿತಿ ದೊರಕಲಿದೆ. ಯಶಸ್ವಿನಿ ಕಾರ್ಡ್ ಮಾಡಿಸಿದ ೧೫ ದಿನಗಳ ನಂತರ ಸಾಮಾನ್ಯ ವಾರ್ಡ್‌ಗಳಲ್ಲಿ ಮಾತ್ರ ಆರೋಗ್ಯ ಸೇವೆ ದೊಕಲಿದೆ.

ಪ್ರಶ್ನೆ : ಜಿಲ್ಲೆಯಲ್ಲಿ ಯೋಜನೆಯ ನೋಂದಣಿಗೆ ತಯಾರಿ ಹೇಗೆ ಮಾಡಿಕೊಂಡಿದ್ದೀರಿ ?
ಉತ್ತರ: ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಆಡಳಿತ ಮಂಡಳಿಗಳಿಗೆ ಈ ಕುರಿತು ಈಗಾಗಲೇ ಸೂಚನೆ ನೀಡಲಾಗಿದೆ. ಎಷ್ಟು ಜನರು ಯೋಜನೆಗೆ ಅರ್ಹರು ಎಂಬ ಪಟ್ಟಿ ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಯೋಜನೆ ಬಗ್ಗೆ ಪ್ರಚಾರ ಮಾಡಿ ಅರಿವು ಮೂಡಿಸುವಂತೆ ನಿರ್ದೇಶನ ಮಾಡಲಾಗಿದೆ.

ಪ್ರಶ್ನೆ : ಯಾವ ಬಗೆಯ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯ?
ಉತ್ತರ : ಯಶಸ್ವಿನಿ ಟ್ರಸ್ಟ್ ಮೂಲಕ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಸುಮಾರು ೧೬೫೦ ಕಾಯಿಲೆಗಳಿಗೆ ನಗದು ರಹಿತ ಚಿಕಿತ್ಸೆ ಸಿಗಲಿದೆ. ಕಿಮೋ ಮತ್ತು ರೇಡಿಯೋ ಥೆರಪಿಗಳ, ಹಲ್ಲಿನ ಶಸ್ತ್ರ ಚಿಕಿತ್ಸೆಗಳು, ಜಾಯಿಂಟ್ ಬದಲಾವಣೆ, ಸುಟ್ಟ ಗಾಯಗಳು, ಸ್ಟಂಟ್ ಅಳವಡಿಕೆ, ಚರ್ಮದ ಗ್ರಾಫ್ಟಿಂಗ್‌ಗಳಿಗೆ ಯೋಜನೆಯಡಿ ಚಿಕಿತ್ಸೆ ಸಿಗುವುದಿಲ್ಲ.

andolanait

Recent Posts

ಓದುಗರ ಪತ್ರ:  ಹೀಲಿಯಂ ಗ್ಯಾಸ್ ಬಲೂನ್ ಮಾರಾಟ ನಿಷೇಧಿಸಿ

ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…

16 mins ago

ಓದುಗರ ಪತ್ರ: ಯಥಾ ರಾಜ.. ತಥಾ ಅಧಿಕಾರಿ

‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…

32 mins ago

ಸೇವಾ ಕೈಂಕರ್ಯದ ಪ್ರತಿರೂಪ ಚೈತನ್ಯ ಚಾರಿಟಬಲ್ ಟ್ರಸ್ಟ್‌

ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…

55 mins ago

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…

3 hours ago

ಹಲವು ಹೊಸ ದಾಖಲೆಗಳಿಗೆ ಷರಾ ಬರೆದ 2025

ಗಿರೀಶ್‌ ಹುಣಸೂರು  ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…

3 hours ago

ಸಫಾರಿ ನಿರ್ಬಂಧ: ಮೈಸೂರಿನತ್ತ ಪ್ರವಾಸಿಗರ ದಂಡು

ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…

3 hours ago