ಜಿಲ್ಲೆಗಳು

ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಶಾಲೆಗಳ ಅಭಿವೃದ್ಧಿ

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಆಯ್ಕೆಯಾಗಿದ್ದ  ಕೊಡಗಿನ 16 ಶಾಲೆಗಳು

ಪುನೀತ್ ಮಡಿಕೇರಿ
ಮಡಿಕೇರಿ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆಯ್ಕೆಯಾಗಿದ್ದ ಕೊಡಗು ಜಿಲ್ಲೆಯ ೧೬ ಶಾಲೆಗಳು ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಅಭಿವೃದ್ಧಿ ಕಂಡಿದ್ದು, ಶಾಲಾ ವಾತಾವರಣ ಮತ್ತಷ್ಟು ಕಲಿಕಾ ಸ್ನೇಹಿಯಾಗಿ ಬದಲಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದ್ದು, ಇದೇ ನಿಟ್ಟಿನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೂ ಸರ್ಕಾರ ಯೋಜನೆ ಹಮ್ಮಿಕೊಂಡಿತ್ತು. ಇದರಲ್ಲಿ ಜಿಲ್ಲೆಯ ೧೬ ಶಾಲೆಗಳು ಆಯ್ಕೆಯಾಗಿದ್ದವು. ಪ್ರಸ್ತುತ ೧೨ ಶಾಲೆಗಳಲ್ಲಿ ನಾನಾ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು, ನಾಲ್ಕು ಶಾಲೆಗಳಲ್ಲಿ ಕೊನೆಯ ಹಂತದ ನಾನಾ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.


ಶಾಲಾ-ಕಾಲೇಜುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳನ್ನು ಸಮುದಾಯ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ತಾಲ್ಲೂಕಿನ ೩ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ೪ ಶಾಲೆಗಳು ಆಯ್ಕೆಯಾಗಿದ್ದವು. ತಲಾ ೧೦ ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಬೇಕಿರುವ ಸುಸಜ್ಜಿತ ಕಟ್ಟಡ, ಪ್ರೋಂಗಾಲುಂ, ಗ್ರಂಥಾಲುಯ, ಶೌಚಾಲಯ ಮತ್ತಿತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಮೃತ ಶಾಲಾ ಸೌಲಭ್ಯ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.


ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳಿರುವ ಶಾಲೆ, ಆಧುನಿಕ ಸೌಲಭ್ಯಗಳಿಂದ ವಂಚಿತವಾಗಿರುವ ಶಾಲೆಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಈ ಯೋಜನೆಗೆ ಶಾಲೆಗಳನ್ನು ಆಯ್ಕೆ ವಾಡಲಾಗಿತ್ತು. ಜಿಲ್ಲೆಗೆ ಸಂಬಂಧಿಸಿದಂತೆ ಹೊದವಾಡದ ಆರ್‌ಎಂಎಸ್‌ಎ ಉನ್ನತೀಕರಣ ಪ್ರೌಢಶಾಲೆ, ಸಂಪಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಡಂಗದ ಸ.ಹಿ.ಪ್ರಾ. ಶಾಲೆ, ವಾದಾಪುರದ ಸ.ಪ್ರೌ ಶಾಲೆ, ದೊಡ್ಡಮಳ್ತೆಯ ಸ.ಹಿ.ಪ್ರಾ ಶಾಲೆ, ಕೊಡ್ಲಿಪೇಟೆಯ ಸ.ವಾ.ಪ್ರಾ ಶಾಲೆ, ವಾಲ್ನೂರು ತ್ಯಾಗತ್ತೂರಿನ ಸ.ಹಿ.ಪ್ರಾ ಶಾಲೆ, ಹೆಬ್ಬಾಲೆಯಲ್ಲಿ ಸ.ವಾ.ಪ್ರಾ.ಶಾಲೆ, ಸುಂಟಿಕೊಪ್ಪದ ಸ.ವಾ.ಪ್ರಾ.ಶಾಲೆ, ಹೆಗ್ಗಳದ ಸ.ಹಿ.ಪ್ರಾ.ಶಾಲೆ, ಅಮ್ಮತ್ತಿಯ ಸ.ವಾ.ಪ್ರಾ.ಶಾಲೆ, ಪಾಲಿಬೆಟ್ಟದ ಸ.ವಾ.ಪ್ರಾ.ಶಾಲೆ, ಟಿ.ಶೆಟ್ಟಿಗೇರಿಯ ಸ.ವಾ.ಪ್ರಾ.ಶಾಲೆ, ತಿತಿಮತಿಯ ಸ.ಹಿ.ಪ್ರಾ ಶಾಲೆ, ಗೋಣಿಕೊಪ್ಪ ಸ.ವಾ.ಪ್ರಾ ಶಾಲೆ ಮತ್ತು ಕುಟ್ಟದ ಸ.ಹಿ.ಪ್ರಾ ಶಾಲೆ ಆಯ್ಕೆಯಾಗಿತ್ತು. ಸದ್ಯ ವಾದಾಪುರದ ಸ.ಪ್ರೌ ಶಾಲೆ, ಕೊಡ್ಲಿಪೇಟೆ ಸ.ವಾ.ಪ್ರಾ ಶಾಲೆ, ಕಡಂಗದ ಸ.ಹಿ.ಪ್ರಾ. ಶಾಲೆ ಹಾಗೂ ಕುಟ್ಟದ ಸ.ಹಿ.ಪ್ರಾ ಶಾಲೆಯ ಪ್ರಗತಿ ಕಾರ್ಯ ಅಂತಿಮ ಹಂತದಲ್ಲಿದೆ.
ಯೋಜನೆಗೆ ಆಯ್ಕೆಯಾದ ಶಾಲೆಗಳು ಆದ್ಯತೆ ಮೇರೆಗೆ ಡಿಜಿಟಲ್ ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ್ ತರಗತಿ, ಕ್ರೀಡಾ ಸಾಮಗ್ರಿ, ನೀರಿನ ಸೌಲಭ್ಯ, ಶೌಚಾಲಯ, ಶಾಲಾ ಮೇಲ್ಛಾವಣಿ, ಶಾಲಾ ಉಪೋಂಗಕ್ಕೆ ಬೋರ್‌ವೆಲ್ ಕೊರೆಸುವುದು, ಕಂಪ್ಯೂಟರ್, ಲ್ಯಾಪ್‌ಟಾಪ್, ಪ್ರೋಜೆಕ್ಟರ್, ಪ್ರಿಂಟರ್, ಲ್ಯಾಬ್ ಮೆಟಿರಿಯಲ್, ಗ್ರೀನ್ ಬೋರ್ಡ್, ವೈಟ್ ವಾರ್ಕರ್ ಬೋರ್ಡ್, ವಾಟರ್ ಫಿಲ್ಟರ್, ಮೈಕ್ ಸೆಟ್, ಹೈಟೆಕ್ ಶೌಚಾಲಯ, 100 ಮೀ. ಕಾಂಪೌಂಡ್, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಗ್ರಂಥಾಲಯಕ್ಕೆ ಬೇಕಾದ ಕಪಾಟುಗಳು, ೧೦ನೇ ತರಗತಿ ಕೊಠಡಿಗಳಿಗೆ ಸುಣ್ಣ-ಬಣ್ಣ, ನೆಲದ ಹಾಸು, ಪ್ರಯೋಗಾಲಕ್ಕೆ ಸೀಲಿಂಗ್, ಶಾಲೆಯ ಮುಂಭಾಗದ ಕಟ್ಟಡಗಳಿಗೆ ಸುಣ್ಣ-ಬಣ್ಣ, ಗ್ರಂಥಾಲಯಗಳಿಗೆ ಕುರ್ಚಿ, ಅಲ್ಮೇರಾ, ಮೇಜು, ರ್ಯಾಕ್, ಕೊಠಡಿಗಳಿಗೆ ಟೈಲ್ಸ್‌ಗಳನ್ನು ಅಳವಡಿಸಿಕೊಂಡಿದೆ.

andolanait

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

4 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

5 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

5 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

5 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

5 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

5 hours ago