ಜಿಲ್ಲೆಗಳು

ಆಂದೋಲನ ಸಂದರ್ಶನ : ವರ್ಷದಲ್ಲೇ ಚಂದ್ರಯಾನ 3 ಉಡಾವಣೆಗೆ ಸಿದ್ಧತೆ

ಭಾರತವೂ ಸಣ್ಣ ಸಣ್ಣ ಉಪಗ್ರಹ ಉಡಾವಣೆಗಳ ಸಾಮರ್ಥ್ಯ ಹೊಂದಬೇಕಿದೆ:ಅಣ್ಣಾದೊರೈ ಸಲಹೆ

ರವಿಕೋಟಿ/ ಕೆ.ಬಿ.ರಮೇಶ ನಾಯಕ

ಮೈಸೂರು: ಈಗಾಗಲೇ ಚಂದ್ರಯಾನ ೧,೨ ಪೂರ್ಣಗೊಳಿಸಿದ್ದೇವೆ. ಚಂದ್ರಯಾನ ೩ಕ್ಕೂ ಸಿದ್ದತೆಗಳು ನಡೆಯುತ್ತಿದ್ದು, ಈ ವರ್ಷದ ಜೂನ್ ಹೊತ್ತಿಗೆ ಉಡಾವಣೆಯಾಗಲಿದೆ. ಭಾರತವೂ ಬಾಹ್ಯಾಕಾಶ ವಲಯದಲ್ಲಿ ಗಣನೀಯ ಸಾಧನೆ ಮಾಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿಯಾಗುವ ವಿಶ್ವಾಸವಿದೆ.

ಮೂರೂವರೆ ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆ( ಇಸ್ರೋ)ದಲ್ಲಿ ಕೆಲಸ ಮಾಡಿರುವ ಇಸ್ರೋ ಮಾಜಿ ವಿಜ್ಞಾನಿ, ಚಂದ್ರಯಾನ ೧ ಮತ್ತು ೨ ರ ಯೋಜನಾ ನಿರ್ದೇಶಕ ಡಾ.ಮೈಲಸ್ವಾಮಿ ಅಣ್ಣಾದೊರೈ ಹೇಳಿದ ನುಡಿಗಳಿವು.

ಮೈಸೂರಿನ ಎನ್‌ಐಇ ಸಂಸ್ಥೆ ಆಯೋಜಿಸಿದ್ದ ಕಾರ‌್ಯಕ್ರಮದಲ್ಲಿ ಭಾಗವಹಿಸಲೆಂದು ಆಗಮಿಸಿದ್ದ ಸಂದರ್ಭದಲ್ಲಿ ಆಂದೋಲನಕ್ಕೆ ವಿಶೇಷ ಸಂದರ್ಶನ ನೀಡಿ ಬಾಹ್ಯಾಕಾಶ ಕ್ಷೇತ್ರದೊಂದಿಗಿನ ನಂಟು, ಅದರ ಬದಲಾವಣೆಗಳು, ಜಾಗತಿಕ ಸ್ಪರ್ಧೆ, ಚಂದ್ರಯಾನ ಸಹಿತ ಹಲವು ವಿಷಯಗಳ ಕುರಿತು ಮಾತನಾಡಿದರು.

ಮುಂದುವರಿದ ರಾಷ್ಟ್ರಗಳಂತೆ ಭಾರತದಲ್ಲೂ ಸಣ್ಣ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಬೇಕು. ಕಡಿಮೆ ಖರ್ಚಿನಲ್ಲಿ ಮತ್ತು ವೇಗವಾಗಿ ತಲುಪುವಂತಹ ಉಪಗ್ರಹಗಳನ್ನು ಉಡಾವಣೆ ಮಾಡಿದಷ್ಟು ದೇಶ ಮತ್ತಷ್ಟು ಮುಂದುವರಿಯಲು ಕಾರಣವಾಗುತ್ತದೆ. ಭವಿಷ್ಯದಲ್ಲಿ ನಾಸಾದಷ್ಟು ಸಾಮರ್ಥ್ಯವನ್ನು ಇಸ್ರೋ ಹೊಂದುವ ವಿಶ್ವಾಸವಿದೆ ಎನ್ನುವುದು ಅವರ ಖಚಿತ ಅಭಿಪ್ರಾಯ.

ಆಂದೋಲನ: ೪೦ ವರ್ಷಗಳ ಕಾಲ ಚಂದ್ರಯಾನದ ಬಗ್ಗೆ ಕೆಲಸ ಮಾಡಿದ್ದೀರಾ, ಯಾವ ರೀತಿ ಸವಾಲು ಇತ್ತು?ಈಗ ಹೋಗಿರುವುದಕ್ಕೆ ಏನನ್ನಿಸುತ್ತಿದೆ ?

ಅಣ್ಣಾದೊರೈ: ಹೌದು, ನೀವು ಹೇಳುವ ಮಾತಿನಂತೆ ೪೦ ವರ್ಷಗಳ ಕಾಲ ಕೆಲಸ ಮಾಡಿದ್ದು ಖುಷಿ ತಂದಿದೆ. ಸವಾಲಿನಲ್ಲಿ ಕೆಲಸ ಮಾಡಿದ್ದರಿದ್ದರಿಂದ ಈಗ ಅ ಹಂತಕ್ಕೆ ಬಂದಿದ್ದೇವೆ. ಈಗಾಗಲೇ ಚಂದ್ರಯಾನ ೧, ೨ ಕೈಗೊಂಡಿದ್ದೇವೆ. ಚಂದ್ರಯಾನ ೩ಕ್ಕೂ ಸಿದ್ದತೆಗಳು ಆಗಿವೆ. ಕಡಿಮೆ ಅವಧಿಯಲ್ಲಿ ಚಂದ್ರಯಾನದ ಆನ್ವೇಷಣೆ ನಡೆಸಲಾಗಿದೆ. ಅಲ್ಲಿ ಏನು ಸಿಗುತ್ತಿದೆ ಎಂಬುದನ್ನು ಮುಂದೆ ನೋಡೋಣ.

ಆಂದೋಲನ: ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಪ್ರವೇಶ ಅವಶ್ಯಕತೆ ಇದೆಯೇ

ಅಣ್ಣಾದೊರೈ: ಬಾಹ್ಯಾಕಾಶಕ್ಕೂ ಖಾಸಗಿಯಾಗಿ ಪ್ರವೇಶ ಆಗಬೇಕು. ಅದರಿಂದ ಪೈಪೋಟಿ ಉಂಟಾಗಲಿದೆ. ಸ್ಪರ್ಧಾತ್ಮಕತೆ ಬರಲಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಬಿಟ್ಟು ಹೋದವರ ಜಾಗಕ್ಕೆ ಮತ್ತೊಬ್ಬರನ್ನು ತಂದು ಕೂರಿಸಬಹುದು.ಆದರೆ, ಆವರ ಅನುಭವಗಳನ್ನು ತರಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಅನುಭವ ಮುಖ್ಯ. ಅಂತಹವರನ್ನು ಉಳಿಸಿಕೊಳ್ಳಬೇಕು. ೬೦ ವರ್ಷದ ನಂತರವೂ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಮುಂದುವರಿಸಬೇಕಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಬೇಕು ಎಂದರೆ ಪರಿಣಿತರು ಕೂಡ ಬೇಕು. ಬಾಹ್ಯಾಕಾಶ ಕ್ಷೇತ್ರದಲ್ಲೂ ಬೆಳವಣಿಗೆ ಮತ್ತು ಬದಲಾವಣೆ ಆಗಬೇಕು.

ಆಂದೋಲನ: ಬಾಹ್ಯಕಾಶ ಕ್ಷೇತ್ರದಲ್ಲಿ ಏನು ಫೋಕಸ್ ಮಾಡಬೇಕಿದೆ

ಅಣ್ಣಾದೊರೈ: ದೇಶದಲ್ಲಿ ಉಪಗ್ರಹ ಉಡಾವಣೆಗಳು ನಡೆಯುತ್ತಿವೆ. ಆದರೆ, ಮತ್ತಷ್ಟು ವೇಗವಾಗಿ ಉಡಾವಣೆಗಳು ಆಗಬೇಕು. ಕಡಿಮೆ ಖರ್ಚಿನಲ್ಲಿ ಮತ್ತು ದೊಡ್ಡಪ್ರಮಾಣದಲ್ಲಿ ನಡೆಯಬೇಕು. ನಮ್ಮಲ್ಲಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಂದ್ರಯಾನ ಮಾಡಿದ್ದೇವೆ. ಮಾಡುತ್ತಿದ್ದೇವೆ. ನಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚುವ ಕೆಲಸ ಆಗಲೇಬೇಕಿದೆ. ಆಗ ನಾವು ಈ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಮುಂದುವರಿದಿದ್ದೇವೆ ಎಂಬುದು ಗೊತ್ತಾಗುತ್ತದೆ.

ಆಂದೋಲನ: ನಮ್ಮಲ್ಲಿರುವ ಬುದ್ಧಿವಂತಿಕೆ ಬಳಸಿಕೊಳ್ಳಲಾಗುತ್ತಿದೆಯೇ

ಅಣ್ಣಾದೊರೈ: ನಮ್ಮಲ್ಲಿರುವ ಬುದ್ಧಿವಂತಿಕೆ,ಜ್ಞಾನ,ಮೆದುಳಿನ ಸಾಮರ್ಥ್ಯವನ್ನು ನಾವು ಉಪಯೋಗಿಸಿಕೊಳ್ಳಬೇಕು. ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಆಕರ್ಷಣೀಯವಾಗಿ ಮಾಡಬೇಕು. ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಂಡರೆ ಅದರಿಂದ ಸಂಪನ್ಮೂಲ ಬರಲಿದೆ. ಜೊತೆಗೆ ಉದ್ಯೋಗ ಸೃಷ್ಟಿಗೂ ಅವಕಾಶ ದೊರೆಯಲಿದೆ. ಅಮೆರಿಕಾದ ನಾಸಾ ಜಗತ್ತಿನಲ್ಲೇ ಗಮನ ಸೆಳೆದಂತೆ ಮುಂದೆ ಇಸ್ರೋ ಕೂಡ ಅಷ್ಟೇ ಸಾಮರ್ಥ್ಯವನ್ನು ಹೊಂದಬಹುದು. ಅದೇ ರೀತಿ ಆಗಬಹುದು ಎನ್ನುವ ನಿರೀಕ್ಷೆ ನಮ್ಮಲ್ಲಿದೆ.

ಆಂದೋಲನ: ಸಂಶೋಧನೆಗಳು ಅಷ್ಟಾಗಿ ಆಗುತ್ತಿಲ್ಲ ಎನ್ನಿಸುತ್ತಿಲ್ಲವೇ ?

ಅಣ್ಣಾದೊರೈ: ಸಂಶೋಧನೆಗಳು ಆಗುತ್ತಿವೆ. ನಾವು ಮಾಡುವ ಸಂಶೋಧನೆಗಳು ಜಗತ್ತಿಗೆ ತೋರಿಸುವ ಮಟ್ಟಿಗೆ ಆಗಬೇಕು ಎಂದರೆ ಅದಕ್ಕೆ ಸಮಯಬೇಕು. ಒಂದು ಉಪಗ್ರಹಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳು ಬೇಕಾಯಿತು. ಪ್ರಯತ್ನ ಪಡಬೇಕು.ಶ್ರಮ ಹಾಕುತ್ತಲೇ ಇರಬೇಕು. ನೀತಿ ನಿರೂಪಕರು ಹೇಳುವಂತೆ ಕಾಲಮಿತಿಯೊಳಗೆ ಮಾಡುವುದಲ್ಲ. ಆಡಳಿತಗಾರರು ಒಂದು ವರ್ಷದ್ದನ್ನು ಆರು ತಿಂಗಳಲ್ಲಿ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಅದಕ್ಕೆ ನಿಗದಿತ ಸಮಯ ಬೇಕಾಗುತ್ತದೆ.

andolanait

Recent Posts

ಜೂಜಾಟ, ಮದ್ಯ ಅಕ್ರಮ ಮಾರಾಟಕ್ಕೆ ಲಕ್ಷ  ರೂ. ದಂಡ!

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು, ವಯಸ್ಕರು ಮದ್ಯ ವ್ಯಸನ ಹಾಗೂ ಜೂಜಾಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದ್ದು ಹಾಗೂ ಅಶಾಂತಿಗೆ…

1 min ago

ರೋಹಿತ್‌ ಬ್ಯಾಟಿಂಗ್‌ ಅಬ್ಬರ : ಭರ್ಜರಿ ಗೆಲುವು ದಾಖಲಿಸಿದ ಮುಂಬೈ

ಮುಂಬೈ : 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್‌ ಹಾಕಿದ ಮುಂಬೈ ಇಂಡಿಯನ್ಸ್‌ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ…

7 hours ago

ಷೇರುಪೇಟೆ ವಹಿವಾಟಿನಲ್ಲಿ ಇಳಿಕೆ ; ಟಾಪ್-10 ಕಂಪನಿಗಳಲ್ಲಿ 7ಕ್ಕೆ ಭಾರೀ ನಷ್ಟ

ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…

10 hours ago

ಎಲ್‌ಪಿಜಿ ಹೊತ್ತ ಮತ್ತೆರಡು ಹಡಗು ಭಾರತದತ್ತ

ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…

10 hours ago

ಮೇಲುಕೋಟೆ ಜಾತ್ರೆ | ವೈರಮುಡಿ ಕಿರೀಟಧಾರಣಾ ಮಹೋತ್ಸವದಲ್ಲಿ 2 ಲಕ್ಷ ಜನರು ಭಾಗಿ

ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…

11 hours ago

ಅಸ್ಸಾಂ ಚುನಾವಣೆ | ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…

11 hours ago