ಜಿಲ್ಲೆಗಳು

ಅಂಬಳೆಯಲ್ಲಿ ವಿಜೃಂಭಣೆಯ ಚಾಮುಂಡೇಶ್ವರಿ ಜಾತ್ರೆ

ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಶ್ರೀಚಾಮುಂಡೇಶ್ವರಿ ಅಮ್ಮ ನವರ ದೊಡ್ಡ ಹಬ್ಬ ಹಾಗೂ ಜಾತ್ರೆ ವಿಜೃಂಭಣೆಯಿಂದ ನಡೆಯಿತು.

ಒಂದು ತಿಂಗಳ ಕಾಲ ನಡೆಯುವ ಈ ಉತ್ಸವದ ಪ್ರಮುಖ ಭಾಗವಾದ ರಕ್ತ ಬೀಜಾಸುರ ಸಂಹಾರ ಪ್ರಕ್ರಿಯೆ ನಡೆ ಯಿತು.ಮುಂಜಾನೆಯಿಂದಲೇ ಗ್ರಾಮದ ಹೃದಯ ಭಾಗದಲ್ಲಿರುವ ಚಾಮುಂ ಡೇಶ್ವರಿ ಅಮ್ಮನವರ ಕೇಲು ಮನೆಯಲ್ಲಿ ವಿಶೇಷ ಪೂಜೆ ನಡೆಯಿತು.ಅಲ್ಲಿಂದ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿ ಯನ್ನು ಹುಲಿವಾಹನದಲ್ಲಿ ಕೂರಿಸಿ ಗ್ರಾಮದ ಸುವರ್ಣವತಿ ನದಿಯಲ್ಲಿ ಹೊಸ ನೀರು ತರಲಾಯಿತು. ಬಳಿಕ ಸತ್ತಿಗೆ-ಸೂರಿಪಾನಿ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಬಾಳೆಗೊನೆ ಕತ್ತರಿಸುವ ವಿಧಿ: ಮಹಿಷಾ ಸುರನ ಸಹೋದರ ರಕ್ತ ಬೀಜಾಸುರ ನನ್ನು ಚಾಮುಂಡೇಶ್ವರಿ ಸಪ್ತಮಾತೃಕೆಯರ ನೆರವಿನೊಂದಿಗೆ ಅಂಬಳೆ ಗ್ರಾಮದಲ್ಲಿ ಬಂದು ಕೊಂದಳು ಎಂಬ ನಂಬಿಕೆ ಇದೆ. ಇದರ ದ್ಯೋತಕವಾಗಿ ಇಲ್ಲಿ ಹಬ್ಬ ಆಚರಿಸುವ ವಾಡಿಕೆ ಇದೆ. ಅನಾದಿ ಕಾಲದಿಂದಲೂ ಈ ಪದ್ಧತಿ ರೂಢಿಯ ಲ್ಲಿದೆ. ಅದರಂತೆ ಚಾಮುಂಡೇ ಶ್ವರಿ ಮತ್ತು ರಕ್ತಬೀಜಾ ಸುರರ ವೇಷಧಾರಿಗಳು ರಂಗಸ್ಥಳದಲ್ಲಿ ಮೂರು ಬಾರಿ ಸುತ್ತಿದ ಬಳಿಕ ಕತ್ತಿ ಯಿಂದ ಬಾಳೆಗೊನೆ ಯನ್ನು ಒಂದೇ ಏಟಿಗೆ ಕತ್ತರಿಸುವ ಸಂಪ್ರದಾಯ ನೆರವೇರಿತು.
ವಿವಿಧ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ, ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತವರು ಶೂಲದಯ್ಯ ದೇವರಿಗೆ ತಲೆ ಮೇಲೆ ಎಳನೀರು ಹೊತ್ತು ಹರಕೆ ತೀರಿಸಿದರು. ಈ ದೊಡ್ಡ ಹಬ್ಬ ಜಾತ್ರೆಗೆ ವಿವಿಧ ಗ್ರಾಮಗಳ ಭಕ್ತರು ಬಂದು ದರ್ಶನ ಪಡೆದರು.

andolanait

Recent Posts

ಮತ್ತೆ ಬೆದರಿಕೆ ಒಡ್ಡಿದ ಟ್ರಂಪ್‌ ; ಕ್ಯಾರೆ ಎನ್ನದ ಇರಾನ್‌

ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…

23 mins ago

ಶರಣ್ಯ ಸುರಕ್ಷಿತ ; ಅಧಿಕಾರಿ, ಸಿಬ್ಬಂದಿ, ಬುಡಕಟ್ಟು ಜನರಿಗೆ ಅಭಿನಂದನೆ ಸಲ್ಲಿಸಿದ ಖಂಡ್ರೆ

ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…

46 mins ago

KSOU | ಕುಲಸಚಿವೆಯಾಗಿ ಕೆಎಎಸ್‌ ಅಧಿಕಾರಿ ಕುಸುಮಾಕುಮಾರಿ ನೇಮಕ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…

1 hour ago

ಏ.9ರವರೆಗೆ ರಾಜ್ಯಾದ್ಯಂತ ಯಲ್ಲೋ ಅಲರ್ಟ್, ಮಳೆ ಮುನ್ಸೂಚನೆ

ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…

1 hour ago

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…

2 hours ago

ಅಹಿಂದ ಹತ್ತಿಕ್ಕುತ್ತಿರುವ ಸಿದ್ದರಾಮಯ್ಯ : ಕುಮಾರಸ್ವಾಮಿ ಆರೋಪ

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…

2 hours ago